Category: ನಾಡು ನುಡಿ
-

ಮಾವಿನ ಸ್ವರ್ಗ ಅಂಕೋಲಾ!
“ಅಂಕೋಲಾ” ಇದು ಸತ್ಯಾಗ್ರಹಿಗಳ ತವರೂರು. ಕರ್ನಾಟಕದ ಬಾರ್ಡೋಲಿ ಎಂದೇ ಪ್ರಸಿದ್ಧಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕಾ ಕೇಂದ್ರ. ಕರಾವಳಿ ಭಾಗದ ಮಾವಿನಹಣ್ಣು ಅಂದರೆ ಮೊದಲು ನೆನಪಾಗುವುದೇ ಅಂಕೋಲಾ. ಮನಮೋಹಕ ಸುವಾಸನೆ ಹಾಗೂ ವಿಶೇಷ ರುಚಿ ಇಂದ ಪ್ರಸಿದ್ಧಿ ಹೊಂದಿರುವ “ಇಸಾಡ” ಹಣ್ಣಿಗೂ ಅಂಕೋಲಾ ಮಣ್ಣಿಗೂ ಏನೋ ಒಂದು ಅವಿನಾಭಾವ ಸಂಬಂಧವಿದೆ. ಯಾಕೆಂದರೆ ಈ ತಳಿಯು ಎಲ್ಲಾ ತರಹದ ಮಣ್ಣುಗಳಲ್ಲಿ ಬೆಳೆಯುವುದಿಲ್ಲ. ಮಳೆಗಾಲದ ಪೂರ್ವದಲ್ಲಿ ಸಿಗುವ ಈ “ಇಶಾಡು ” ಹಣ್ಣನ್ನು ಕರಾವಳಿ ತಾಲೂಕುಗಳಾದ ಕಾರವಾರ,ಅಂಕೋಲಾ,…
-

ಕರ್ನಲ್ ಹಿಲ್ ಸ್ಮಾರಕ, ಹೊನ್ನಾವರ
ಇದು ಹೊನ್ನಾವರ ಪಟ್ಟಣದಲ್ಲಿ ಸೂರ್ಯಾಸ್ತವನ್ನು ವೀಕ್ಷಿಸಲು ಉತ್ತಮ ಸ್ಥಳ. ಇದು ಬ್ರಿಟಿಷ್ ಸೇನೆಯ ಕರ್ನಲ್ ಹಿಲ್‌ಗಾಗಿ ನಿರ್ಮಿಸಲಾದ ಸ್ಮಾರಕವಾಗಿದೆ. ಅವರ ಮುಖ್ಯ ಕಮಾಂಡರ್ (ಕರ್ನಲ್ ಹಿಲ್) ಜನವರಿ 20, 1854 ರಂದು ಗೆರುಸೊಪ್ಪಾ ರಾಣಿಯೊಂದಿಗಿನ ಯುದ್ಧದಲ್ಲಿ ಕೊಲ್ಲಲ್ಪಟ್ಟರು. ಬ್ರಿಟಿಷರು 1854 ರಲ್ಲಿ ಹೊನ್ನಾವರದ ಗುಡ್ಡದ ಮೇಲೆ ಕರ್ನಲ್ ಗೌರವಾರ್ಥವಾಗಿ ಬೃಹತ್ ಅಂಕಣವನ್ನು ನಿರ್ಮಿಸಿದರು. ಇಂದಿಗೂ, ಈ ಅಂಕಣ ಮತ್ತು ಕಳಪೆ-ನಿರ್ವಹಣೆಯ ಸುತ್ತಮುತ್ತಲಿನ ಉದ್ಯಾನವನಕ್ಕೆ ಪ್ರವಾಸಿಗರು ಭೇಟಿ ನೀಡುತ್ತಾರೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66 ರಿಂದ ಈ ಹಂತವನ್ನು…
-

ಕಡಲನಗರಿ ಕಾರವಾರದ ಜ್ಞಾನ ಮಂದಿರ, ಬೈತಖೋಲ್
ನಯನ ಮನೋಹರ ಕಾಳಿ ಸಂಗಮ, ಸುಂದರ ಕಡಲ ಕಿನಾರೆಗಳು, ದ್ವೀಪಗಳು ಹಾಗೂ ಸಹ್ಯಾದ್ರಿ ಗಿರಿಶಿಖರಗಳಿಂದ ಆವ್ರತ ಕಾರವಾರದ ಪರಿಸರ ಸದಾ ಮನಸ್ಸುಗಳನ್ನು ಪುಳುಕಿತಗೊಳಿಸುವಂತದ್ದು. ರಾಷ್ಟ್ರಕವಿ ಟ್ಯಾಗೋರ್ ರವರ ಮನವನ್ನೂ ಅರಳಿಸಿದ ಕಾರವಾರದಲ್ಲಿ ನವನಾಥ ಪಂಥದ ಜ್ಞಾನ ಮಂದಿರ ಒಂದಿದೆ ಅನ್ನುವುದು ನನಗೆ ತಿಳಿದೇ ಇರಲಿಲ್ಲ. ಕರ್ನಾಟಕದ ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ವಿಶಿಷ್ಟ ಕೊಡುಗೆ ನೀಡಿರುವ ಅಂಕೋಲೆಗೆ ಹೋಗುವ ದಾರಿಯಲ್ಲಿ ಬೈತಖೋಲ್ ಬೆಟ್ಟದ ತಿರುವಿನಲ್ಲಿರುವ ಈ ಸ್ಥಳವನ್ನು ನೋಡುವ ಸದಾವಕಾಶ ನನಗೆ ಇತ್ತೀಚೆಗೆ ಒದಗಿ ಬಂದಿತ್ತು. ಪ್ರಾಚೀನ ನಾಥ…
-

ಆಂಗ್ಲರು ನಿರ್ಮಿಸಿದ ಅಂಕೋಲೆಯ ಕಂದಾಯ ಕಚೇರಿ ಹಾಗೂ ಪೊಲೀಸ್ ಠಾಣೆ
“”ನೆನಪಿನಂಗಳದಿ”” ಆಂಗ್ಲರು ನಿರ್ಮಿಸಿದ ಅಂಕೋಲೆಯ ಕಂದಾಯ ಕಚೇರಿ ಹಾಗೂ ಪೊಲೀಸ್ ಠಾಣೆ ಮತ್ತು ಪೊಲೀಸಪ್ಪ ಘರ್ಜಿಸುವ… “”ಹೂ ಕಮ್ಡೊ, ಪೆಂಡೋಪ್ಪೋ”” ಅಂಕೋಲೆಯ ಕಂದಾಯ ಕಚೇರಿಯ ಸಂಕೀರ್ಣವು ಎಂದು ನಿರ್ಮಾಣಗೊಂಡಿತ್ತು ಎನ್ನುವ ನಿರ್ದಿಷ್ಟ ವರ್ಷದ ದಾಖಲೆ ಇಲ್ಲದಿದ್ದರೂ, ಇದು ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ, ಆಗಾಗ ರಿಪೇರಿ ಕಂಡ ಸ್ವಾತಂತ್ರ ಪೂರ್ವದ ಮತ್ತು ಆ ನಂತರದ ಅಧಿಕಾರಿಗಳ ದರ್ಪವನ್ನು ಕಂಡ ಬೃಹತ್ ಕಟ್ಟಡವಾಗಿತ್ತು. ತಮಗೆ ಗೊತ್ತಿರುವಂತೆ ಬ್ರಿಟಿಷ್ ಆಡಳಿತದ ವ್ಯವಸ್ಥೆಯಲ್ಲಿ ಕಂದಾಯ ವಸೂಲಿ ಕಚೇರಿ ಮತ್ತು ಪೊಲೀಸ್ ವ್ಯವಸ್ಥೆಯ ಕಚೇರಿಯು…
-

ಅಂಕೋಲಾದ ಧರ್ಮಶಾಲೆ – ನಮ್ಮೂರಿನ ಮರೆಯಲಾಗದ ಆ ನೆನಪಿನ ಸುರುಳಿಗಳಲ್ಲಿಯ “ಧರ್ಮ ಶಾಲೆ”.
“ನೆನಪಿನಂಗಳದಿ” ಹಾಂ, ಅಂಕೋಲೆಯಲ್ಲೊಂದು “ಧರ್ಮಶಾಲೆ ” ಇತ್ತು ಎಂಬ ವಿಷಯವು ಸಾಕಷ್ಟು ಜನರಿಗೆ ಅದರಲ್ಲೂ ಇಂದಿನ ಹೊಸ ಪೀಳಿಗೆಗೆ ಗೊತ್ತಿರಲಿಕ್ಕಿಲ್ಲ. ಹಿರಿಯರನ್ನು ಬಿಟ್ಟರೆ, ಹೆಚ್ಚಿನವರು ಅದನ್ನು ನೋಡಿರಲಿಕ್ಕಿಲ್ಲ. ಆಗಿನ ಕಾಲದಲ್ಲಿ ಇಂದಿನಂತೆ ವಾಸ್ತವ್ಯಕ್ಕೆ ಹೋಟೆಲ್, ಲಾಡ್ಜ್ ಇತ್ಯಾದಿಗಳಿರಲಿಲ್ಲ. ಹೊರಗಿನವರು, ಅಂದರೆ ಸ್ಥಳೀಯವಾಗಿ ಸಮ್ಮಂದಿಗಳು, ಮನೆ ಮಠ ಇತ್ಯಾದಿ ಇಲ್ಲದವರಿದ್ದರೆ, ಅಕಸ್ಮಾತ್ ಆಗಿ ಬಂದ ಪ್ರಯಾಣದ ಸುಸ್ತನ್ನು ನಿವಾರಿಸಿಕೊಂಡು ಹಂಗಾಮಿಯಾಗಿ ವಾಸ್ತವ್ಯ ಮಾಡುವ ಪ್ರಸಂಗಬಂದರೆ ಇರುವ ಏಕೈಕ ಆಶ್ರಯತಾಣ ಊರ ಮಧ್ಯದಲ್ಲಿರುವ ಈ ‘ಧರ್ಮಶಾಲೆ ‘ ಆಗಿತ್ತು. ಆಗಿನ…
-

ಕದಂಬರ ರಾಜಧಾನಿಯಾಗಿದ್ದ ಬನವಾಸಿಯ ಸಂಪೂರ್ಣ ಮಾಹಿತಿ.
ಬನವಾಸಿ ಪಟ್ಟಣವು ಐತಿಹಾಸಿಕವಾಗಿ ಸಾಕಷ್ಟು ಶ್ರೀಮಂತಿಕೆ ಇರುವ ಪಟ್ಟಣ. ಪುರಾತನ ಕಾಲದಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಾಂತ್ಯವನ್ನಾಳಿರುವ ಕದಂಬರ ವೈಭವಯುತ ರಾಜಧಾನಿಯಾಗಿತ್ತು ಇಂದಿನ ಬನವಾಸಿ. ಹಾಗಾಗಿ ಕದಂಬರ ವಾಸ್ತುಶೈಲಿ ಪ್ರಭಾವ ಇಂದಿಗೂ ಈ ಪಟ್ಟಣದಲ್ಲಿ ಕಂಡುಬರುವ ವಿವಿಧ ರಚನೆಗಳಲ್ಲಿ ಕಾಣಬಹುದಾಗಿದೆ. ಅರಣ್ಯ ಪ್ರದೇಶವಾಗಿತ್ತು ಬನವಾಸಿ: ಉತ್ತರ ಕನ್ನಡ ಜಿಲ್ಲೆಯ ವರದಾ ನದಿಯ ತಟದಲ್ಲಿ ಸ್ಥಿತಗೊಂಡಿರುವ ಬನವಾಸಿ. ‘ಬನ’ ಮತ್ತು ‘ವಾಸಿ’ ಪದಗಳಿಂದ ಬನವಾಸಿ ಎಂಬ ಹೆಸರು ಬಂದಿದ್ದು ಕ್ರಮವಾಗಿ ‘ಕಾಡು’ ಮತ್ತು ‘ವಸಂತ’ ಎಂಬ ಅರ್ಥವನ್ನು…
-

ರಭಸವಾಗಿ ಹರಿಯುವ ತೊರೆಯೇ ಅಂಕೋಲಾದ ಆಂದಲೆ ಆಗಿದೆ!
ಬಳಲೆ ಗುಡ್ಡದ ಉತ್ತರಕ್ಕೆ ತಗ್ಗಿನಲ್ಲಿದೆ ಆಂದಲೆ ಗ್ರಾಮ. ಮಳೆಗಾಲದಲ್ಲಿ ರಭಸವಾಗಿ ಹರಿಯುವ ತೊರೆಯಿಂದಾಗಿ ಆಂದಲೆ ಹೆಸರು ಪಡೆದಿದೆ. [ಆರಂದ್ +ಏಲ್ > ಆರಂದೇಲ್> ಆಂದೇಲ್> ಆಂದಲೆ. (ಆರ್- ಜಲವಾಚಕ ಪ್ರತ್ಯಯ).] ಗುಡ್ಡಗಳಿಂದ ಸುತ್ತುವರೆದಿರುವುದರಿಂದ ತೇವಾಂಶವುಳ್ಳ ಸಾಗುವಳಿಯ ಭೂಮಿಯನ್ನು ಪಡೆದಿದೆ. ಅದೇ ಹಳ್ಳದ ತಟದಲ್ಲಿ ನಿಂತಿರುವ ಗ್ರಾಮದ ದೈವತ ಹೊನ್ನ ಅಂತಹುದೇ ಜಲವಾಚಿಕ ಪ್ರತ್ಯಯವನ್ನು ಹೊಂದಿದೆ; ಜನ್ + ಕೋಡ್ (ಜನಿಯುವಿಕೆ ಅಂದರೆ ಆ ತೊರೆಯ ಹರಿಯುವಿಕೆ;) ಈ ಪ್ರತ್ಯಯವುಳ್ಳ ಸ್ಥಳನಾಮಗಳು ಅಂಕೋಲೆಯಲ್ಲಿ ಇನ್ನೂ ಕೆಲವಡೆ ಸಿಗುತ್ತವೆ. ಹಳ್ಳದಂಡೆಯ…
-

ಮುರುಡೇಶ್ವರ – ಕಂಡುಕಾ ಗಿರಿ ಶಿಖರ
ಕರ್ನಾಟಕದ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡ ತನ್ನದೇ ಆದ ವೈಶಿಷ್ಟ್ಯ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿದ ಜಿಲ್ಲೆಯಾಗಿದೆ. ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಜಿಲ್ಲೆಯ ವೈಶಿಷ್ಟ್ಯಕ್ಕೆ ಇನ್ನೊಂದು ಹಿರಿಮೆ ಆಗಿದೆ. ಮುರುಡೇಶ್ವರ ಎಂದೊಡನೆ ನಮಗೆ ನೆನಪಾಗುವುದು ಅಲ್ಲಿಯ ಎತ್ತರದ ಶಿವನ ಪ್ರತಿಮೆ. “ಕಂಡುಕಾ ಗಿರಿ” ಶಿಖರದಲ್ಲಿ ನೆಲೆಸಿರುವ ಮುರುಡೇಶ್ವರ ದೇವಾಲಯ ಮತ್ತು ರಾಜಗೋಪುರ ಮುರುಡೇಶ್ವರದ ಪ್ರಮುಖ ಆಕರ್ಷಣೆ ಆಗಿದೆ. ಅಂಕಿ ಅಂಶಗಳ ಪ್ರಕಾರ ನೇಪಾಳದ ಕೈಲಾಸನಾಥ ಮಹಾದೇವ ಪ್ರತಿಮೆಯ ನಂತರ ವಿಶ್ವದ ಎರಡನೇ ಅತಿ ಎತ್ತರದ ಶಿವ ಪ್ರತಿಮೆ…
-

ಉತ್ತರ ಕನ್ನಡದ ವಜ್ರಮಾಲಾ ಜಲಪಾತ, ಮಾನವ ಮುಟ್ಟದ ಸ್ವರ್ಗ!
ಯಲ್ಲಾಪುರದಿಂದ 30 ಕಿ.ಮೀ ದೂರದಲ್ಲಿರುವ ಕಾನೂರು ಜಲಪಾತವನ್ನು ದೇವಕಾರ ಜಲಪಾತ, ವಜ್ರಮಾಲಾ ಜಲಪಾತ ಎಂದೂ ಕರೆಯುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಸುಮಾರು 300 ಅಡಿಯಿರುವ ಕಾನೂರು ಜಲಪಾತವು ಕಾನೂರು ಎಂಬ ಸಣ್ಣ ಗ್ರಾಮದಲ್ಲಿದೆ. ಇದು ಕದ್ರಾ ಅಣೆಕಟ್ಟಿನ ಹಿನ್ನೀರಿನಿಂದ ಆವೃತವಾಗಿದೆ. ನೀರು ಬೀಳುವಾಗ ವಜ್ರದಂತೆ ಹೊಳೆಯುವುದರಿಂದ ಈ ಜಲಪಾತವನ್ನು ಸ್ಥಳೀಯರು ವಜ್ರಮಾಲಾ ಜಲಪಾತ ಎಂದು ಕರೆಯುತ್ತಾರೆ. ಪ್ರಚಾರದ ಕೊರತೆಯಿಂದಾಗಿ ಈ ಸುಂದರವಾದ ಜಲಪಾತವು ಇನ್ನೂ ಬಹಳಷ್ಟು ಜನರಿಗೆ ತಿಳಿದಿಲ್ಲ. ಅಂದಹಾಗೆ ಜಲಪಾತದ ನೀರು…
