ಜುಮ್ಮನ ಕಾಯಿ ಮತ್ತು ಮೀನಾ ಪಳ್ದಿ, ಉತ್ತರ ಕನ್ನಡಿಗರಿಗೆ ಇದುವೇ ಅಮೃತ.

Posted by

·

Zanthoxylum rhetsa

ಉಡುಪಿ ಜಿಲ್ಲೆಯ ಮಂಜುನಾಥ್ ಕಾಮತ್ ನಮ್ಮ ಜುಮ್ಮನ ಕಾಯಿ ಬಗ್ಗೆ ಹೀಗೆ ಬರೀತಾರೆ 🙂
ಈ ಹಿಂದೆ ನೋಡಿದ್ದು ಕೇವಲ ಹೈವೇಯ ಹೊನ್ನಾವರವನ್ನಷ್ಟೇ.. ಆದರೀಗ ಎರಡು ದಿನದಲ್ಲಿ ಕಾಡು, ಗುಡ್ಡ, ನದಿ ಕಡಲುಗಳನ್ನೂ ನೋಡಿ ಬಂದೆ.. ಬಾಯಿ ಮಾತಿಗೆ ಹೊನ್ನಾವರವನ್ನು ಚಿನ್ನದ ಊರು ಎನ್ನುತ್ತಿದ್ದೆ… ಈಗ ನಿಜಕ್ಕೂ ಹೇಳುತ್ತೇನೆ ಸೌಂದರ್ಯದಲ್ಲಿದು ಚಿನ್ನವನ್ನೂ ಮೀರಿಸಿದ್ದು…
ಇಲ್ಲಿ ಕಣ್ಣಿಗೆ ಬಣ್ಣ ಹೇಗಿದೆಯೋ ಹೊಟ್ಟೆಗೂ ಹಬ್ಬವೇ‌… ಹೊನ್ನಾವರದಾದ್ಯಂತ ಸುತ್ತಾಡಿಸಿದ ಮಹಲೆ ಅವರ ಕುಟುಂಬದ ಆತಿಥ್ಯ ಬಹಳ ವಿಶೇಷವಾಗಿತ್ತು.. ನಿನ್ನೆ, ಮೊನ್ನೆ ಅವರ ಮನೆಯಲ್ಲಿ ಕಾರ್ಯಕ್ರಮವೊಂದಿತ್ತು.. ಸಸ್ಯಹಾರ ಮಾತ್ರ. ಆದರೆ ನಾನು ಮೀನಿನ ವಿಷಯದಲ್ಲಿ ಬೆಕ್ಕು ಎಂದು ತಿಳಿದದ್ದೇ ಇವತ್ತು ಹಠ ಮಾಡಿ ನಿಲ್ಲಿಸಿದ್ದಾರೆ… ಮೂರು ಬಗೆಯ ಮೀನುಗಳನ್ನು ತಂದು, ರುಚಿಯಾದ ಅಡುಗೆ ಮಾಡಿ ನನಗೆ ಬಡಿಸಿದ್ದಾರೆ..
ಎಟ್ಟಿ ಸುಕ್ಕ… ಕೊಡ್ಡಾಯಿ ಫ್ರೈ… ಅಡೆ ಮೀನ ಸಾರು…ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರು, ಪಲ್ಯಗಳಿಗೆ ಶುಂಟಿ, ನೀರುಳ್ಳಿ ಬದಲಿಗೆ ಕುದಿ ಬರುತ್ತಿರುವ ಹೊತ್ತಿಗೆ ಜುಮ್ಮನ ಕಾಯಿಯನ್ನು (ತೆಪ್ಪಳ್) (Biological name- Zanthoxylum rhetsa) ಜಜ್ಜಿ ಹಾಕುತ್ತಾರೆ.. ಇದು ವಿಶೇಷ ರುಚಿಯೊಂದಿಗೆ ಶೀಘ್ರ ಜೀರ್ಣಕ್ಕೂ ಪೂರಕ…. ಅರವಿಂದ ಮಹಾಲೆ ಹಾಗೂ ಅವರ ಕುಟುಂಬಕ್ಕೆ ಹಾಗೆಯೇ ಇವರನ್ನು ಪರಿಚಯ ಮಾಡಿಸಿದ ವಿವೇಕ್ ಮಾಮ್ ಅವ್ರಿಗೆ ಧನ್ಯವಾದಗಳು…

✍️ ಮಂಜುನಾಥ ಕಾಮತ್, ಉಡುಪಿ

ಮೂಲ: Explore North Canara ಉತ್ತರಕನ್ನಡ ಜಿಲ್ಲೆ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading