ಇತಿಹಾಸ:
ಭಂಡಾರಿ ಜಾತಿಯು ಪ್ರಾಚೀನ ಮತ್ತು ಮಧ್ಯಕಾಲೀನ ಭಾರತದ ಸಮುದ್ರಯಾನ ಯೋಧ ಜಾತಿಗಳಲ್ಲಿ (ರಜಪೂತ್) ಸೇರಿದೆ. ಅವರು 1100 ರ ಆರಂಭದಲ್ಲಿ ರಜಪೂತಾನದಿಂದ ದಕ್ಷಿಣಕ್ಕೆ ವಲಸೆ ಬಂದರು ಮತ್ತು ನಂತರ ಭಾರತದ ವಿವಿಧ ಭಾಗಗಳಲ್ಲಿ ಹರಡಿದರು. ಮಹಾರಾಷ್ಟ್ರ, ಗೋವಾ ಜೊತೆಗೆ ಕರ್ನಾಟಕದ ಕಾರವಾರದಂತಹ ಭಾಗಗಳು, ನೇಪಾಳ, ರಾಜಸ್ಥಾನ, ಮಧ್ಯ ಭಾರತದ ಭಾಗಗಳು, ಗುಜರಾತ್, ಆಂಧ್ರಪ್ರದೇಶ, ಉತ್ತರಾಖಂಡದ ಕುಮಾವೂನ್ ಮತ್ತು ಗರ್ವಾಲ್‌ಗಳಲ್ಲಿ ಅವರು ಗಮನಾರ್ಹ ಸಂಖ್ಯೆಯಲ್ಲಿ ಕಂಡುಬರುತ್ತಾರೆ.
ಈ ಸಮುದಾಯದ ಹೆಸರಾದ ‘ಭಂಡಾರಿ’ ಪದವು ಮೂಲ ಪದವಾದ ‘ಬಂಡಾ+ಹರಿ’ ಇಂದ ಬಂದಿದ್ದಾಗಿರುತ್ತದೆ. ‘ಬಂಡಾ’ ಎಂದರೆ ‘ದಂಗೆ’ ಮತ್ತು ‘ಹರಿ’ ಎಂದರೆ ‘ಶಮನ’ / ‘ಸೊಲಿಸುವವರು’ ಎಂಬ ಪದಗಳಿಂದ ಕೂಡಿದ್ದಾಗಿದೆ. ಈ ಸಮುದಾಯಕ್ಕೆ ‘ಭಂಡಾರಿ’ ಹೆಸರನ್ನು ಸ್ವತಃ ಛತ್ರಪತಿ ಶಿವಾಜಿ ಮಹರಾಜರೇ ನೀಡಿರುತ್ತಾರೆ. ತಮ್ಮ ಪ್ರಾಂತ್ಯಗಳ ನಷ್ಟದ ಬಗ್ಗೆ ಅತೃಪ್ತಿ ಹೊಂದಿದ್ದ ಮರಾಠ ಸರ್ದಾರ್‌ಗಳ ಆಂತರಿಕ ದಂಗೆಗಳನ್ನು ನಿಲ್ಲಿಸುವಲ್ಲಿ ಈ ಸಮುದಾಯದ ಕೆಲಸದಿಂದ ಬಹಳ ಸಂತೋಷವಾಗಿ ಈ ಹೆಸರು ನೀಡಿರಬಹುದಾಗಿದೆ. ‘ಹಿಂದವಿ ಸ್ವರಾಜ್’ ನ ಅಡಿಪಾಯ ಮತ್ತು ಸ್ಥಾಪನೆಯ ಕಾರ್ಯದಲ್ಲಿ ಈ ಸಮುದಾಯವು ಸಿಂಹ ಪಾಲನ್ನು ಪಡೆದಿದೆ. ಅತಿಮುಖ್ಯವಾದ ವಿಷಯವೆಂದರೆ ಛತ್ರಪತಿ ಶಿವಾಜಿ ಮಹರಾಜರು ಈ ಸಮುದಾಯದ ಜೊತೆಗೂಡಿ ಶ್ರೇಷ್ಠ ಮರಾಠ ನೌಕಾಪಡೆಯನ್ನು ಕಟ್ಟಿ ಅದಕ್ಕೆ “ಅಡ್ಮಿರಲ್ ಕಾನ್ಹೋಜಿ ಆಂಗ್ರೆ” ಅವರನ್ನು ಸೇನಾನಾಯಕನಾಗಿ ನೇಮಿಸುತ್ತಾರೆ. ತಮ್ಮ ಶ್ರೇಷ್ಠ ನೌಕಾಸೇನೆಯಿಂದ ಪಚ್ಚಿಮ ಕರಾವಳಿಯಲ್ಲಿನ ಯುರೋಪಿಯನ್ನರ ಸೇನಾ ಚಲನವಲನಗಳ ಮೇಲೆ ಹದ್ದಿನ ಕಣ್ಣಿರಿಸಿ ಅವರನ್ನು ಯಶ್ವಸಿಯಾಗಿ ನಿರ್ಬಂಧಿಸಿ ಮುರುದ್ ಜಂಜೀರಾ, ಅಲಿಬಾಗ್ ಸೇರಿದಂತೆ ಹಲವು ಬಂದರುಗಳನ್ನು ತಮ್ಮ ಸುಪರ್ದಸ್ತಿಗೆ ತೆಗೆದುಕೊಳ್ಳುತ್ತಾರೆ. ಶಿವಾಜಿ ಮಹಾರಾಜರ ನಂತರವೂ ಹಲವು ನೌಕಾ ಯುದ್ಧಗಳನ್ನು ಗೆದ್ದು ಪೋರ್ಚುಗೀಸರು ಮತ್ತು ಬ್ರಿಟಿಷರನ್ನು ತಲೆತಗ್ಗಿಸುವಂತೆ ಮಾಡುತ್ತಾರೆ.
ಇಷ್ಟೇ ಅಲ್ಲದೇ ಭಂಡಾರಿಗಳ ಇತಿಹಾಸವು ಚಕ್ರವರ್ತಿ ಚಂದ್ರಗುಪ್ತ ಮೌರ್ಯರ ಕಾಲಘಟ್ಟದಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ ನಂತರ ಭಂಡಾರಿ ಸಮುದಾಯವನ್ನು ಪಚ್ಚಿಮ ಕರಾವಳಿಗೆ ರವಾನಿಸಲಾಗಿತ್ತು, ವಿಶೇಷವಾಗಿ ದೊಡ್ಡ ಸಮುದ್ರ ಬಂದರುಗಳನ್ನು ನಿರ್ವಹಿಸಲು ಮತ್ತು ‘ಮುಂಬೈ ನಾಲಾ ಸೊಪರ್’ ಉಪನಗರವನ್ನು ನೋಡಿಕೊಳ್ಳಲು ಇವರಿಗೆ ಆದೇಶಿಸಲಾಯಿತು.
ನಂತರದ ದಿನಗಳಲ್ಲಿ ಈ ಸಮುದಾಯವು ಪಚ್ಚಿಮ ಕರಾವಳಿಯಲ್ಲಿ ನೆಲೆಗೊಂಡಿತು ಮತ್ತು ಹಡಗು, ನೌಕಾ ಚಟುವಟಿಕೆ (ಮೀನುಗಾರಿಕೆಯನ್ನು ಹೊರತುಪಡಿಸಿ), ಟಾಡಿ ಟ್ಯಾಪಿಂಗ್ ಮತ್ತು ರಕ್ಷಣಾ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆದ್ಧರಿಂದ ಭಂಡಾರಿ ಸಮುದಾಯವು ಮುಂಬೈನ ಹಳೆಯ ವಸಾಹತುಗಾರರಲ್ಲಿ ಇವರು ಕೂಡ ಒಬ್ಬರು ಎಂದು ಪರಿಗಣಿಸಲ್ಪಟ್ಟಿದ್ದಾರೆ.
ಎರಡು ಸಿದ್ಧಾಂತಗಳನ್ನು ಇಲ್ಲಿ ತಿಳಿಸಲಾಗಿದೆ:
“ಕಥಾ ಕಲ್ಪತರು” ಮತ್ತು “ಬ್ರಮ್ಹೋತರ್ಪುರನ್” ನಲ್ಲಿ ಭಂಡಾರಿಗಳು (ಉತ್ಪತಿ) ಭಗವಾನ್ ಶಿವನ ಘರ್ಮಬಿಂದುವಿನಿಂದ ವಿಕಸನಗೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಒಮ್ಮೆ ಶಿವನು ರಾಕ್ಷಸ ತಿಲಕಾಸುರನ ವಿರುದ್ಧ ಯುದ್ಧಕ್ಕೆ ಹೋಗುತ್ತಿದ್ದಾಗ, ಬಾಯಾರಿಕೆಯಾಯಿತು, ಆಗ ಅವನ ಹುಬ್ಬಿನಿಂದ ಒಂದು ಬೆವರು ಹನಿಉದುರಿತು ಮತ್ತು ಆ ಹನಿಯಿಂದ ಮೊದಲ ಭಂಡಾರಿ ಮನುಷ್ಯ ಹೊರಹೊಮ್ಮಿದನು. ಭಗವಾನ್ ಶಿವನು ಅವನಿಗೆ ಕುಡಿಯಲು ಸ್ವಲ್ಪ ನೀರನ್ನು ಹುಡುಕಲು ಕೇಳಿದನು, ಆದರೆ ಎಲ್ಲಿಯೂ ನೀರು ಸಿಗದೆ ಆ ವ್ಯಕ್ತಿ ತಾಳೆ ಮರವನ್ನು ಹತ್ತಿ ಒಂದು ಚೇತೋಹಾರಿ ಪಾನೀಯವನ್ನು (ಟಾಡಿ) ತಂದನು. ಇದರಿಂದ ಸಂತಸಗೊಂಡ ಶಿವನು ಆ ವ್ಯಕ್ತಿಯನ್ನು ಅಲಕಾಪುರಿಯ ಖಜಾಂಚಿಯಾಗಿ “ರಾಜ ನಿಧಿಯ ರಕ್ಷಕ (ಭಂಡಾರಿ)” ಮಾಡಲಾಯಿತು.
ಭಂಡಾರಿ ಎಂಬ ಹೆಸರು ಸಂಸ್ಕೃತ ಭಾಷೆಯ ‘ಭಂಡ’ ಅಂದರೆ ದೊಡ್ಡ ಹಡಗು ಎಂಬ ಪದದಿಂದ ಹುಟ್ಟಿಕೊಂಡಿದೆ. ಯಾರು ದೊಡ್ಡ ಹಡಗುಗಳನ್ನು ನಿರ್ಮಿಸುತ್ತಿದರೊ ಅವರನ್ನು ‘ಭಂಡಾರಿ’ ಎಂದು ಛತ್ರಪತಿ ಶಿವಾಜಿ ಮಹರಾಜರ ಮತ್ತು ಪೆಶ್ವರ ಕಾಲಮಾನದಲ್ಲಿ ಕರೆಯಲಾಗುತಿತ್ತು ಮತ್ತು ಅದರ ಇತಿಹಾಸವು ಮೌರ್ಯ ರಾಜವಂಶಕ್ಕೆ ಮೀರಿದೆ.
ಈ ಸಮುದಾಯದ ಹೆಚ್ಚಿನವರು ತಮ್ಮ ಪೂರ್ವಜರನ್ನು ಅವರು ವಾಸವಿದ್ದ ಪ್ರದೇಶದಿಂದ ಗುರುತಿಸುತ್ತಾರೆ ಮತ್ತು ಕೆಲವರು ತಮ್ಮ ಗೋವಾ ಮತ್ತು ಕೊಂಕಣ ಸುತ್ತಮುತ್ತಲಿನ ಕುಲದೇವರ ಪ್ರದೇಶಗಳಿಗೆ ವಲಸೆ ಹೋಗಿ ಅಲ್ಲಿನ ಉಪನಾಮಗಳಿಂದ ಗುರುತಿಸಿಕೊಂಡಿದ್ದಾರೆ. ನಂತರದ ದಿನಗಳಲ್ಲಿ ಇತರೇ ಕುಟುಂಬ ದೇವರು ವಾಸವಿರುವ ಹಳ್ಳಿಗಳ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದಾರೆ.
ಭಂಡಾರಿ ಸಮುದಾಯವು ಮಹಾರಾಷ್ಟ್ರ ಮತ್ತು ಗೋವಾದ ಕೊಂಕಣ ಪ್ರದೇಶಕ್ಕೆ ಸೇರಿದೆ. ಸಮುದಾಯದ ಮುಖ್ಯ ಜನಸಂಖ್ಯೆಯು ಥಾಣೆ, ರಾಯಗಢ, ರತ್ನಗಿರಿ, ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಗಳು ಮತ್ತು ಗೋವಾ ಮೂಲಕ ಕರಾವಳಿಯ ಪಟ್ಟಿಗಳಲ್ಲಿ ಕಂಡುಬರುತ್ತದೆ. ಸಮುದಾಯದ ಮುಖ್ಯ ಜನಸಂಖ್ಯೆಯನ್ನು ಹೊರತುಪಡಿಸಿ ಕೊಲ್ಹಾಪುರ, ಅಹಮಾದಾಬಾದ್, ಧಾರವಾರ್ (ಧಾರವಾಡ), ಕಾರ್ವಾರ್ (ಕಾರವಾರ) ಮತ್ತು ಹುಬ್ಬಳ್ಳಿಯಲ್ಲಿ ಕಂಡುಬರುತ್ತದೆ. ಕರ್ನಾಟಕದಲ್ಲಿ ಸಮುದಾಯವು ವಿಭಿನ್ನವಾಗಿ ‘ಪೂಜಾರಿ’ ಹೆಸರಿನಿಂದ ಕರೆಯಲ್ಪಡುತ್ತದೆ. ವಿಭಜನೆಯ ಪೂರ್ವ ಯುಗದಲ್ಲಿ ಈ ಸಮುದಾಯವು ಸಮುದ್ರ ಪ್ರಯಾಣ ಮತ್ತು ಮುಖ್ಯವಾಗಿ ಶಿಪ್ಪಿಂಗ್ ವ್ಯವಹಾರಕ್ಕೆ ತೊಡಗಿಸಿಕೊಂಡಿತ್ತು ಮತ್ತು ದೂರದ ಕರಾಚಿಯಲ್ಲಿಯೂ ನೆಲಸಿತು.
ಮುಸ್ಲಿಂ ಗಲಭೆಕೋರರ ಆಕ್ರಮಣದ ಕಾರಣದಿಂದಾಗಿ ಈ ಸಮುದಾಯವು ತಮ್ಮ ಮೂಲ ಗುಣ ಮತ್ತು ವ್ಯವಹಾರಗಳನ್ನು ತ್ಯಜಿಸಬೇಕಾದ ಪರಿಸ್ಥಿತಿ ಬಂದೊದಗಿ ನಿರಾಶ್ರಿತರ ಶಿಭಿರಗಳಲ್ಲಿ ತಮ್ಮ ಇಚ್ಛೆಗೆ ವಿರುದ್ಧವಾಗಿ ವಾಸಿಸಬೇಕಾಯಿತು. ಇದೇ ಪರಿಸ್ಥಿತಿಯು ಮುಂಬೈನಲ್ಲಿ ನೆಲೆಸಿರುವವರಿಗೂ ಅನ್ವಯಿಸುತಿತ್ತು. ದಕ್ಷಿಣ ಮುಂಬೈನಲ್ಲಿರುವ ತಮ್ಮ ಮನೆಗಳು ಮತ್ತು ಆಸ್ತಿಗಳನ್ನು ಬಿಟ್ಟು ಪಲಾಯನ ಮಾಡಬೇಕಾಯಿತು ಮತ್ತು ಈ ಪರಿಸ್ಥಿತಿ ಇಂದಿನವರೆಗೂ ಹಾಗೆಯೇ ಇದೆ.
ಈ ಸಮುದಾಯದ ಕೆಲವು ವ್ಯಾಪಾರಿಗಳು ಮತ್ತು ಕಲಾವಿದರು ಆಗಿನ ರಾಜಪ್ರಭುತ್ವದ ರಾಜ್ಯವಾದ ಕೊಲ್ಲಾಪುರದಲ್ಲಿ ಬಂದು ನೆಲೆಸಿದರು. ವಾಣಿಜ್ಯದ ಪ್ರಮುಖ ಕೇಂದ್ರವಾಗಿದ್ದ ಕೊಲ್ಲಾಪುರವು ಕಲೆಗಳ ಪೋಷಕವೂ ಆಗಿತ್ತು ಆದ್ಧರಿಂದ ಭಂಡಾರಿ ಸಮಾಜದ ಹೆಚ್ಚಿನ ಜನಸಂಖ್ಯೆಯನ್ನು ಇಲ್ಲಿ ಕಾಣಬಹುದು. ಸಮುದಾಯದ ಕೆಲವು ವ್ಯಾಪಾರಿಗಳು ಹುಬ್ಬಳ್ಳಿ, ಧಾರವಾಡ, ಕಾರವಾರ, ಕೊಚ್ಚಿನ್ ಮತ್ತು ಕ್ಯಾಲಿಕಟ್ ನಂತಹ ಪ್ರದೇಶಗಳಿಗೆ ತಲುಪಿದರು. ಪುಣೆ ಮತ್ತು ಇಂದೋರ್ ನಲ್ಲಿಯೂ ಈ ಸಮಾಜದ ಅತೀ ಕಡಿಮೆ ಜನಸಂಖ್ಯೆಯನ್ನು ಕಾಣಬಹುದು.
ಅನೇಕ ಉಪನಾಮಗಳನ್ನು ಪ್ರದೇಶದ ನಿರ್ದಿಷ್ಟ ಸ್ಥಳೀಯ ಸ್ಥಳಗಳು ಅಥವಾ ಅವರ ಕುಲದೇವತಾ ಅಥವಾ ಕುಲದೇವಿ (ಕುಟುಂಬದ ದೇವತೆ) ಮತ್ತು ಇವರು ವಾಸವಿರುವ ಹಳ್ಳಿಗಳ ಪ್ರಭಾವ ಮತ್ತು ಸೂಚಕವಾಗಿ ಹೆಸರಿಸಲಾಗಿದೆ.
ಭಂಡಾರಿ ಸಮುದಾಯದ ಉಪನಾಮಗಳು: ಅರೆಕರ್, ಅಕ್ಲೇಕರ್, ಬಂಡಿವಾಡೇಕರ್, ಬಾರ್ಡೆ, ಬಾಬ್ರೇಕರ್, ಬಾಗ್ಕರ್, ಭಂಡಾರಿ, ಭಗತ್, ಭಟ್ಕರ್, ಭೋಸಲೆ, ಭೋಂಗ್ಲೆ, ಬಿರ್ಜೆ, ಬೋರ್ಕರ್, ಚೌಘುಲೆ, ಚವ್ಹಾಣ್, ದುಡಾಲ್ಕರ್, ದುಡ್ವಾಡ್ಕರ್, ಗವಾದ್, ಹಲ್ದಂಕರ್, ಹತಿಸ್ಕರ್, ಹೊಡವಡೇಕರ್, ಜಾವ್ಕರ್, ಜಾಧವ್, ಜೋಶಿ, ಕಾಲ್ಗುಟ್ಕರ್ , ಕರಾಲ್ಕರ್, ಕರ್ಭಟ್ಕರ್, ಕೀರ್, ಕೇಣಿ, ಖಟಾವ್, ಖೋಟ್, ಕಿಣಿ, ಕಿಂಡಾಲ್ಕರ್, ಕೊಲಂಬ್ಕರ್, ಕೋಲ್ತಾರ್ಕರ್, ಕೊಂಕರ್, ಮಾಲ್ವಾಂಕರ್, ಮಂಜ್ರೇಕರ್, ಮರ್ಲಂದ್ಕರ್, ಮಾಯೆಕರ್, ಮೇನಾಕ್, ಮ್ಹಾಲ್ಸೇಕರ್, ಮಿತ್ಬಾವ್ಕರ್, ಮೋರ್, ಮುಂಗೇಕರ್, ಮುರ್ಕರ್, ನಾಗ್ವೇಕರ್, ನಾಗ್ವೇಕರ್, ನಾಕ್, ,ಪಡವಾಲಕರ್, ಪಾಂಡ್ರೇಕರ್, ಪರ್ಕರ್, ಪರ್ಸೇಕರ್, ಪತ್ರೇಕರ್, ಪಾಟೇಕರ್, ಪತ್ರೇಕರ್, ಪಾಟೀಲ್, ಪಾವಸ್ಕರ್, ಪೆಡ್ನೇಕರ್, ಪೋಯ್ರೇಕರ್, ರಾಥಿವ್ಡೇಕರ್, ರೆಡ್ಕರ್, ರಾಗ್ಜಿ, ಸಲ್ಗೋಕರ್, ಸರ್ಮಾಲ್ಕರ್, ಶಿವಾಲ್ಕರ್, ಸರ್ವೆ, ಶೆಡ್ಗೆ, ಶೆಲಟ್ಕರ್, ಶೆಟ್ಯೆ, ಶಿರೋಡ್ಕರ್, ಸಾ, ಶೆಂಡೆ, ಸೋಮ್ಜಿ, ತಾಮ್ಸೆ, ತಾಂಡೇಲ್, ತೆಂಡೂಲ್ಕರ್, ತೇಮ್ಕರ್, ತಿರೋಡ್ಕರ್, ತೊಂಡಲೇಕರ್, ತೋಡಂಕರ್, ವೆಂಗುರ್ಲೇಕರ್, ವಾರದ್ಕರ್, ವಾರ್ಕರ್, ವಕ್ಕರ್, ವೈಂಗಾನ್ಕರ್, ಯೇಸಾಜಿ.
ಕಾರವಾರ ಭಂಡಾರಿ ಸಮಾಜದ ಪ್ರಮುಖ ವ್ಯಕ್ತಿಗಳಲ್ಲಿ “ಶ್ರೀ ಪಾಂಡು ಪುಟ್ಟಿ ಕೊಲಂಬ್ಕರ”ರು ಒಬ್ಬರಾಗಿದ್ದರು. ಪರೋಪಕಾರಿಯಾಗಿದ್ದ ಇವರು 19 ನೇ ಶತಮಾನದ ಆರಂಭದಲ್ಲಿ ಮಾಲ್ವನ್ ನಲ್ಲಿ ಸಮಾದೇವಿ ದೇವಸ್ಥಾನವನ್ನು ನಿರ್ಮಿಸಿ ಸಮಾಜದ ಇತರರಿಗೆ ಸ್ಫೂರ್ತಿಯಾದರು.
Source – Karwa Zilla Bhandari Sangh – Mumbai (Translated to Kannada Language)
Note: Grammatical mistakes may be found

Leave a Reply to SudeshCancel reply