Category: ಇತಿಹಾಸ

  • ಶಿವಾಜಿಯ ಅಂಕೋಲೆ ಭೇಟಿಗೆ ಇಂದಿಗೆ 356 ವರ್ಷಗಳಾದವು!

    ಕೊಂಕಣ ಕರಾವಳಿಯನ್ನು ಆಕ್ರಮಿಸುವ ಪ್ರಯತ್ನವನ್ನು ಶಿವಾಜಿಯು 1654 ರಿಂದಲೇ ಆರಂಭಿಸಿದನು. ಕರಾವಳಿಯ ಭಿವಂಡಿ ಹಾಗೂ ಕಲ್ಯಾಣಗಳನ್ನು ಮೊಘಲರಿಂದ ಗೆದ್ದ ಬಳಿಕ ಕುಲಾಬಾ, ಸುರಗಡ, ಕಾಂಗೋರಿ ಹಾಗೂ ರಾಯಗಡಗಳನ್ನು ವಶಪಡಿಸಿಕೊಂಡನು. ಕಲ್ಯಾಣದ ಆಖಾತದಲ್ಲಿ ಹಡಗು ಕಟ್ಟಿಸುವ ನೌಕಾಂಗಣಗಳಿದ್ದವು. ಉತ್ತರ ಕೊಂಕಣದ (ಕರಾವಳಿಯ) ಬಹುಭಾಗವನ್ನು ಗೆದ್ದುಕೊಂಡ ನಂತರ ಬಂದರುಗಳ ಹಾಗೂ ಹಡಗುಗಳನ್ನು ಕಟ್ಟಿಸುವ ಮಹತ್ವವನ್ನು ಮನಗಂಡನು. 1657ರಲ್ಲಿ ಕಲ್ಯಾಣ ಬಂದರಿನಲ್ಲೇ ನೌಕಾಸೇನೆಯನ್ನು ಕಟ್ಟುವ ಕೆಲಸವನ್ನು ಶಿವಾಜಿಯು ಆರಂಭಿಸಿದ್ದನು. ದಾಭೋಲ ಹಾಗೂ ರಾಜಾಪುರವನ್ನು ಗೆದ್ದ ಬಳಿಕ 1663ರಲ್ಲಿ ಕುಡಾಳ ಹಾಗೂ ವೆಂಗುರ್ಲೆಗಳನ್ನು…

  • ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಹೇಳುವ ಗುಣವಂತೆಯ ಶಾಸನ ತುಳುಭಾಷೆಯ ಶಾಸನ ಅಲ್ಲ!

    ಪ್ರಜಾವಾಣಿ – ತುಳು ಲಿಪಿಯ ದೊಡ್ಡ ಶಾಸನ ಪತ್ತೆ | ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಹೇಳುವ ಗುಣವಂತೆಯ ಶಾಸನ ತುಳುಭಾಷೆಯ ಶಾಸನ ಅಲ್ಲ.ಅದು ತಿಗಳಾರಿ ಲಿಪಿಯಲ್ಲಿರುವ ಸಂಸ್ಕೃತ ಮತ್ತು ಕನ್ನಡದ ದ್ವಿಭಾಷಾ ಶಾಸನವಾಗಿದೆ. ಉಡುಪಿಯ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಭಟ್ಕಳ ಸಮೀಪದ ಗುಣವಂತೆಯ ಶಂಭುಲಿಂಗೇಶ್ವರ ದೇಗುಲದ ಹೊರಾಂಗಣದಲ್ಲಿ ತುಳು ಭಾಷೆಯ ದೊಡ್ಡ ಶಾಸನ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಶಾಸನದ ಉದ್ದಗಲಗಳ ಅಳತೆ…

  • 17 ನೇ ಶತಮಾನದ ಶಿರಸಿಯ ಸೋಮಸಾಗರದಲ್ಲಿನ ಸೋಮೇಶ್ವರ ಮಂದಿರ

    ಶಿರಸಿಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಸೋಮಸಾಗರದಲ್ಲಿ ಈ ಸೋಮೇಶ್ವರ ಮಂದಿರವಿದೆ. ಸಿದ್ದಾಪುರ ರಸ್ತೆಯ ಕಾನಗೋಡದಿಂದ ಬಲಗಡೆ ತಿರುಗಿದರೆ 3 ಕಿಲೋಮೀಟರ್ ದೂರದಲ್ಲಿ ದೇವಾಲಯವಿದ್ದು, ಇತಿಹಾಸ ಸಂಶೋಧಕರಿಗೆ ಸೂಕ್ತ ಸ್ಥಳ. ಸುಮಾರು 17ನೇ ಶತಮಾನದಲ್ಲಿ ಇದರ ನಿರ್ಮಾಣವಾಗಿರಬಹುದೆಂದು ಅಂದಾಜಿಸಲಾಗಿದೆ. ಈ ದೆವಾಲಯವು ಕ್ರಿ.ಶ. 17 ನೇ ಶತಮಾನದಲ್ಲಿ ನಿರ್ಮಾಣವಾಗೊಂಡಿದ್ದು, ತಲವಿನ್ಯಾಸದಲ್ಲಿ ಗರ್ಭಗ್ರಹ, ಅಂತರಾಳ ಮತ್ತು ನವರಂಗದಿಂದ ಕೂಡಿದೆ.ಅಂತರಾಳದ ದ್ವಾರವು ಅಲಂಕೃತ ಶಿಲ್ಪಗಳಿಂದ ಕೂಡಿದ್ದು ಎರಡೂ ಬದಿಯಲ್ಲಿ ಗೋಡೆಗೆ ಅಂಟಿಕೊಂಡಂತೆ ದೇವಕೋಷ್ಟಗಳಿವೆ. ನವರಂಗದಲ್ಲಿ ನಯಗೊಳಿಸಿದ ನಾಲ್ಕು ಕಂಬಗಳಿವೆ. ನವರಂಗದ…

  • ಗೋವೆಯ ಕಾದಂಬ ಎರಡನೇ ಜಯಕೇಶಿಯ ಹಳಿಯಾಳ ಶಾಸನ

    “ಸ್ವಸ್ತಿ ಸಮದಿಗತ ಪಂಚಮಹಾ ಶಬ್ದ ಮಹಾಮಂಡಳೇಶ್ವರಂ ಬನವಾಸಿ ಪುರವರಾಧೀಶ್ವರಂ ಕಾದಂಬ ಕುಲತಿಳ ಶ್ರೀಮಜ್ಜಯಕೇಶಿ ದೇವರು ವಿಜಯ ರಾಜ್ಯವುತ್ತರೋತ್ತರಾಭಿವೃದ್ಧಿ ಪ್ರವರ್ಧಮಾನಮಾ ಚಂದ್ರಾರ್ಕ ತಾರಾಂಬರಂ ಸಲುತ್ತಮಿರೆ” ಎಂದು ಗೋವೆಯ ಕಾದಂಬ ಎರಡನೇ ಜಯಕೇಶಿಯ ಆಳ್ವಿಕೆಯನ್ನು ಪ್ರಸ್ತಾಪಿಸುವ, ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲುಕಿನಲ್ಲಿರುವ ಈ ಶಾನನವನ್ನು ಡಾ. ಆರ್.ಎನ್. ಗುರವ ಅವರು ‘Kadambas of Goa and their Inscriptions’ ಎಂಬ ತಮ್ಮ ಪಿ.ಎಚ್ ಡಿ. ಮಹಾಪ್ರಬಂಧದಲ್ಲಿ ಪ್ರಕಟಿಸಿರುತ್ತಾರೆ. ಅಗ್ರಹಾರವಾದ ಪಳ್ಳೆಯಾಲದ(ಇಂದಿನ ಹಳಿಯಾಳ) ಮಹಾಜನರು ಅಲ್ಲಿಯ ದೇವಿಯ ಕೆರೆಗೋಸ್ಕರ ಭೂಮಿಯನ್ನು ದತ್ತಿಬಿಟ್ಟ…

You cannot copy content of this page