
ಯಲ್ಲಾಪುರದಿಂದ 30 ಕಿ.ಮೀ ದೂರದಲ್ಲಿರುವ ಕಾನೂರು ಜಲಪಾತವನ್ನು ದೇವಕಾರ ಜಲಪಾತ, ವಜ್ರಮಾಲಾ ಜಲಪಾತ ಎಂದೂ ಕರೆಯುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ.

ಸುಮಾರು 300 ಅಡಿಯಿರುವ ಕಾನೂರು ಜಲಪಾತವು ಕಾನೂರು ಎಂಬ ಸಣ್ಣ ಗ್ರಾಮದಲ್ಲಿದೆ. ಇದು ಕದ್ರಾ ಅಣೆಕಟ್ಟಿನ ಹಿನ್ನೀರಿನಿಂದ ಆವೃತವಾಗಿದೆ. ನೀರು ಬೀಳುವಾಗ ವಜ್ರದಂತೆ ಹೊಳೆಯುವುದರಿಂದ ಈ ಜಲಪಾತವನ್ನು ಸ್ಥಳೀಯರು ವಜ್ರಮಾಲಾ ಜಲಪಾತ ಎಂದು ಕರೆಯುತ್ತಾರೆ. ಪ್ರಚಾರದ ಕೊರತೆಯಿಂದಾಗಿ ಈ ಸುಂದರವಾದ ಜಲಪಾತವು ಇನ್ನೂ ಬಹಳಷ್ಟು ಜನರಿಗೆ ತಿಳಿದಿಲ್ಲ. ಅಂದಹಾಗೆ ಜಲಪಾತದ ನೀರು ಕೈಗಾ ಜಲಾಶಯ ತಲುಪುತ್ತದೆ.

ಹಳ್ಳಿಯ ಸೊಗಡು ಸವಿಯಬೇಕೆನ್ನುವವರು ಸ್ವಂತ ವಾಹನದಲ್ಲಿ ಜಲಪಾತ ನೋಡಲು ಈ ಮಾರ್ಗದಲ್ಲಿ ತೆರಳಬಹುದು. ಯಲ್ಲಾಪುರ ಪಟ್ಟಣದಿಂದ ಎನ್ಎಚ್ 67 ರಲ್ಲಿ ಇಡಗುಂಡಿ ಹಳ್ಳಿಯವರೆಗೆ ಹೋಗಿ. ನಂತರ SH 6 ರಸ್ತೆಯಲ್ಲಿ ತೆರಳಿ. ವಾಗಳ್ಳಿ ಕ್ರಾಸ್ ಹತ್ತಿರ ಬಲಕ್ಕೆ ತಿರುಗಿ 5 ಕಿ.ಮೀ ಪ್ರಯಾಣಿಸಿದರೆ ಕಾನೂರು ಗ್ರಾಮ ಸಿಗುತ್ತದೆ ಇಲ್ಲಿಯ ವರೆಗೆ ಸಿಮೆಂಟ್ ರಸ್ತೆ ಇದೆ. ಇಲ್ಲಿಂದ ಮುಂದೆ 2 ಕಿ.ಮೀ ಮಣ್ಣಿನ ರಸ್ತೆ ಯಲ್ಲಿ ಸಾಗಿದರೆ ನಂತರ 10ನಿಮಿಷದ ಕಾಲುದಾರಿ ನಡೆದರೆ ಜಲಪಾತ ತಲುಪಬಹುದು.
ಮಾಹಿತಿ: ನಿರಂಜನ್ ಭಟ್


Leave a Reply