Category: ಹಬ್ಬ

  • ನಾಗರ ಪಂಚಮಿ ಆಚರಣೆ, ಸಂಪ್ರದಾಯ, ಉತ್ತರ ಕನ್ನಡ

    ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಜಿಲ್ಲೆಯ ಕರಾವಳಿ ಭಾಗದಲ್ಲಿ ನಾಗನಿಗೆ ವಿಶಿಷ್ಟ ಆಚರಣೆಯ ಮೂಲಕ ಪೂಜೆ ಸಲ್ಲಿಸುತ್ತಾರೆ. ನಾಗ ರೈತನ ಬೆಳೆಯನ್ನು…

  • ಬಂಡಿಹಬ್ಬ… ಬೆಸುಗೆ ಇಲ್ಲದೇ ಬಂಧಿಸಿದ ನಮ್ಮೂರ ಹೆಮ್ಮೆಯ ಹಬ್ಬ.

    ನಮ್ಮ ಜಿಲ್ಲೆಯ ಜನಕ್ಕೆ ಅದೇನೋ, ಬಂಡಿಹಬ್ಬ ಎಂದೊಡನೆ ಉತ್ಸಾಹದಿಂದ ಮೈ ನಿಮಿರೇಳುವುದು ಸಹಜ. ಎಲ್ಲ ವರ್ಗದ, ಎಲ್ಲರೂ ಸಂಭ್ರಮಿಸುವ ಬಹಳ ಗಮ್ಮತ್ತಿನ ಹಬ್ಬವೇ ಈ ಬಂಡಿಹಬ್ಬ. ಗ್ರಾಮದೇವಿ, ಕಲಶ ದೇವರು ವಿವಿಧ ಗಡಿ ಮತ್ತು ಗುತ್ತಿದೇವರುಗಳ ಸಮ್ಮಿಲನಕ್ಕೆ ವಾರ್ಷಿಕ ಪೂಜೆ, ಹರಕೆ ಸಮರ್ಪಿಸುವ ಅವಕಾಶದ ಹಬ್ಬ. ಇಲ್ಲಿ ಆ ಜಾತಿ ಈ ಜಾತಿ ಎನ್ನದೇ ಎಲ್ಲರೂ “ನಮ್ಮೂರಿನ ಹಬ್ಬ” ಎಂದು ಸಂಭ್ರಮಿಸುವ ಸಂದರ್ಭ. ಅಂಕೋಲೆಯ ಬಂಡಿಹಬ್ಬ ಎಂದರೆ ನಾಡಿನಲ್ಲೇ ಪ್ರಸಿದ್ಧವಾದುದು. ಈ ಹಬ್ಬ ಎಂದು ಆರಂಭವಾಯಿತು ಎಂಬ…

  • ಸುಗ್ಗಿ ಹಬ್ಬದ ಮಹತ್ವ | ಪ್ರಕೃತಿಗೆ ಚೈತನ್ಯ ತುಂಬುವ ಹಬ್ಬ.

    ವಿಜಯನಗರದರಸರು ಸುಗ್ಗಿ ಹಬ್ಬವನ್ನು ವೈಭವಯುತವಾಗಿ ಆಚರಿಸುತ್ತಿದ್ದುದನ್ನು ಕೃಷ್ಣದೇವರಾಯನ ಕಾಲಕ್ಕೆ ವಿಜಯನಗರಕ್ಕೆ ಭೆಟ್ಟಿಯಿತ್ತ ಡಾಮಿಂಗೋ ಪಾಯೆಸ್‌ ವರ್ಣಿಸಿದ್ದಾನೆ. ಕನಕದಾಸರ ಮೋಹನ ತರಂಗಿಣಿಯಲ್ಲಿ ಈ ಹಬ್ಬದ ಸುಂದರ ಚಿತ್ರವಿದೆ. ಕೌಮುದಿ ಮಹೋತ್ಸವ, ವಸಂತೋತ್ಸವವೂ ಇದೇ ಆಗಿದೆ. ಈ ಹಬ್ಬಕ್ಕೆ, ಹೋಲಿಕಾದಹನ, ಹುತಾಶನೀ ಪೂರ್ಣಿಮಾ, ಕಾಮದಹನ, ಸಿಗ್ಮಾ ಎಂಬ ಹೆಸರುಗಳಿದ್ದರೂ ಉತ್ತರ ಕನ್ನಡದ ಕರಾವಳಿಗರು ಈ ಹಬ್ಬವನ್ನು ಸುಗ್ಗಿ ಇಲ್ಲವೆ ಹೋಳಿ ಹಬ್ಬವೆನ್ನುತ್ತಾರೆ. ಪುರಾಣ ಹಾಗೂ ಕಾವ್ಯಗಳಲ್ಲಿಯ ಕಾಮದಹನ ಆಚರಣೆಗಳಿಗೂ, ಜಾನಪದೀಯ ಆಚರಣೆಗಳಿಗೂ ಅಂತರವಿ‍ದೆ. ಹಾಲಕ್ಕಿಗಳು ಆಚರಿಸುವ ಸುಗ್ಗಿಯ ಆಚರಣೆಯಲ್ಲಿ ವಸಂತೋತ್ಸವ,…

  • ತುಳಸಿ ಹಬ್ಬ, ಉತ್ತರ ಕನ್ನಡದ ಪವಿತ್ರ ಹಬ್ಬ.

    ತುಳಸಿ ಪುಜೆಯು ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಮತ್ತು ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಇಲ್ಲಿನ ಆಚರಣೆ ಕರ್ನಾಟಕದ ಇತರೆ ಭಾಗಗಳಿಗಿಂತ ವಿಭಿನ್ನವಾಗಿದೆ. ಇದು ಉತ್ತರ ಕನ್ನಡಿಗರ ಅತೀ ನೆಚ್ಚಿನ ಹಬ್ಬವಾಗಿದೆ. ಈ ಹಬ್ಬವನ್ನು ಹಿಂದೂ ಸಮುದಾಯದ ಎಲ್ಲಾ ಭಾಂದವರು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯಿಂದ ಆಚರಿಸುತ್ತಾರೆ. ಹಾಲಕ್ಕಿ ಒಕ್ಕಲಿಗರಿಗೆ ಇದು ಅತ್ಯಂತ ಪ್ರಿಯ ಮತ್ತು ಪವಿತ್ರ ಹಬ್ಬವಾಗಿದೆ. ತುಳಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ|ನಮಸ್ತೇ ನಾರಾದನುತೇ ನಾರಾಯಣ ಮನಃಪ್ರಿಯೇ|| ಹಿಂದೂಗಳಿಗೆ ತುಲಸಿ ಕೇವಲ ಸಸ್ಯವಲ್ಲ, ದೇವಸದನ, ತುಳಸಿಯಲ್ಲಿ…

  • ಗೋವಿನಹಬ್ಬ – ದೀಪಾವಳಿ

    ದೀಪಾವಳಿ ಹಬ್ಬವು ಸುಖ ಸಂಪತ್ತಿನ ಅಧಿನಾಯಕಿ ಲಕ್ಷ್ಮಿ ದೇವಿಯ ಆರಾಧನೆ, ವಿದ್ಯುತ್ ದೀಪ, ಪಟಾಕಿಗಳ ಶಭ್ದಗಳಿಂದ ಕೂಡಿದ ವಿಜ್ರಂಭಣೆಯ ಹಬ್ಬ ಅಷ್ಟೇ ಅಲ್ಲದೇ ಇದು ರೈತ ಮತ್ತು ಗೋಮಾತೆಯ ನಡುವಿನ ಸಂಬಂಧವನ್ನು ಸಾರುವ ಮತ್ತು ಪ್ರೀತಿಯನ್ನು ಇನ್ನಷ್ಟು ಗಟ್ಟಿ ಮಾಡುವ ಹಬ್ಬವಾಗಿದೆ. ದನಕರುಗಳೇ ರೈತರ ಬದುಕಿಗೆ ಆಧಾರ. ಜೀವನ ಪೂರ್ತಿ ಒಕ್ಕಲಿಗನಿಗಾಗಿ ದುಡಿಯುವ ಎತ್ತು ಆತನಿಗೆ ಸಾಕ್ಷಾತ್ ಬಸವಣ್ಣ, ಹಾಲು ಹೈನದ ಧಾರೆಯೆರೆಯುವ ಆಕಳು ಗೋಮಾತೆ. ಈ ಗೋಜಾತಿಯನ್ನು ಬಡಿಯುವುದು ಪಾಪ, ಅವನ್ನು ಕೊಂದ ಪಾಪವು “ಹುಟ್ಟೇಳು…

  • ಹೊಸ್ತಿಲ ಹಬ್ಬದ ಮಹತ್ವ – ಆಚರಣೆ, ಸಂಪ್ರದಾಯ

    ಈ ಹಬ್ಬವನ್ನು ಅಶ್ವಯುಜ ಪ್ರತಿಪದೆಯೆಂದು, ಇಲ್ಲವೇ ನವರಾತ್ರಿಯಂದು ಆಚರಿಸುವರು. ಅಂದು ಮನೆ ಮತ್ತು ತುಳಸಿಯ ಒಳಹೊರಗೆಲ್ಲಾ ಸಾರಿಸಿ ಹಲಿ ಹೊಯ್ದು, ವ್ಯವಸಾಯ ಉಪಕರಣಗಳನ್ನು ತೊಳೆದು, ಸೇಡಿಯ ಪಟ್ಟೆ ತೆಗಿಯುತ್ತಾರೆ. ಪಾಂಡವರ ಸಂಕೇತವೆಂದು ತುಳಸಿಯ ಮುಂದೆ ಆಯ್ದು ಸಗಣಿಯ ಮುದ್ದೆಗಳನಿಟ್ಟು, ಅವಕ್ಕೆ ಸೋರೆ, ಕುಂಬಳ ಹೂ ಪೇರಿಸುತ್ತಾರೆ. ಮಧ್ಯಾಹ್ನ ಮನೆಯಜಮಾನ ಮಿಂದು ಮುಡಿಯುಟ್ಟು ಮನೆ ಮಕ್ಕಳೊಡನೆ ಮನೆಯ ಪಕ್ಕದ ಗದ್ದೆಗೆ ಹೋಗಿ ತೆನೆಗೂಡಿ ತೊನೆಯುತ್ತಿರುವ ಕೆಯ್ಸಸಿಗಳನ್ನು ಒಟ್ಟಿಗೆ ಸೇರಿಸಿ ಎರಡು ಪೊಟ್ಟೆ ಕಟ್ಟುತ್ತಾನೆ; ಹೂಗಂಧ ಹಾಕಿ ಪೂಜಿಸಿ, ಧ್ಯಾನ…

  • ಅಜ್ಜಿ ಹಬ್ಬ, ಭಟ್ಕಳದಲ್ಲಿನ ವಿಶೇಷ ಆಚರಣೆ

    ಅಜ್ಜಿಯು ಬುಡಕಟ್ಟು ಜನರ ಒಬ್ಬಳು ಕಾಲ್ಬನಿಕ ದೇವರು. ಅಜ್ಜಿ ಆರಾಧನೆಯು ಭಟ್ಕಳದಿಂದ ದಕ್ಷಿಣಕ್ಕೆ ಗಂಗಾವಳಿಯ ವರೆಗೂ ಕಂಡುಬರುತ್ತವೆ. ತುಳು ನಾಡಿನಲ್ಲಿಯೂ ಈ ಆಚರಣೆ ಇದ್ದಿರಬಹುದು. ಈ ಹಬ್ಬದ ಆರಾಧನೆಯಲ್ಲಿ ಬಳಸಲಾಗುವ ಒಂದು ಸಸ್ಯವನ್ನು ಅಜ್ಜಿ ಕುಡಿ ಎನ್ನುತ್ತಾರೆ. ಆದ್ದರಿಂದ ಅಜ್ಜಿ ತರುವ ಹಬ್ಬ ವನ್ನು ಅಜ್ಜಿ ಕುಡಿ ಹಬ್ಬವೆಂತಲೂ ಕರೆಯುತ್ತಾರೆ ಇದನ್ನು ಶ್ರಾವಣ ಮಾಸದಲ್ಲಿ ಹೊಸ್ತಿಲ ಪೂಜೆಗೆ ಬಳಸುವ ಕಾರಣ ಇದಕ್ಕೆ ಶ್ರಾವಣ ಕುಡಿ, ಸೋಣೆ ಕುಡಿ ಎಂಬ ಹೆಸರುಗಳು ಕರಾವಳಿಯ ಹಲವು ಕಡೆ ರೂಢಿಯಲ್ಲಿವೆ. ಶಾಲೆಯ…

  • ಹಬ್ಬಗಳ ಆಚರಣೆಗಳ ಮೌಲ್ಯ ಮತ್ತು ಸಂಸ್ಕಾರಗಳು

    ಇಂದು ಮಾನವ ತಾನು ಆಚರಿಸುತ್ತಿರುವ ಹಬ್ಬಗಳ, ಸಂಪ್ರದಾಯಗಳ ಆಚರಣೆಗಳ ಹಿನ್ನಲೆಯನ್ನು ತಾತ್ವಿಕವಾಗಿ ಮರೆಯುತ್ತಿರುವುದು ವಿಷಾದನೀಯವಾಗಿದೆ. ನಮ್ಮ ನಾಡಿನ ಪ್ರತಿಯೊಂದು ಹಬ್ಬಗಳ ಸಂಪ್ರದಾಯಗಳ ಆಚರಣೆಯ ಆಚಾರ ವಿಚಾರಗಳ ಬಗ್ಗೆ ಮಹತ್ವಪೂರ್ಣವಾದ ಹಿನ್ನಲೆಯು ಇದೆ. ಅಷ್ಟೇ ಅಲ್ಲದೇ ಅವುಗಳು ನಮ್ಮ ನಾಡಿನ ಸಾಂಸ್ಕೃತಿಕ ಸೊಬಗಿನ ಪರಂಪರೆಯನ್ನು ಸಾರುತ್ತಲೇ ಸಾಗಿದೆ. ಹಬ್ಬ-ಹುಣ್ಣಿಮೆ ಆಚರಿಸುವುದು ಬರೀ ಮೂಢನಂಬಿಕೆ ಅಲ್ಲ. ಇದರಲ್ಲಿ ವೈಜ್ಞಾನಿಕತೆಯಿದೆ. ವಿಚಾರವಂತಿಕೆ, ಮಡಿವಂತಿಕೆ ಇದೆ. ಆನಂದ ಖುಷಿ ಸಂತಸವಾಗಿ ಬಾಳಬೇಕಾಗಿರುವುದು ನಮ್ಮ ಬದುಕಿನ ಉದ್ದೇಶವಾಗಿರುತ್ತದೆ. ಈ ಆನಂದವು ನಮಗೆ ಸುಕಾ ಸುಮ್ಮನೆ…

  • ಬೆಚ್ಚಿನ ಹಬ್ಬ, ಗದ್ದೆ ಗಂಡನ ಹಬ್ಬ

    ಹಾಲಕ್ಕಿ ಒಕ್ಕಲಿಗರ ಸಂಪ್ರದಾಯದ ಪ್ರಕಾರ ಮಣ್ಣಿನ ಮಕ್ಕಳಾದ ಹಾಲಕ್ಕಿಗಳು ಹೊನ್ನ ಬೆಳೆ ತೆಗೆಯುವುದು ಭೂಗರ್ಭದಿಂದಲೇ. ತಾವು ಬಿತ್ತಿದ ಗದ್ದೆಗೆ ಗಂಡನನ್ನು ಮಾಡಿದಲ್ಲಿ ಮಾತ್ರ ಬೆಳೆ ಬರುವುದೆಂದು ಪರಿಭಾವಿಸಿ, ಬೆಚ್ಚಿನ ಸಂಕ್ರಾಂತಿಯಂದು ಗದ್ದೆಗೆ ಗಂಡನನ್ನು ತರುತ್ತಾರೆ. ಅಂದು ಬೆಳಿಗ್ಗೆ ನಸುಕಿನಲ್ಲೆದ್ದು ಮುಂಡಕಿ ಇಲ್ಲವೆ ಬೋಕುಳ ಟೊಂಗೆಯನ್ನು ಕಡಿದು ತಂದು, ಗದ್ದೆಯ ಹಾಳೆಯ ಮೇಲೆ ನೆಟ್ಟು ಪೂಜೆಯನ್ನು ಮಾಡಿ, ‘ಹುಯ್ಯೋ’ ಎಂದು ಕೂಗುತ್ತಾರೆ. ಅನಂತರ ಗೇಣಿದಾರ ಒಕ್ಕಲು ಮಕ್ಕಳಾದರೆ ಒಡೆಯನೆಡೆ ಹೋಗಿ, ಕೇಲಾಲೆ ಕೇಲಿ ವಡೆದೀರೆ ನೀವ್‌ ಕೇಲಿಹಿತ್ತಲಿಗೆ ಬೆಚ್ಚ…

You cannot copy content of this page