ಹಲಸಿನ ಬೀಜದಹುಡಿಯ ಲಡ್ಡು, ಶಿರಾ… ಹಲಸಿನ ಹಣ್ಣಿನ ಸೀಸನ್ ಮುಗಿದೇ ಹೋಗಿದೆ. ಆದರೂ ಈಗಲೂ ಹಲಸಿನ ಹಣ್ಣಿನ ಜಾಕೋಲೇಟ್ ಚಪ್ಪರಿಸಬಹುದು. ಹಣ್ಣು ಮುಗಿದರೂ ಹಣ್ಣಿನ ಬೀಜ ನಿಮ್ಮಲ್ಲಿ ಇರಬಹುದು ಅಲ್ಲವೇ? ಅದರಿಂದ ಬಗೆ ಬಗೆಯ ಖಾದ್ಯ ಮಾಡಬಹುದು. ಹಣ್ಣಿನ ಬೀಜದ ಹುಡಿಯಿಂದಲೇ ಬಗೆಬಗೆಯ ಖಾದ್ಯ ತಯಾರಿಸಿ ಪ್ರಸಿದ್ಧಿ ಪಡೆದವರು ನಮ್ಮ ನಿಮ್ಮ ನಡುವೆಯೇ ಇದ್ದಾರೆ. ಇವರು ವಿನುತಾ ಹೆಗಡೆ. ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ತುಂಬೆಮನೆ. ಹಲವು ವರ್ಷಗಳಿಂದ ಇವರು ಹಲಸಿನ ಮೌಲ್ಯ ವರ್ಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಲಸಿನ ಜಾಕೊಲೇಟ್ ತಯಾರಿಸಿ, ರಾಜ್ಯಾದ್ಯಂತ ಮಾರಾಟ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಲಸಿನಬೀಜದ ಹುಡಿ ಮಾಡಿ ಅದರಿಂದ ಶಿರಾ, ಲಡ್ಡು, ಚಟ್ಣೆಹುಡಿ ಮೊದಲಾದ ಖಾದ್ಯ ತಯಾರಿಸುತ್ತಿದ್ದಾರೆ. ಇವರ ಹೊಸ ಹೊಸ ಉತ್ಪನ್ನಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಹಲಸಿನ ಚಾಕಲೇಟ್, ಹಲಸಿನ ಬೀಜದ ಹುಡಿ ಹಾಗೂ ಖಾದ್ಯಗಳು ಬೇಕಿದ್ದರೆ ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ- 9008035113, 9480447859. ಹಲಸಿನ ಬೀಜದ ಹುಡಿಯಿಂದ ನೀವು ಮನೆಯಲ್ಲೇ ಖಾದ್ಯ ಮಾಡಬಹುದು. ಹಲಸಿನ ಬೀಜದ ಹುಡಿ, ಹಾಲು, ಸಕ್ಕರೆ ಉಪಯೋಗಿಸಿ ಶಿರಾ ಮಾಡಬಹುದು. ಹಲಸಿನ ಬೀಜದ ಹುಡಿ, ಸಕ್ಕರೆಹುಡಿ ಮಿಶ್ರಣವನ್ನು ತುಪ್ಪದೊಂದಿಗೆ ಹುರಿದು ದ್ರಾಕ್ಷಿ, ಗೋಡಂಬಿ ಸೇರಿಸಿ ಲಡ್ಡು ಮಾಡಬಹುದು.
ಚಿತ್ರ, ವಿಡಿಯೋ ಕೃಪೆ: ವಿನುತಾ ಹೆಗಡೆ, ಗ.ಮ. ತುಂಬೆಮನೆ.


Leave a Reply