ಬಬ್ರುವಾಡೆಯಲ್ಲಿದ್ದ ಬಬ್ರುದೇವರ ಮೂರ್ತಿ – ಅಂಕೋಲಾ

Posted by

·

ಸುಮಾರು 8ನೇ ಶತಮಾನದಲ್ಲಿ ರಚನೆಯಾದ ಈ ಮೂರ್ತಿ ಅರಳಿದ ಕಮಲದ ಮೇಲೆ ಪದ್ಮಾಸನದಲ್ಲಿ ಕುಳಿತಿದೆ. ಎರಡೂ ಕೈಗಳು ಧ್ಯಾನಮುದ್ರೆಯಲ್ಲಿವೆ. ಮಂಡಿಯ ತನಕ ದೋತರ ಉಡಿಸಲಾಗಿದೆ. 153 ಸೆ.ಮೀ. ಎತ್ತರ ಹಾಗೂ 125 ಸೆ.ಮೀ ಅಗಲ ವಿರುವ ಈ ಮೂರ್ತಿಯ ಬೆನ್ನ ಹಿಂದೆ ಮಕರ ಪಟ್ಟಿಕೆಗಳಿಂದ ಅಲಂಕೃತವಾದ ದಿಂಬಿನ ರಚನೆಯಿದೆ. ಗುಂಗುರು ಕೂದಲು, ಉದ್ದ ಕಿವಿ, ದಪ್ಪ ತುಟಿ, ವಿಶಾಲವಾದ ಎದೆ, ನೀಳ ಭುಜಗಳನ್ನು ಹೊಂದಿರುವ ಈ ಬಬ್ರುದೇವ ಮೂರ್ತಿಯೂ ಬೌದ್ಧರ ವಜ್ರಯಾನ ಪಂಥಕ್ಕೆ ಸೇರಿದೆ.
ಈಗ ಈ ಮೂರ್ತಿಯೂ ಧರ್ಮಸ್ಥಳದ ವಸ್ತುಸಂಗ್ರಹಾಲಯದಲ್ಲಿದೆ.

ಮಾಹಿತಿ: ಶ್ಯಾಮಸುಂದರ ಗೌಡ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading