Category: ಇತಿಹಾಸ

  • ಶಿರಸಿಯಲ್ಲಿ ೧೪೦೧ ನೇ ಇಸವಿ ಕಾಲಮಾನದ ಅಪರೂಪದ ವೀರಗಲ್ಲು ಪತ್ತೆ

    ಶಿರಸಿ ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿಯ ಹೊಸಳ್ಳಿಯಲ್ಲಿ ೧೪೦೧ ನೇ ಇಸವಿ ಕಾಲಮಾನದ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಇತಿಹಾಸಕಾರ ಲಕ್ಷ್ಮೀಶ ಸೋಂದಾ ಅವರ ತಂಡ ಅಪ್ರಕಟಿತ ಈ ಶಾಸನದ ಮೇಲೆ ಬೆಳಕು ಚೆಲ್ಲಿದ್ದಾರೆ. ಇದರಿಂದಾಗಿ ನೆಗ್ಗು ಪಂಚಾಯಿತಿ ವ್ಯಾಪ್ತಿಯ ಇತಿಹಾಸದ ಬಗ್ಗೆ ಇದೇ ಮೊದಲ ಬಾರಿ ಹೆಚ್ಚಿನ ಮಾಹಿತಿ ಲಭ್ಯವಾದಂತಾಗಿದೆ. ಇಲ್ಲಿಯ ಹೊಸಳ್ಳಿ ಗ್ರಾಮದಲ್ಲಿ ಈ ವೀರಗಲ್ಲು ಮಣ್ಣಿನ ಅಡಿಯಲ್ಲಿ ಹೂತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಇತಿಹಾಸಕಾರರಾದ ಲಕ್ಷ್ಮೀಶ್‌ ಸೋಂದಾ ಈ ಕುರಿತು…

  • ಹೆಗ್ರೆ ಮತ್ತು ಗಂಗಾವಳಿಯಲ್ಲಿ ದೊರೆತ ನರಬಲಿಯ ವಿವರ ನೀಡುವ ಸ್ಮಾರಕ ಶಿಲೆಗಳು!

    ಬಂಡಿ ಹಬ್ಬದ ನಿಮಿತ್ತ ನಡೆಯುವ ಕೋಳಿ-ಕುರಿ ಬಲಿಯ ಕುರಿತು ಯೋಚಿಸುತ್ತ ನನ್ನ ಟಿಪ್ಪಣಿ ಪುಸ್ತಗಳನ್ನು ಪರಿಶೀಲಿಸುವಾಗ ಕಂಡ ‘ಹೆಗ್ರೆ’ ಮತ್ತು ‘ಗಂಗಾವಳಿ’ಗಳಲ್ಲಿ ದೊರೆತ ‘ನರಬಲಿ’ಯ ವಿವರ ನೀಡುವ ಸ್ಮಾರಕ ಶಿಲೆಗಳ ಚಿತ್ರಗಳು ಮತ್ತು ‘ರಹಮತ್ ತರೀಕೆರೆ’ ಯವರ ನರಬಲಿಯ ಕುರಿತ ಒಂದು ಪ್ರಬಂಧ. ನಮ್ಮಲ್ಲಿ ನರಬಲಿ ವ್ಯಾಪಕವಾಗಿತ್ತು. ಇದಕ್ಕೆ ಸಾಕ್ಷಿ ಕರ್ನಾಟಕದ ತುಂಬ ಇರುವ ಬಲಿಶಿಲ್ಪ ಮತ್ತು ರುಂಡಶಿಲ್ಪ. ಬಲಿಶಿಲ್ಪವು ದೇಹವು ಬಲಿಯಾಗುತ್ತಿರುವ ಹೊತ್ತಿನ ಇಡೀ ಸನ್ನಿವೇಶವನ್ನು ಒಳಗೊಂಡಿರುತ್ತದೆ; ರುಂಡಶಿಲ್ಪವೆಂದರೆ, ಬಲಿಯಾದ ವೀರನ ತಲೆಚೆಂಡನ್ನಷ್ಟೇ ಕೆತ್ತಿರುವುದು. ಶ್ರಿಶೈಲ,…

  • ಉಪ್ಪಿನ ಸತ್ಯಾಗ್ರಹದ ಮೂಲಸ್ಥಾನ ಉತ್ತರ ಕನ್ನಡ – ಕರ್ನಾಟಕದ ಬಾರ್ಡೊಲಿ ಎಂದು ಕರೆಸಿಕೊಂಡ ಅಂಕೋಲಾ

    ಉಪ್ಪಿನ ಸತ್ಯಾಗ್ರಹ: ಗಾಂಧೀಜಿಯವರು ದೇಶದ ವಿಮೋಚನೆಯ ದೀಕ್ಷೆ ತೊಟ್ಟು ಬರುವ ವೇಳೆಗೆ ಹಿಂದಿನ ಪ್ರಮುಖ ರಾಷ್ಟ್ರೀಯ ನಾಯಕರು ನಿರ್ಗಮಿಸಿದ್ದರು. ಸ್ವಾತಂತ್ರ್ಯ ಚಳವಳಿಯು ಕೇವಲ ಮಹಾನಗರಗಳನ್ನು ಕೇಂದ್ರೀಕರಿಸಿ ನಡೆಯದೇ ಹಳ್ಳಿ ಹಳ್ಳಿಗಳಿಂದ ಸ್ವಾತಂತ್ರ್ಯದ ಬೇಡಿಕೆ ಅನುರಣಿಸಬೇಕು ಎಂದು ಘೋಷಿಸಿದ ಗಾಂಧೀಜಿಯವರ ಕರೆಗೆ ಓಗೊಟ್ಟವರಲ್ಲಿ ಅಂಕೋಲೆಯ ಜನರು ಪ್ರಮುಖರಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಸಾಗರಕ್ಕೆ ಸೇರಿದ ಸಾವಿರಾರು ತೊರೆಗಳಲ್ಲಿ ಇಲ್ಲಿನ ಚಳವಳಿಗಾರರು ನಡೆಸಿದ ಅಪೂರ್ವ ಸಾಹಸದ ಕತೆಗಳು ಚಿರಸ್ಮರಣೀಯವಾಗಿವೆ. 1930, ಫೆಬ್ರುವರಿ 20 ರಂದು ಬಳ್ಳಾರಿಯಲ್ಲಿ ಸಭೆ ಸೇರಿದ್ದ ಪ್ರದೇಶ…

  • ಸುಂದರಿಕಾ ಅಂದರೆ . . . ಅಪ್ಸರಕೊಂಡವೇ ??

    ಅಪ್ಸರಕೊಂಡ, ಹೊನ್ನಾವರ ಇದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಿರೇಗುತ್ತಿಯ ಶಾಸನದ ಕೆಲವು ಸಾಲುಗಳು, ಇಲ್ಲಿ ಕೆಲವು ಊರುಗಳ ಹೆಸರನ್ನು ಉಲ್ಲೇಖಿಸಿರುವುದರಿಂದ ಅದನ್ನೇ ಇಲ್ಲಿ ತೆಗೆದುಕೊಂಡೆ ೧. ಸುಂದರಿಕಾ, ೨. ಕುರ್ವಾ, ೩. ಮತ್ತಿರ್ಕಟ್ಟು, ಪಾನೀಯಪತನ ಇತ್ಯಾದಿ ಉಲ್ಲೇಖಗಳಿವೆ. ಇದು ಸುಮಾರು ೧೫೦೦ ವರ್ಷಗಳಷ್ಟು ಹಳೆಯ ಶಾಸನ. ಪ್ರಾಚೀನ ಕನ್ನಡ ಲಿಪಿಯನ್ನು ಹೊಂದಿದ ಈ ಶಾಸನ ಕರಾವಳಿ ಭಾಗದ ಜಿಲ್ಲೆಗಳ ಅತ್ಯಂತ ಪ್ರಾಚೀನ ಶಾಸನಗಳಲ್ಲೊಂದು. ಇದು ಪಶ್ಚಿಮ ಚಾಲುಕ್ಯರ ಲಿಪಿಯನ್ನು ಹೊಂದಿದ್ದು ಸ್ಪಷ್ಟವಾಗಿ ಬರೆದ ತಾಮ್ರಪಟ…

  • ಅಂಕೋಲಾದ ಸುಂಕಸಾಳದಲ್ಲಿ ಮೂರು ನಿಸಿಧಿ ಶಾಸನ ಶಿಲ್ಪಗಳು ಪತ್ತೆ

    ಅಂಕೋಲಾ : ತಾಲೂಕಿನ ಸುಂಕಸಾಳ ಗ್ರಾಮದಲ್ಲಿ ಹನ್ನೆರಡನೇ ಶತಮಾನದ ಮೂರು ನಿಸಿಧಿ ಶಾಸನ ಶಿಲ್ಪಗಳು ಪತ್ತೆಯಾಗಿವೆ. ಈ ಶಾಸನ ಸಿಗುವ ಒಂದು ವರ್ಷದ ಕೆಳಗೆ ಇದೇ ಗ್ರಾಮದಲ್ಲಿ ಗೋವೆಯ ಕಾದಂಬರ ಶಾಸನ ಶೋಧಿಸಿದ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾ ಅವರು ಕೈಗೊಂಡ ಇನ್ನೊಂದು ಕ್ಷೇತ್ರಕಾರ್ಯದಲ್ಲಿ ಗ್ರಾಮದ ರಾಮಲಿಂಗೇಶ್ವರ ದೇವಾಲಯದ ಎದುರಲ್ಲಿ ಈ ನಿಸಿಧಿ ಶಾಸನಗಳು ಪತ್ತೆಯಾಗಿವೆ. ಈ ಶಾಸನ ಶಿಲ್ಪಗಳು ಅಂಕೋಲಾ ತಾಲೂಕಿನಲ್ಲಿ ಜೈನಧರ್ಮದ ಪ್ರಾಬಲ್ಯದ ಕುರಿತು ಇನ್ನಷ್ಟು ಹೊಸ ಬೆಳಕು ಚೆಲ್ಲುತ್ತವೆ ಎಂದು ತಿಳಿಸಿದರು.…

  • ಅಂಕೋಲೆಯ ಬಾವಿಕೇರಿಯಲ್ಲಿ ಪತ್ತೆಯಾದ ಹದಿಮೂರನೆ ಶತಮಾನದ ಶಾಸನ

    ಅಂಕೋಲೆಯ ಬಾವಿಕೇರಿ ಗ್ರಾಮದ ಗರಡಿ ಮಾಸ್ತಿ ಗುಡಿಯ ಪಕ್ಕದಲ್ಲಿ ನಿಲ್ಲಿಸಿಡಲಾದ ಈ ಶಾಸನದ ಬಳಿ ಹೋಗಲು ಮುಖ್ಯ ರಸ್ತೆಯಿಂದ ಕಿರಿದಾದ ಓಣಿಯಿದೆ. 1983 ರಲ್ಲಿ ಈ ಶಾಸನ ಪತ್ತೆಯಾದಾಗ ಅದನ್ನು ನೋಡಲು ಹೋಗಿದ್ದೆ. ಆಗ ಈ ಪ್ರದೇಶವು ಗೇರುಮರಗಳಿಂದ ಸುತ್ತುವರೆದು ನಿರ್ಜನವಾಗಿತ್ತು. ಈ ಸಲ ಅಲ್ಲಿಗೆ ಹೋದಾಗ ಕಮಾನುಳ್ಳ ಬಾಗಿಲು ಅದೇ ತಾನೆ ಕಟ್ಟಲಾಗಿತ್ತು. ಶಾಸನದ ಸುತ್ತ ಮನೆಗಳು ಹಿತ್ತಿಲು, ನಿವೇಶನಗಳು, ವ್ಯವಸ್ಥಿತವಾಗಿ ನಿಲ್ಲಿಸಿದ ಶಾಸನದ ಜೊತೆ ವೀರಗಲ್ಲುಗಳನ್ನೂ ಕಂಡು ಆನಂದವಾಯಿತು.. “ಅಂಕೋಲೆಯ ನಾಡು” (ಸಾಲು ಎಂಟು)…

  • ವೈಭವದಿಂದ ಮೆರೆದು ಪಟ್ಟಣವಾಗಿದ್ದ ಈ ಹಳ್ಳಿ ಗೇರುಸೊಪ್ಪೆ ರಾಜ್ಯದ ಭವ್ಯ ರಾಜಧಾನಿಯಾಗಿತ್ತು!

    ಗೇರುಸೊಪ್ಪೆ-ಜಲಪಾತ ಹಾಗೂ ಹೊನ್ನಾವರ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಒಂದು ಹಳ್ಳಿ. ಶರಾವತಿಯ ಎಡದಂಡೆಯ ಮೇಲೆ, ತೆಂಗಿನ ತೋಪುಗಳ ಮಧ್ಯೆ, ಜಲಪಾತದಿಂದ 29 ಕಿಮೀ ದೂರದಲ್ಲೂ ಹೊನ್ನಾವರ ದಿಂದ 28 ಕಿಮೀ ದೂರದಲ್ಲೂ ಇದೆ. (ಶರಾವತಿಯ ಬಲ ದಂಡೆಯ ಮೆಲೆ ನಗರಬಸ್ತಿ ಕೇರಿ (ನಗರೆ) ಇದೆ) ಸುಮಾರು ನಾನೂರು ವರ್ಷಗಳ ಹಿಂದೆ ಈ ಹಳ್ಳಿ ಗೇರುಸೊಪ್ಪೆ ರಾಜ್ಯದ ಭವ್ಯ ರಾಜಧಾನಿಯಾಗಿತ್ತು. ಅದನ್ನು ನಗಿರೆ, ಭಿಲ್ಲಾಕೀಪುರ ಮತ್ತು ಕ್ಷೇಮಪುರ ಎಂದೂ ಕರೆಯುತ್ತಿದ್ದರು. ಗೇರುಸೊಪ್ಪೆ ರಾಜ್ಯವನ್ನು ನಗಿರಾ ರಾಜ್ಯ (ಈಗಲೂ “ನಗರೆ” ಎನ್ನುತ್ತಾರೆ)ಎಂದು…

  • ಕಾರವಾರದ ಮಹಾಸತಿಕಲ್ಲಿನ (ಮಾಸ್ತಿಕಲ್ಲು) ರಹಸ್ಯ

    ಕಾರವಾರ ಸುತ್ತಮುತ್ತಲಿನ ಮಹಾಸತಿಕಲ್ಲು (ಮಾಸ್ತಿಕಲ್ಲು)ಗಳಲ್ಲೇ ಕುಂಬಾರವಾಡದಲ್ಲಿರುವ ವೀರಗಲ್ಲುಗಳು ನನಗೆ ವಿಶಿಷ್ಟವಾಗಿ ಕಂಡವು. ಇಲ್ಲಿರುವ ಉಬ್ಬು ಶಿಲ್ಪಗಳ ಕಲಾತ್ಮಕತೆ ಹಾಗೂ ಮಹಿಳೆಯ ಒಂದು ಕೈಯುಳ್ಳ ಕಲ್ಲುಗಳು ಬೇರೆಯಲ್ಲಿಯೂ ನನಗೆ ಕಂಡಿರಲಿಲ್ಲ. ಅವುಗಳು ಇದೇ ಏನೂ ಒಂದೆರಡು ವರುಷಗಳ ಹಿಂದೆಯೇ ರಚಿಸಿರುವ ಶಿಲ್ಪಗಳಂತೆ ಕಾಣುತ್ತವೆ. ಆದರೆ ಅಲ್ಲಿಯೇ ಪಕ್ಕದಲ್ಲಿರುವ ಮನೆಯೊಂದರಲ್ಲಿದ್ದ ತಾಯಿಯನ್ನು ನಾನು ವಿಚಾರಿಸಿದಾಗ; ಇವು ಅವಳು ಮದುವೆಯಾಗಿ ಬರುವ ಮುಂಚೆಯೇ ಇಲ್ಲಿ ಇದ್ದವು ಅಂದಳು. “ಆಯಿ,ನಿನ್ನ ವಯಸ್ಸೆಷ್ಟು” ಅಂತ ನಾನು ಕೇಳಿದೆ. ಆಯಿ ಮರದಲ್ಲಿರುವ ಹಲಸಿನ ಹಣ್ಣುಗಳನ್ನು ಕೋಲಿನಿಂದ…

  • ಬಬ್ರುವಾಡೆಯಲ್ಲಿದ್ದ ಬಬ್ರುದೇವರ ಮೂರ್ತಿ – ಅಂಕೋಲಾ

    ಸುಮಾರು 8ನೇ ಶತಮಾನದಲ್ಲಿ ರಚನೆಯಾದ ಈ ಮೂರ್ತಿ ಅರಳಿದ ಕಮಲದ ಮೇಲೆ ಪದ್ಮಾಸನದಲ್ಲಿ ಕುಳಿತಿದೆ. ಎರಡೂ ಕೈಗಳು ಧ್ಯಾನಮುದ್ರೆಯಲ್ಲಿವೆ. ಮಂಡಿಯ ತನಕ ದೋತರ ಉಡಿಸಲಾಗಿದೆ. 153 ಸೆ.ಮೀ. ಎತ್ತರ ಹಾಗೂ 125 ಸೆ.ಮೀ ಅಗಲ ವಿರುವ ಈ ಮೂರ್ತಿಯ ಬೆನ್ನ ಹಿಂದೆ ಮಕರ ಪಟ್ಟಿಕೆಗಳಿಂದ ಅಲಂಕೃತವಾದ ದಿಂಬಿನ ರಚನೆಯಿದೆ. ಗುಂಗುರು ಕೂದಲು, ಉದ್ದ ಕಿವಿ, ದಪ್ಪ ತುಟಿ, ವಿಶಾಲವಾದ ಎದೆ, ನೀಳ ಭುಜಗಳನ್ನು ಹೊಂದಿರುವ ಈ ಬಬ್ರುದೇವ ಮೂರ್ತಿಯೂ ಬೌದ್ಧರ ವಜ್ರಯಾನ ಪಂಥಕ್ಕೆ ಸೇರಿದೆ.ಈಗ ಈ ಮೂರ್ತಿಯೂ…

You cannot copy content of this page