ಮತ್ತೆ ಮುಂಗಾರು…

Posted by

·

ಭೂರಮೆಯನ್ನು ಹಚ್ಚಹಸಿರಾಗಿ ನೋಡುವ ತವಕದಿಂದ ಮತ್ತೆ ಆಗಮಿಸಿದ ಮಳೆರಾಯ.ದೂರದ ಬೆಟ್ಟಗಳಲ್ಲಿ ಕವಿದ ಮಂಜು,ಅಲ್ಲಲ್ಲಿ ಹಸಿರ ಕಾನನಗಳ ಮಧ್ಯೆ ಧುಮ್ಮಿಕ್ಕಿ ಹರಿಯುವ ನದಿ,ಜಲಪಾತ ಹಾಗೇ ಕೃಷಿ ಚಟುವಟಿಕೆಗಳ ಆರಂಭ ಇವೆಲ್ಲವೂ ಸಂಪೂರ್ಣವಾಗಿ ಅವಲಂಬಿಸಿರುವುದು ಈ ಮಳೆಗಾಲವನ್ನು.
.
ಮಳೆಗಾಲ ಅಂದ್ರೆ ಯಾರಿಗ್ ತಾನೇ ಇಷ್ಟಇಲ್ಲಾ ಹೇಳಿ..ನಮ್ ಹುಡ್ಗಿಯರಂತೂ ಹಾಡಿ ಕುಣಿದು ಬಿಡ್ತಾರೆ(ಕೇವಲ ಕಾಲ್ಪನಿಕ😉). “ಸಾಕಪ್ಪ ಈ ಮಳೆ ಸಹವಾಸ,ಈ ಕೆಲ್ಸಾನೂ ಬೇಡ,ಮಳೆಲ್ಲಿ ಹೊರಗಡೆ ಹೋಗೋದು ಬೇಡ”ಅನ್ನೋ ಅಪ್ಪ.”ನಾನ್ ಯಾವ್ ವರ್ಷಾನು ಈ ತರ ಮಳೆ ಬಿದ್ದಿದ್ದ ನೋಡ್ಲೆ ಇಲ್ಲಾ..ಈ ವರ್ಷನೇ ಇಷ್ಟ್ ರಾಶಿ ಮಳೆ ಬಿದ್ದಿದ್”ಅಂತ ಪ್ರತಿ ವರ್ಷಾನು ಹೇಳೋ ಅಮ್ಮ.”ಮಗಾ..weather ಚೆನ್ನಾಗಿದೆ ಈ weekend ಒಂದ್ trip ಹೋಗೋಣ”ಅಂತ ದೋಸ್ತರನ್ನ ಕೂಡ್ಸೋ ಅಣ್ಣ. ಮಳೆಗಾಲ ಎಲ್ರಗೂ ಒಂದೇ ಆದ್ರೂನು ಅವರವರ ದೃಷ್ಟಿಯಲ್ಲಿ ಬೇರೆ ಭಾವನೆಗಳನ್ನೇ ಕಲ್ಪಿಸಿರುತ್ತೆ.
.
ಒಟ್ಟಿನಲ್ಲಿ ಇಷ್ಟೆಲ್ಲಾ ಅವಾಂತರ ಸೃಷ್ಟಿಸಿರೋ ಮಳೆರಾಯನಿಗೊಂದು ಧನ್ಯವಾದ ಹೇಳಲೇ ಬೇಕು.🙏🏻
.
ಮಳೆ ಬರಲಿ,ಚಳಿ ಇರಲಿ
ಬಿಸಿಲು ಕುದಿಸುತಲಿರಲಿ
ಮಂಜು ಸುರಿಯುತಲಿರಲಿ
ಮುಮ್ಮುಖ ಋತುಮಾನ ಹೇಗೂ ಇರಲಿ
.
ನಗುತ ಒಲಿವೆವು ನಾವು,
ನಗುತ ಒಲಿಸುವೆವು
-ದ.ರಾ. ಬೇಂದ್ರೆ

📸&✍🏼:  Supriya Saatu Gouda, Badageri, Ankola

Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading