Category: ಸಂಪ್ರದಾಯ

  • ದೀಪಾವಳಿ ಮತ್ತು ಹಿಂಡ್ಲೆಕಾಯಿ

    ಹಿಂಡ್ಲೆಕಾಯಿ – ಕುಕುರ್ಟಿಟಿಯೇಸಿ ಕುಟುಂಬದ ಕುಕುಮಿಸ್ ಟ್ರಯಗೊನಸ್ಆಧುನಿಕ ಭಾರತದ ದೀಪಾವಳಿಯ ಆಚರಣೆಯಲ್ಲಿ ಪಟಾಕಿಗಳಿಲ್ಲದೆ ದೀಪಾವಳಿಯ ಹಬ್ಬ ನಡೆಯದು ಎಂಬಷ್ಟರ ಮಟ್ಟಿಗೆ ಪಟಾಕಿಗಳಿಗೆ ಪ್ರಾಧಾನ್ಯ ಬಂದಿದೆ. ಆದರೆ ದೀಪಾವಳಿ ಕುರಿತ ಜನಪದ ಸಾಹಿತ್ಯದಲ್ಲಿ ಆದರ ಸೊಲ್ಲೇ ಇಲ್ಲ. ದೀಪಾವಳಿಯ ಯಾವ ಆಚರಣೆಯಲ್ಲಿಯೂ ಪಟಾಕಿಗಳಿಗೆ ಸ್ಥಾನವಿಲ್ಲ. ಯಾಕೆಂದರೆ ದೀಪಾವಳಿಯು ಆಧುನಿಕರ ಪಟಾಕಿಗಳ ಹಬ್ಬವಲ್ಲ, ಪ್ರಾಚೀನ ಕೃಷಿಕರ ಮದ್ದಿನ ಹಬ್ಬ. ಆದ್ದರಿಂದ ಇಲ್ಲಿಯ ಪ್ರತಿ ಆಚರಣೆಗಳಲ್ಲಿ ಮದ್ದಿನ ಗಿಡಗಳಿಗೆ ಹೆಚ್ಚು ಪ್ರಧಾನತೆಯಿದೆ. ತಗಟೆ, ಬೇವು, ನೆಲ ಬೇವು,ಲಿಂಗದೊಂಡೆಕಾಯಿ, ಹಾಲಿಮರ, ಗೊಬ್ಬರಕುಳಿ ಬೀಜ,…

  • ಮಾರಿಹೊರೆ – ತ್ಯಾಜ್ಯ ವಿಲೇವಾರಿ ಸಂಪ್ರದಾಯದ ಕಥೆ

    ಮಾರಿಹೊರೆ ಅರ್ಥಾತ್ ಉಡುಗಲಜ್ಜಿ ನೀವು ಕರ್ನಾಟಕದ ಪಶ್ಚಿಮ ಘಟ್ಟಗಳು ಮತ್ತು ಕರಾವಳಿಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ರಸ್ತೆಯ ಪಕ್ಕದಲ್ಲಿರುವ ವಿಚಿತ್ರವಾದ ವಿಲೇವಾರಿ ರಾಶಿಯನ್ನು ನೀವು ಇದ್ದಕ್ಕಿದ್ದಂತೆ ಗಮನಿಸಬಹುದು. ಇವು ಸಾಮಾನ್ಯ ಕಸ ವಿಲೇವಾರಿಗಳಲ್ಲ. ಇದು ಸಾಂಸ್ಕೃತಿಕ ಇತಿಹಾಸಉಳ್ಳಂತ ಆಸಕ್ತಿದಾಯಕ ಆಚರಣೆ ಹಾಗೂ ಸ್ಥಳೀಯರ ನಂಬಿಕೆ. ಕರ್ನಾಟಕದ ಅನೇಕ ರಾಜಮಾರ್ಗದ ಬದಿಯಲ್ಲಿ ಹರಕು ಮುರುಕಾದ ಒಂದಿಷ್ಟು ಹಳೆಯ ಸಾಮಾನು ಕಸದ ರಾಶಿಯ ದೊಡ್ಡದೊಡ್ಡ ಗಂಟು ಮೂಟೆಗಳು, ಅಲ್ಲೊಂದು ಮರದ ಹೆಣ್ಣುಗೊಂಬೆ, ಇವುಗಳ ಬಳಿ ಬಳೆ, ಕುಂಕುಮ, ಕೆಲವು ನಾಣ್ಯಗಳು ಕಾಣಿಸಿಕೊಳ್ಳುತ್ತವೆ.…

  • ಕೆಸುವಿನ ಎಲೆಯೇ ನಿಜವಾದ ಗೌರಿ | ಗೌರಿ ಪೂಜೆ ಆಚರಣೆ ಸಂಪ್ರದಾಯ

    ಕೆಸುವಿನೆಲೆಯಲ್ಲಿ ಗೌರಿ ಶ್ರೀಕೃಷ್ಣನ ಹಬ್ಬ ಮುಗಿಯುತ್ತಲೇ ಗೌರಿ ಗಣಪರ ಹಬ್ಬ ತೊಡಗುತ್ತದೆ. ಗೌರಿ ಮೂಲತಃ ಬೆಳೆ ದೇವತೆ. ಕರ್ನಾಟದ ಕರಾವಳಿಯಲ್ಲಿ ಬೆಳೆ ಕೊಯ್ಲಾಗುವ ಮುನ್ನ ಚವತಿಯ ಸಂದರ್ಭದಲ್ಲಿ ಈ ಬೆಳೆ ದೇವರ ಆರಾಧನೆ ನಡೆಯುತ್ತದೆ.. ಕೃಷಿಕರ ಮನೆಯಲ್ಲಿ ಕೆಸುವಿನೆಲೆಯು ಹಬ್ಬದಈ ದಿನ ಅಟ್ಟುಉಣ್ಣುವ ಆಡುಗೆಯ ಪರಿಕರ ವಷ್ಟೇ ಅಲ್ಲ. ಇದು ಸಾಕ್ಷಾತ್ ಗೌರಿಯಾಗಿ ಪೂಜೆಗೊಳ್ಳುತ್ತದೆ. ಗೌರಿ ಮಣ್ಣಿನ ಗೊಂಬೆಯಲ್ಲ, ತಾಮ್ರದ ಬೆಳ್ಳಿಯ, ಕಂಚಿನ ಕಳಸವೂ ಅಲ್ಲ. ಮೂಲತಃ ಇವಳೊಬ್ಬ ಸಸ್ಯ ದೇವತೆ. ಕೆಸುವಿನೆಲೆಯಲ್ಲಿ ಗೌರಿ ರೂಪು ಗೊಳ್ಳುತ್ತಾಳೆ.…

  • ಗಡಿ ಪೂಜೆಯ ಮೌಲ್ಯ

    ಗಡಿಮಳೆ ಪ್ರಾರಂಭವಾದೊಡನೆ ಹಳ್ಳಿಗಳಲ್ಲಿ, ಊರುಗಳಲ್ಲಿ, ಗ್ರಾಮಗಳಲ್ಲಿನ ಜನರಲ್ಲಿ ಪ್ರಾರಂಭವಾಗುವುದು ಈ ಗಡಿಪೂಜೆ. ಹಸಿರುಪೂಜೆ, ಆವಾರಿ, ಕೋಳಿಮಾಯ್ಸ, ತುಗ್ಟಿ, ನೆಂಟರೂಟ ಇತ್ಯಾದಿ ಹೆಸರಿನಲ್ಲಿ ಗ್ರಾಮದೇವತೆಗಳ ಪೂಜೆಗಳು ವ್ಯಾಪಕವಾಗಿ ತಲಾಂತರದಿಂದ ನಡೆದುಕೊಂಡು ಬಂದಿರುತ್ತದೆ. ಈ ಗ್ರಾಮದೇವತೆ ಇಲ್ಲದ ಊರು, ಹಳ್ಳಿ, ಗ್ರಾಮ ಇಲ್ಲವೇ ಇಲ್ಲ. ಒಂದು ಗ್ರಾಮದಲ್ಲಿ ಕನಿಷ್ಟ ಪಕ್ಷ ಒಂದಾದರೂ ಗ್ರಾಮದೇವತೆ ಇದ್ದೇ ಇದೆ. ಕೆಲವಡೆ ಒಂದಕ್ಕಿಂತ ಹೆಚ್ಚು ದೇವತೆಗಳು ಇವೆ. ನಮ್ಮ ಪೂರ್ವಜರು ತಮ್ಮ ಹಳ್ಳಿಗೆ ಅಪಾಯ ಬಂದಾಗ, ರೋಗರುಜಿನಿ ಬಂದಾಗ, ತಮ್ಮ ರಕ್ಷಣೆಗಾಗಿ, ನಂಬಿಕೆಗಾಗಿ ಅಂದು…

You cannot copy content of this page