Category: ದೇವರು
-

ಕರ್ನಾಟಕದ ತಿರುಪತಿ – ಶ್ರೀ ಕ್ಷೇತ್ರ ಮಂಜುಗುಣಿ – ಸಂಪೂರ್ಣ ಮಾಹಿತಿ
ನಮ್ಮ ಭಾರತ ದೇಶದಲ್ಲಿ ರಹಸ್ಯಮಯವಾದ ಪ್ರಾಣಪ್ರತಿಷ್ಠೆಮಾಡುವ ವೈಜ್ಞಾನಿಕ ವಿಧಾನಗಳನ್ನು ತಿಳಿಸಿಕೊಟ್ಟ ನಮ್ಮ ಋಷಿಮುನಿಗಳ ಕೊಡುಗೆ ಅಪಾರ. ಅದರಂತೆ ಅವರು ಬಹಳಷ್ಟು ಶಕ್ತಿ ಸ್ಥಳಗಳನ್ನು ಎಲ್ಲರ ಅಭ್ಯುದಯಕ್ಕಾಗಿ ನಿರ್ಮಿಸಿದ್ದಾರೆ. ಅಂಥಹ ಮಹತ್ತರವಾದ ಶಕ್ತಿ ಕೇಂದ್ರಗಳಲ್ಲಿ ತಿರುಮಲ ಯೋಗಿವರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಕ್ಷೇತ್ರ ಮಂಜಗುಣಿಯೂ ಒಂದು. ಈ ಶ್ರೀ ಕ್ಷೇತ್ರವು ಆಧ್ಯಾತ್ಮಿಕವಾಗಿ ಅಂತರ್ಮುಖಗೊಳಿಸಲಿಚ್ಛಿಸುವ ಸಾಧಕರಿಗೆ ಅತ್ಯಂತ ಸಹಾಯಕವಾದ ಸ್ಥಳವಾಗಿ ಮಾರ್ಪಟ್ಟಿದೆ. ಶಿರಸಿಯಿಂದ ೨೫ ಕಿಲೊಮೀಟರ್ ಅಂತರದಲ್ಲಿ ಶಿರಸಿ ಕುಮಟಾ ಮಾರ್ಗದ ಬಲಭಾಗದಲ್ಲಿರುವ ಮಂಜುಗುಣಿ ಕ್ಷೇತ್ರ ಕರ್ನಾಟಕದ ತಿರುಪತಿ ಎಂದೇ ಪ್ರಖ್ಯಾತವಾಗಿರುವ…
-

ಶಿರಸಿ ಮಾರಿಕಾಂಬೆಯ ಇತಿಹಾಸ, ಮಹತ್ವ ಮತ್ತು ಜಾತ್ರಾ ಮಹೋತ್ಸವದ ಬಗ್ಗೆ ಗೊತ್ತೇ..?
ಶಿರಸಿ ಮಾರಿಕಾಂಬಾ ದೇವಿ ದೇವಸ್ಥಾನವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸಾಕಷ್ಟು ಪ್ರಸಿದ್ಧವಾದ ದೇವಾಲಯವಾಗಿದೆ. ಇಲ್ಲಿನ ಜಾತ್ರಾ ಮಹೋತ್ಸವವೇ ವಿಶ್ವ ಪ್ರಸಿದ್ಧ. ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದ ಇತಿಹಾಸವೇನು..? ಈ ದೇವಾಲಯದ ಮಹತ್ವವೇನು..? ಇಲ್ಲಿನ ಜಾತ್ರಾ ಮಹೋತ್ಸವ ಹೇಗಿರುತ್ತೆ ಗೊತ್ತೇ..? ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯವು ಉತ್ತರ ಕನ್ನಡದ ಅತ್ಯಂತ ಪ್ರಸಿದ್ಧ ಮತ್ತು ಪುರಾತನ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯ ಉತ್ತರ ಕರ್ನಾಟಕದಲ್ಲಿದ್ದರು ಕೂಡ ಇದರ ಕೀರ್ತಿ ಸಂಪೂರ್ಣ ಕರ್ನಾಟಕವನ್ನೇ ಆವರಿಸಿಕೊಂಡಿದೆ. ದೇಶ ವಿದೇಶಗಳಿಂದ ಭಕ್ತರು…
-

ಉತ್ತರ ಕನ್ನಡ ಜಿಲ್ಲೆಯ ಪಂಚಲಿಂಗ ದರ್ಶನ – ಶಿವರಾತ್ರಿ ವಿಶೇಷ
ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸುವ ಮಾಹಾ ಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇಡೀ ದಿನ ಉಪವಾಸ ಜಾಗರಣೆಗಳನ್ನು ಮಾಡಿ, ೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ.ನಾಡಿನಾದ್ಯಂತ ಇರುವ ಶಿವನ ದೇಗುಲಗಳಲ್ಲಿ ಅತಿ ವಿಶಿಷ್ಟ ಹಾಗೂ ಪ್ರಸಿದ್ಧಿ ಪಡೆದು ಸಾವಿರಾರು ಭಕ್ತವೃಂದವನ್ನು…
-

ಶ್ರೀ ವೆಂಕಟ್ರಮಣ ದೇವಸ್ಥಾನ, ಕುಮಟಾ – ಇತಿಹಾಸ, ಉತ್ಸವಗಳು, ಶ್ಲೋಕಗಳು..
ವೆಂಕಟ್ರಮಣ ದೇವಸ್ಥಾನವು ವಿಷ್ಣು ದೇವಸ್ಥಾನಕ್ಕೆ ಸಮರ್ಪಿತವಾದ ದೇವಾಲಯವಾಗಿದೆ. ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕುಮಟಾ (ಕುಂಭಪುರಿ) ಪಟ್ಟಣದಲ್ಲಿದೆ. ಈ ದೇವಾಲಯದ ಪುನರ್ ಪ್ರತಿಷ್ಠೆಯನ್ನು ಶ್ರೀ ಎಚ್. ಎಚ್. ಶ್ರೀಮತ್ ವಿದ್ಯಾಧಿರಾಜ್ ತೀರ್ಥ ಸ್ವಾಮೀಜಿ 23 ಮೇ 1991 ರಂದು ಮಾಡಿದರು. ಶ್ರೀ ವೆಂಕಟ್ರಮಣ ದೇವರ ದೇವಸ್ಥಾನವನ್ನು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ನಿರ್ವಹಿಸುತ್ತದೆ, ಈ ದೇವಸ್ಥಾನವನ್ನು ಮಠ (ಆಧ್ಯಾತ್ಮಿಕ, ದೈವಿಕ ಮತ್ತು ಸಾಮಾಜಿಕ ಕೇಂದ್ರ) ಎಂದೂ ಕರೆಯುತ್ತಾರೆ. ಪ್ರಧಾನ ದೇವತೆಗಳಾದ ಭಗವಾನ್ ಗೋಪಾಲಕೃಷ್ಣ…
-

ಲಿಂಗಾಯತ ಜನರು ಬಹುವಾಗಿ ಗೌರವಿಸುವ ಚನ್ನಬಸವಣ್ಣನವರ ಸಮಾಧಿ ಇಲ್ಲಿ ಇದೆ – ಉಳವಿ, ಉತ್ತರ ಕನ್ನಡ
ಉಳವಿ ಕ್ಷೇತ್ರವು ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಜೋಯಿಡಾ ತಾಲ್ಲೂಕಿನ ದಕ್ಷಿಣಕ್ಕೆ 20 ಮೈಲಿ ದೂರದಲ್ಲಿ ಯಲ್ಲಾಪುರಕ್ಕೆ ಸಮೀಪದಲ್ಲಿರುವ ಒಂದು ಗ್ರಾಮ, ಪುರಾತನ ಸ್ಥಳ, ದುರ್ಗಮ ಪ್ರದೇಶ ಮತ್ತು ಪವಿತ್ರ ಯಾತ್ರಾ ಸ್ಥಳವಾಗಿದೆ. ಇಲ್ಲಿ ಪ್ರಖ್ಯಾತ ಚನ್ನಬಸವೇಶ್ವರ ದೇವಾಲಯವಿದೆ. ಇದು ಕಾರವಾರದಿಂದ ಸುಮಾರು ೭೫ ಕಿ.ಮೀ. ದೂರದಲ್ಲಿದೆ. ಉಳವಿ ಲಿಂಗಾಯತ ಜನರ ಒಂದು ಪ್ರಮುಖ ಯಾತ್ರಾಸ್ಥಳವಾಗಿದೆ. ಲಿಂಗಾಯತ ಜನರು ಬಹುವಾಗಿ ಗೌರವಿಸುವ ಚನ್ನಬಸವಣ್ಣನವರ ಸಮಾಧಿ ಇಲ್ಲಿ ಇದೆ. ಉಳುವಿ ಅಣಶಿ ಘಟ್ಟದ ಹಾಗೂ ಸುಪದ ಮೇಲಿಂದ ಇಲ್ಲಿಗೆ ಬರಲು ಎರಡು…
-

ಇಲ್ಲಿ ಮದ್ಯ, ಸಿಗರೇಟುಗಳನ್ನು ಭಗವಂತನಿಗೆ ನೀಡಲಾಗುತ್ತದೆ – ಖಾಫ್ರಿದೇವ್ ಕಾರವಾರ.
ಮದ್ಯದ ಬಾಟಲಿಯೊಂದಿಗೆ ದೇವಾಲಯಕ್ಕೆ ತೆರಳುವುದನ್ನು ಅಥವಾ ಭಗವಂತನಿಗೆ ಸಿಗರೇಟನ್ನು ಅರ್ಪಿಸುವುದನ್ನು ಯಾರೂ ಊಹಿಸದಿರಬಹುದು, ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಒಂದು ದೇವಾಲಯದಲ್ಲಿನ ಈ ಪದ್ಧತಿ ನಿಮ್ಮ ಊಹೆಗೆ ನಿಲುಕಲಾರದ್ದಾಗಿದೆ. ಕೋಡಿಬಾಗ್ ನಲ್ಲಿರುವ ಖಾಪ್ರಿ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ಪ್ರತಿ ವರ್ಷ ವಾರ್ಷಿಕ ಜಾತ್ರಾ ಆಚರಣೆಯ ಸಮಯದಲ್ಲಿ ವಿಚಿತ್ರ ಆಚರಣೆಯನ್ನು ಅನುಸರಿಸುತ್ತಾರೆ. ಕ್ರೈಸ್ತರು ಸೇರಿದಂತೆ ಕಾರವಾರ, ಗೋವಾ, ಮಹಾರಾಷ್ಟ್ರಗಳಿಂದ ಸಾವಿರಾರು ಎಲ್ಲಾ ಧರ್ಮದ ಜನರು ಉತ್ಸವದಲ್ಲಿ ಭಾಗವಹಿಸುತ್ತಾರೆ. ಪ್ರತಿ ವರ್ಷವೂ ಈ ದೇವಾಲಯದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ…
-

ಈ ಚಂದಗುಳಿ ಗಣಪನಿಗೆ ಘಂಟೆಯೇ ನೈವೇದ್ಯ!
ಏನು ನಿಮ್ಮ ಸಮಸ್ಯೆ? ನೌಕರಿಯಾಗಿಲ್ಲವಾ?, ವಯಸ್ಸು 40 ದಾಟಿದರೂ ಮದುವೆಯ ಭಾಗ್ಯ ಕೂಡಿ ಬಂದಿಲ್ಲವಾ? ದಾಯಾದಿ ಕಲಹವಾ? ಆಸ್ತಿ ಸಮಸ್ಯೆಯಾ? ಸಂತಾನವಿಲ್ಲವಾ? ಆರೋಗ್ಯ ಹದಗೆಟ್ಟಿದೆಯಾ? ಚಿಂತೆ ಬಿಡಿ, ಬನ್ನಿ ಈ ವಿನಾಯಕನ ಬಳಿಗೆ. ಇದೇನು, ಇಂಥಹ ಸಮಸ್ಯೆಗಳು ಎದುರಾದರೆ ವೈದ್ಯರ ಬಳಿ ಹೋಗುತ್ತೇವೆ. ವಕೀಲರ ಸಹಾಯ ಪಡೆಯುತ್ತೇವೆ. ಆದರೆ, ಇದೆಲ್ಲಾ ಸಮಸ್ಯೆಗಳನ್ನೂ ಒಟ್ಟಿಗೇ ಪರಿಹರಿಸುವ ಭೂಪ ಯಾರೆಂದಿರಾ? ಇದ್ದಾನೆ! ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮದಲ್ಲಿ. ಆತ ಘಂಟೆ ಗಣಪ! ಆಸ್ತಿಕ ವರ್ಗದಲ್ಲಿ ತನ್ನದೇ…
-

ಉತ್ತರ ಕನ್ನಡದ ಸಿದ್ದಾಪುರದಲ್ಲಿದೆ ಕನ್ನಡಾಂಬೆ ಭುವನೇಶ್ವರಿ ದೇವಿಯ ಮಂದಿರ
ಹಚ್ಚ ಹಸಿರಿನಿಂದ ಆವೃತ್ತವಾಗಿರುವ ಎತ್ತರದ ಗಿರಿ ಶ್ರೇಣಿಯ ಪ್ರದೇಶದಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿ ನೆಲೆಸಿರುವ ಶ್ರದ್ಧಾ ಭಕ್ತಿಯ ತಾಣ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿದೆ. ಸಿದ್ದಾಪುರ ಪಟ್ಟಣದಿಂದ ಕುಮಟಾ ಮಾರ್ಗದಲ್ಲಿ ಕೇವಲ ೮ ಕಿ.ಮಿ. ಕ್ರಮಿಸಿದರೆ ಕನ್ನಡಾಂಬೆಯ ದೇವಾಲಯ ಕಾಣಸಿಗುತ್ತದೆ. ೩೦೦ ಅಡಿ ಎತ್ತರದ ಭುವನಗಿರಿಯ ಮೇಲಿರುವ ಮೂರು ಶತಮಾನಗಳಷ್ಟು ಹಳೆಯದಾದ ದೇವಾಲಯವನ್ನು ೩೫೦ ಮೆಟ್ಟಿಲುಗಳನ್ನು ಏರಿದ ನಂತರ ತಲುಪಬಹುದಾಗಿತ್ತು. ಕೆಲ ದಶಕಗಳ ಹಿಂದೆ ದೇವಾಲಯದ ಬಯಲಿನವರೆಗೆ ರಸ್ತೆ ನಿರ್ಮಿಸಿರುವುದರಿಂದ ಈಗ ೧೨೫…
-

‘ಶ್ರೀ ರಾಮಲಿಂಗೇಶ್ವರ ಶಿವಾಲಯ’ ಬೆಡಸಗಾಂವ್, ಮುಂಡಗೋಡು, ಉತ್ತರ ಕನ್ನಡ ಜಿಲ್ಲೆ
ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಶ್ರೀ ‘ರಾವಲಿಂಗೇಶ್ವರ ದೇವಾಲಯ’ ಮುಂಡಗೋಡು-ಶಿರಸಿ ರಾಜ್ಯ ಹೆದ್ದಾರಿಯಿಂದ 5 ಕೀ,ಮೀ ಒಳಗೆ ಸಂಚರಿಸಿದರೆ ಅದ್ಬುತವಾದ ನಿಸರ್ಗ ಸೌಂದರ್ಯ ಹೊಂದಿರುವ ‘ಬೆಡಸಗಾಂವ್’ ಎಂಬ ಊರು ಸಿಗುತ್ತದೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶಿಷ್ಟ ಹಾಗೂ ಕಲ್ಲಿನಲ್ಲಿಯೇ ನಿರ್ಮಾಣಗೊಂಡ ಅಪರೂಪದ ಐತಿಹಾಸಿಕ ಶಿವಾಲಯವನ್ನ ನಾವು ಇಲ್ಲಿ ಕಾಣಬಹುದಾಗಿದೆ. ಶಿಲ್ಪಕಲೆಗಳು, ಕಲಾತ್ಮಕ ಕೆತ್ತನೆಗಳು ಮಾಸಿಹೋದರು ದೇವಾಲಯಕ್ಕೆ ವಿಶೇಷವಾದ ಆಕರ್ಷಣೆ ಇದೆ, ದೇವಾಲಯ ಕರಿ ಶಿಲೆಯಿಂದ ನಿರ್ಮಾಣವಾಗಿದ್ದು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯ ಇನ್ನೂ…
