ಬಾಳೆ ಎಲೆಯ ಕಡಬು

Posted by

·

ಈ ಭಕ್ಷ್ಯವು ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಕಂಡುಬರುತ್ತದೆ. ಈ ಕಡಬನ್ನು ಮಾಡಲು ಬಾಳೆಲೆಯು ಬೇಕಾಗುತ್ತದೆ. ಸುಮಾರು ಅರ್ಧ ಮಾರು ಉದ್ದರ ಎಲೆಯು ಬೇಕಾಗುತ್ತದೆ. ಇದನ್ನು ಬೆಂಕಿಯಲ್ಲಿ ಬಾಡಿಸಿ ಬಾಡಿಸಿದರೆ ಕೊಟ್ಟೆ ಮಾಡುವಾಗ ಎಲೆ ಹರಿಯುವುದಿಲ್ಲ. ಸುರುಳಿ ಮಾಡಿ ಎರಡು ಸುತ್ತು ಬರುವ ಹಾಗೆ ಸುತ್ತುತ್ತಾರೆ. ಸುತ್ತಿ ಹಿಟ್ಟನ್ನು ಹಾಕಿ ಎರಡು ಕಡೆಗೇ ಬಾಳೆ ಬಳ್ಳಿಯಿಂದ ಕಟ್ಟಿ, ಹಂಡೆಯಲ್ಲಿ ಹಾಕಿ ಬಾಯಿಯನ್ನು ಬಾಳೆ ಎಲೆಯಿಂದ ಮುಚ್ಚಿ, ಅದರ ಮೇಲೆ ಅಕ್ಕಿಯನ್ನು ಇಟ್ಟು ಬೇಯಿಸುತ್ತಾರೆ. 4-5 ತಾಸು ಬೇಯಲು ಬೇಕಾಗುತ್ತದೆ. ಅಕ್ಕಿ ಬೆಂದು ಅನ್ನವಾಗಿದ್ದರೆ ಕಡಬು ಬೆಂದಿದೆ ಎಂದರ್ಥ. ನಂತರ ಇದನ್ನು ಹಂಡೆಯಿಂದ ತೆಗೆದು ಇಡುತ್ತಾರೆ.

ಈ ಬಾಳೆ ಎಲೆಯ ಕಡಬನ್ನು ಕರೆಒಕ್ಕಲಿಗರಲ್ಲಿ ಹೆಚ್ಚಾಗಿ ದೀಪಾವಳಿ ಹಬ್ಬದ ಮಾರನೆಯ ದಿನ ಮಾಡುವುದು ಹೆಚ್ಚು ವಿಶೇಷವಾಗಿದೆ. ಆ ದಿನ ಯಾಕೆಂದರೆ ದೀಪಾವಳಿಯ ಹಬ್ಬದಂದು ಬಿಂಗಿ ಏಳುತ್ತಾರೆ (ಕೋಲಾಟ ಆಡುತ್ತಾರೆ). ಬಿಂಗಿಪದ ಹಾಡುವವರು ಪ್ರತಿಯೊಬ್ಬರ ಮನೆ ಮನೆಗೆ ಹೋಗಿ ಪದ ಹೇಳಿ ಕೋಲಾಟವಾಡುತ್ತಾರೆ. ಹೀಗೆ ಪದ ಹೇಳಿದವರಿಗೆ ಹಣ, ಅಕ್ಕಿ, ಕಾಯಿ ಇವುಗಳನ್ನು ಕೊಡುವುದರ ಜೊತೆಗೆ ಕಡಬನ್ನು ಕೊಡುತ್ತಾರೆ. ಏನು ಇಲ್ಲಾದವರು ಕಡಬನ್ನು ಮಾತ್ರ ಕೊಡುತ್ತಾರೆ.

ಸೌಜನ್ಯ : ಸಹ್ಯಾದ್ರಿ ಕರೆವಕ್ಕಲು


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading