ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಶ್ರೀ ‘ರಾವಲಿಂಗೇಶ್ವರ ದೇವಾಲಯ’ ಮುಂಡಗೋಡು-ಶಿರಸಿ ರಾಜ್ಯ ಹೆದ್ದಾರಿಯಿಂದ 5 ಕೀ,ಮೀ ಒಳಗೆ ಸಂಚರಿಸಿದರೆ ಅದ್ಬುತವಾದ ನಿಸರ್ಗ ಸೌಂದರ್ಯ ಹೊಂದಿರುವ ‘ಬೆಡಸಗಾಂವ್’ ಎಂಬ ಊರು ಸಿಗುತ್ತದೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶಿಷ್ಟ ಹಾಗೂ ಕಲ್ಲಿನಲ್ಲಿಯೇ ನಿರ್ಮಾಣಗೊಂಡ ಅಪರೂಪದ ಐತಿಹಾಸಿಕ ಶಿವಾಲಯವನ್ನ ನಾವು ಇಲ್ಲಿ ಕಾಣಬಹುದಾಗಿದೆ.

ಶಿಲ್ಪಕಲೆಗಳು, ಕಲಾತ್ಮಕ ಕೆತ್ತನೆಗಳು ಮಾಸಿಹೋದರು ದೇವಾಲಯಕ್ಕೆ ವಿಶೇಷವಾದ ಆಕರ್ಷಣೆ ಇದೆ, ದೇವಾಲಯ ಕರಿ ಶಿಲೆಯಿಂದ ನಿರ್ಮಾಣವಾಗಿದ್ದು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯ ಇನ್ನೂ ಗತಕಾಲದ ವರೆಗೂ ತನ್ನ ಇರುವಿಕೆಯನ್ನ ತೋರಿಸುವಷ್ಟು ಸದೃಡವಾಗಿದೆ.
ಬಿಜ್ಜಳನ ರಾಜಧಾನಿ ಆಗಿ ಮೆರೆದ ಆಗಿನ ಕಾಲದ ‘ಬೆಡಸಗಾಮೆ’ ಇಂದು ಬೆಡಸಗಾಂವ್ ಆಗಿದೆ. ಇಲ್ಲಿನ ಸ್ಥಳ ಇತಿಹಾಸದ ಪ್ರಕಾರ ‘ಶ್ರೀ ರಾಮ ಲಕ್ಷ್ಮಣ’ ರು ಈ ದಾರಿಯಲ್ಲಿ ಹೋಗುತ್ತಿರುವಾಗ ಬಾಯಾರಿಕೆ ಇಂಗಿಸಿಕೊಳ್ಳಲು ಶ್ರೀರಾಮ ಬಾಣ ಬಿಟ್ಟು ನೀರು ಹರಿಸಿದ ಎಂದು ಉಲ್ಲೇಖಿತವಾಗಿದೆ.. ಶ್ರೀರಾಮನು ಇಲ್ಲಿ ‘ಈಶ್ವರ’ಲಿಂಗವನ್ನು ಪೂಜಿಸಿ ಮಂದೆ ಪಯಣ ಬೆಳೆಸಿದ ಆ ಕಾರಣದಿಂದ ಈ ದೇವಾಲಕ್ಕೆ ‘ಶ್ರೀರಾಮಲಿಂಗೇಶ್ವರ’ ಎಂದು ಹೆಸರು ಬಂದಿದೆ ಎನ್ನಲಾಗಿದೆ.. ದೇವಾಲಯದ ನೈರುತ್ಯ ಭಾಗದಲ್ಲಿ ಐದು ಅಡಿ ಎತ್ತರದಲ್ಲಿ ಕರಿಶಿಲೆಯಿಂದ ಸದಾ ಜಲವೂ ಸದಾ ಹರಿಯುತ್ತದೆ ಇದೇ ಶ್ರೀರಾಮ ಬಾಣ ಬಿಟ್ಟಾಗ ಉದ್ಬವಗೊಂಡ ಜಲ ಎನ್ನುತ್ತಾರೆ.

ಭಕ್ತರು ಹಾಗೂ ದಾನಿಗಳ ಸಹಾಯದಿಂದ ಪಾಚಿಕಲ್ಲಿನ ಅಂಗಳ, ಸಮುದಾಯ ಭವನ, ದೇವಸ್ಥಾನಕ್ಕೆ ದ್ವಾರ ಬಾಗಿಲು, ರಸ್ತೆ ಅಭಿವೃದ್ಧಿ ಮಾಡಲಾಗಿದೆ.. ಸುತ್ತಮುತ್ತಲಿನ ಜನರ ಆರಾದ್ಯ ದೈವ ‘ಶ್ರೀ ರಾಮಲಿಂಗೇಶ್ವರ’ ಉತ್ಸವವನ್ನು ಪ್ರತಿವರ್ಷ 2 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಭಕ್ತರ ಇಷ್ಟಾರ್ಥಗಳನ್ನ ಇಡೇರಿಸುವ ಶಕ್ತಿಕೇಂದ್ರವಾಗಿ ಈ ದೇವಾಲಯ ಪ್ರಸಿದ್ದಿಗೊಂಡಿದೆ.. ಪ್ರವಾಸಿಗರೂ ಹಾಗೂ ಶಿವಭಕ್ತರು ಪ್ರತಿ ವರ್ಷ ಅಪಾರ ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಬೇಟಿ ನೀಡುತ್ತಾರೆ.
ಮಾಹಿತಿ: ಮಧುಕರ್ ನಾಯ್ಕ್


Leave a Reply