ಮುಗಿಲೆತ್ತರಕ್ಕೆ ಚಿಮ್ಮುತ್ತ
ಕಡಲಿನಾಳಕ್ಕೆ ಬಿಮ್ಮುತ್ತ
ಶೌರ್ಯ, ಶಾಂತಿ, ಪ್ರೀತಿ
ಸಮೃದ್ಧಿಯ ಸಾರುತ್ತ
ಮುಗಿಲನು ಚುಂಬಿಸುತಿದೆ
ನಮ್ಮ ಹೆಮ್ಮೆಯ ಬಾವುಟ…
ಸಹ್ಯಾದ್ರಿಯ ಸಾಲುಗಳಲಿ
ಹಿಮಾಲಯದ ಶಿಖರದಲಿ
ಕರಾವಳಿಯ ತೀರದಲಿ
ಮಲೆನಾಡಿನ ಮಡಿಲಿನಲಿ
ಭರತ ಭೂಮಿಯ ಹಿರಿಮೆಯ
ಕಂಪನ್ನು ಸೂಸುತ್ತ ಹಾರಿದೆ
ನಮ್ಮ ಹೆಮ್ಮೆಯ ಬಾವುಟ…
ದೇಶಭಕ್ತಿಯ ಮೆರೆಯುತಲಿ
ಅಮೃತ ಮಹೋತ್ಸವದ ಸಂಭ್ರಮದಲಿ
ಸತ್ಯಾಗ್ರಹದ ನೆನಪಿನಲಿ
ತ್ಯಾಗ ಬಲಿದಾನದ ಸ್ಮರಣೆಯಲಿ
ಐತಿಹಾಸಿಕ ಸೊಬಗ ಸಾರಿದೆ
ನಮ್ಮ ಹೆಮ್ಮೆಯ ಬಾವುಟ…
ಭಾರತಾಂಬೆಯೇ ನಿನಗೆ ಕೋಟಿ ಕೋಟಿ ನಮನ…
ಎಲ್ಲೆಡೆಯೂ ಅಮೃತ ಮಹೋತ್ಸವದ ಸಡಗರ ಸಂಭ್ರಮ..
ಎಪ್ಪತ್ತೈದು ನೂರು ಸಾವಿರ ದಾಟಲಿ
ಭವ್ಯ ಪರಂಪರೆಯ ದೃಢ ಹೆಜ್ಜೆ ಜಗಕೆ ಸಾರಲಿ…
ಸ್ವಾವಲಂಬಿ ಭಾರತ ನಮ್ಮ ಆಶಯ
ಸರ್ವರಿಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯ…


Leave a Reply