ಹಾಡುಗಳ ಆಗರದ
ಶಬ್ದಕೋಶವೇ ನೀನು
ಏನೆಂದು ಪದಗಳ ಪೊಣಿಸಿ
ವರ್ಣಿಸಲೇ ನಾನು…
ನೀ ಕಟ್ಟಿ ಹಾಡುವ ಹಾಡಿಗೆ
ತಲೆಬಾಗದವರಾರು
ಅರ್ಥಗರ್ಭಿತ ಪದಗಳ
ಪ್ರತಿಸಾಲುಗಳಲ್ಲಿ
ವರ್ಣಿತವಾಗಿಹುದು ಕಾಣು
ಬಾಳ ಪಯಣದ ಪ್ರತಿ
ಏರಿಳಿತಗಳ ಘಟ್ಟ…
ನಿನ್ನೊಡಲಲ್ಲಿ ಮುಗಿಯದು ತಾಯಿ
ಹಾಡಿನ ಅಲೆಗಳ
ಅಗಾದ ಸಾಗರ..
ಇಂದಿಗೂ ಚಿಗುರುತಲಿದೆ
ನವ ನವೀನ ಸಾಲಿನ ಮಾಮರ..
ಅಗಣಿತ ಹಾಡಿನ ಒಡತಿಯೇ
ಎಣಿಕೆಗೂ ನಿಲುಕದು
ಹಾಡುಗಳ ಕಂತೆ..
ನಿನ್ನ ಕೊರಳೊಳಗಿನ
ಎಣಿಸಲಾಗದ ಮಣಿಯಂತೆ….
ನೀ ಕಟ್ಟುವ ಹಾಡಿಗಳು
ಬಾನಲ್ಲಿ ಮೂಡಿಸುವುದು
ಬಣ್ಣದ ಮಳೆಬಿಲ್ಲಿನ
ಚಿತ್ತಾರ..
ಬರೆಯದೆ ಹಾಡಿದ
ಹಾಡಿನ ಸಾಲುಗಳು
ಬರೆವ ಲೇಖನಿಗೆ
ತುಂಬುವುದು ಸ್ಪೂರ್ತಿ..
ಜನಪದ ಲೋಕಕ್ಕೆ ಮಾತೆ
ನಿನೋಂದು ಕೀರ್ತಿ..
ನವ ಕವಿಗಳಿಗೆ ದಾರಿ ದೀಪ
ನಿನ್ನ ಹಾಡುಗಳ ಪ್ರತಿ ಹೆಜ್ಜೆ..
ಬಾನ ಚಂದಿರನ
ಬೆಳದಿಂಗಳು ನಾಚುವಂತಿದೆ
ನಿನ್ನ ಮೊಗದ ನಗುವ ನೋಡಿ
ಸುಕ್ರಜ್ಜಿ…..
✍️ ಅಕ್ಷತಾ ಜಗದೀಶ.


Leave a Reply