Category: ಲೇಖನ
-

ನಮ್ಮೂರಿನ ರೈತರು
ಮಳೆ ಹಾಗೆ ಸುರಿಯುವುದಿಲ್ಲಾ ಒಂದಿಷ್ಟು ಹಸಿ ನೆನಪುಗಳನ್ನು ನಮ್ಮೆದೆಗೆ ಸುರಿದೇ ಹೋಗುತ್ತದೆ. ಈ ನೆನಪು ೧೫-೨೦ ವರ್ಷಗಳ ಹಿಂದಿನದು. ಕರಾವಳಿಯ ಗದ್ದೆಗಳು ಭತ್ತದ ಸಸಿಯಿಂದ ಕಂಗೊಳಿಸುತ್ತಿದ್ದ ಹಸಿರು ಕಾಲ. ಬೇಸಿಗೆಯಲ್ಲೇ ಕಾಡು ಮೇಡು ಸುತ್ತಿ ತರಕು ಸಂಗ್ರಹಿಸಲಾಗುತ್ತಿತ್ತು.ಮೇ ಅಂತ್ಯಕ್ಕೆ ಭತ್ತದ ಗದ್ದೆಗಳಿಗೆ ತರಕು ಗೊಬ್ಬರ ಬಿದ್ದಾಗಿರುತ್ತಿತ್ತು. ಜೂನ್ ಆರಂಭದಲ್ಲೇ ಮಳೆರಾಯ ಬಿಡುವಿಲ್ಲದೇ ಸುರಿಯುತ್ತಿದ್ದ. ಮನೆಯ ಅಂಗಳದಲ್ಲಿ ನಾಲ್ಕಾರು ಸುಳಿ ಮುಟ್ಟಿಗಳು. ಅದರಲ್ಲಿ ಹುಲ್ಲಿನ ಸಿಂಬೆಯಲ್ಲಿ ಬೆಚ್ಚಗೆ ಕುಳಿತ ಸಾವಿರಾರು ಭತ್ತದ ಬೀಜಗಳು. ದಿನಕ್ಕೆ ೪-೫ ಬಾರಿಯಂತೆ ಕೊಡದಲ್ಲಿ…
-

ವ್ಯಾಘ್ರನ ಲೋಕದಲ್ಲಿ – ಹುಲಿಯ ಕುರಿತ ಲೇಖನ
ನಿಸರ್ಗದ ಸೃಷ್ಟಿಯಲ್ಲಿ ಎಲ್ಲ ಜೀವಿಗಳಿಗೂ ತನ್ನದೇ ಆದ ಮಹತ್ವವಿದೆ, ಸ್ಥಾನವಿದೆ. ಆನೆ, ಚಿರತೆ, ಸಿಂಹ ಹೀಗೆ ಅನೇಕ ಪ್ರಾಣಿಗಳಿಗೆ ಇರುವ ಮಹತ್ವ ಒಂದು ರೀತಿಯದಾದರೆ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಎಂದೇ ಹೆಸರಾಗಿರುವ ಹುಲಿಗಿರುವ ಮಹತ್ವವೇ ಬೇರೆತೆರನಾದುದು. ಹುಲಿ ತನ್ನದೇ ಆದ ಗಾಂಭೀರ್ಯ, ಬೇಟೆಯ ಸಂಚನ್ನು ರೂಪಿಸುವ ಬಗೆ, ಅದರದೇ ಆದ ಒಂದು ಬಗೆಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ಅಳಿವಿನ ಅಂಚಿನಲ್ಲಿರುವ ಹುಲಿಗಳ ರಕ್ಷಣೆಯ ದೃಷ್ಟಿಯಿಂದ ಆ ಬಗ್ಗೆ ಜಾಗೃತಿ ಮೂಡಿಸಲು ಅಂತರಾಷ್ಟ್ರೀಯ ಹುಲಿ ದಿನ (International…
-

ಮಳೆಗಾಲದ ಅತಿಥಿಗಳು
ಮಳೆ ಬಂತು ಮಳೆ… ಅಂತೂ ಈ ವರ್ಷದ ಮಳೆಗಾಲ ಪ್ರಾರಂಭವಾಯಿತು. ಮಳೆಗಾಲದಲ್ಲಿ ನಮ್ಮ ಕರಾವಳಿ ಭಾಗದಲ್ಲಿ ಎಷ್ಟೋ ದಿನಗಳಿಂದ ಕಾಣಸಿಗದ ಆದೆಷ್ಟೋ ಜೀವಿಗಳು (ಹುಳ – ಹುಪ್ಪಟೆಗಳು) ಮಳೆಗಾಲದಲ್ಲಿ ಕಣ್ಣಿಗೆ ಕಾಣಸಿಗುತ್ತದೆ. ಧೋ ಎಂದು ಒಂದೇ ಸಮನೆ ಸುರಿವ ಮುಂಗಾರು ಮಳೆ ಕರಾವಳಿಯವರಾದ ನಮಗೆ ಹೊಸತಲ್ಲ. ಕಪ್ಪೆಗಳ ವಟ ವಟ ಧ್ವನಿ ಒಂದೆಡೆ ಆದರೆ ಅಡಿಕೆ ಮರಕ್ಕೆ ಅಂಟಿಕೊಂಡು ರೇಜಿಗೆ ಹುಟ್ಟಿಸುವ ಬಸವನ ಹುಳು ಇನ್ನೊಂದೆಡೆ. ಅದಲ್ಲದೆ ಅಂಗಳದಲ್ಲಿ ನಡೆದಾಡುವ ಸಹಸ್ರಪದಿ. ನಮ್ಮ ಕಡೆ ಅದನ್ನು ಚೇರಟೆ…
-

ಉತ್ತರ ಕನ್ನಡ ಜಿಲ್ಲೆಯ ಪರಿಚಯ
ಓಹೊ ಬನ್ರಿ ಮಾರಾಯ್ರೆ… ಆ ಬದಿಗೆ ಬಾನಿ ಒಳಗೆ ನೀರಿದ್ದು, ಕೈಕಾಲು-ಮೊರೆ ತೊಳ್ಕಂಡು ಒಳಬದಿಗ್ ಬನ್ನಿ. ಕುಡಿಲಕ್ಕೆ ಮುರಗಲ ಹಣ್ಣಿನ ಪಾನಕ ಅಡ್ಡಿಲ್ಯೆ ನಿಮಗೆ? ಹೊಯ್ ಆಸರಿಂಗೆ ತೆಳ್ಳೆವು, ಕಾಯಿ ಚಟ್ನಿ ಮಾಡಿದ್ನಿ, ಒಂದೆರಡು ತಿನ್ನಲಕ್ಕಿ ಬನ್ನಿ. ಕವಳ ಪೇಟಿ ಇದ್ದು, ಕವಳ ಹಾಕುದಿದ್ರೆ ಹಾಕಿ.. ಹಂಗೆ ಊರ್ ಬದಿಗೆ ತಿರ್ಗಾಡಲೇ ಹೋಪ… ಇದೇನಿದು? ಯಾವ ಭಾಷೆ? ಕನ್ನಡವೇ ಹೌದಾ!? ಅಂತ ಮೂಗಿನ ಮೇಲೆ ಬೆರಳು ಇಡಬೇಡಿ. ಇದು ಹವ್ಯಕ ಕನ್ನಡ. ನಾವು ಇವತ್ತು ಹೋಗ್ತಾ ಇರೊದು…
-

ಉತ್ತರ ಕನ್ನಡ ಜಿಲ್ಲೆಯಿಂದ ಬಂದು ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಮ್ಮೆಲ್ಲರ ಸಮಸ್ಯೆ ಇದು.
ಉತ್ತರ ಕನ್ನಡ ಎನ್ನುವ ಒಂದು ಜಿಲ್ಲೆಯಿದೆ ಎನ್ನುವುದು “ಇಂದಿಗೂ ಸಹ” ಹಲವರಿಗೆ ಗೊತ್ತೇ ಇಲ್ಲ. ಇದು ವಿಚಿತ್ರವಾದರೂ ಸತ್ಯ. “ನಿಮ್ಮ ಊರು ಯಾವುದು” ಎಂದು ಕೇಳುತ್ತಾರೆ. “ಉತ್ತರ ಕನ್ನಡ” ಎನ್ನುತ್ತೇವೆ ನಾವು. “ಓಹ್.. ನಿಮ್ ಕಡೆ ಬಿಸಿಲು ಜಾಸ್ತಿ ಅಲ್ವಾ? ನಿಮ್ಮ ಊಟ ತುಂಬಾ ಖಾರ. ಆದ್ರೂ ಜೋಳದ ರೊಟ್ಟಿ ಚೆನ್ನಾಗಿರುತ್ತೆ” ಎನ್ನುತ್ತಾರೆ. “ನೀವು ಹೇಳ್ತಾ ಇರೋದು ಉತ್ತರ ಕರ್ನಾಟಕದ ಬಗ್ಗೆ. ನಮ್ಮದು ಉತ್ತರ ಕನ್ನಡ ಜಿಲ್ಲೆ. ಉತ್ತರ ಕರ್ನಾಟಕ ಬೇರೆ, ಉತ್ತರ ಕನ್ನಡ ಬೇರೆ… ನಮ್ಮದು…
-

ಕಾಡು ಬದುಕಿನ ನೆನಪಿನ ಲೋಕ – ಕಳವೆ ಡೈರಿ
ಹಳೆಯ ಚಿತ್ರ ನೋಡಿದಾಗ ಸುತ್ತಾಟದ ನೆನಪಾಗುತ್ತದೆ. ದಾರಿಯೇ ಇಲ್ಲದ ಎತ್ತರದ ಊರು ಉತ್ತರ ಕನ್ನಡ ಜಿಲ್ಲೆಯ ಮೇದಿನಿಗೆ ಹೋದಾಗ ಅಕ್ಕಿ ಕುಟ್ಟುವ ದೃಶ್ಯ ನೋಡಿದ್ದೆ. ಅಲ್ಲಿ ರಟ್ಟೆ ಬಲದಲ್ಲಿ ನಿತ್ಯ ಉಣ್ಣುವ ಅನ್ನದ ತಯಾರಿ ನಡೆಯುತ್ತಿತ್ತು. ಭತ್ತದ ಕೊಯ್ಲು ಮುಗಿದು ಬಣವೆ ಹಾಕಿದ ನೋಟ ಜೊಯಿಡಾ ತಾಲೂಕಿನ ಹಳ್ಳಿಯದು. ಗದ್ದೆಯ ತೇವ, ಆನೆಯ ಹಾವಳಿಯಿಂದ ಬಚಾವು ಮಾಡಲು ಎತ್ತರದ ಅಟ್ಟಲಿನ ಮೇಲೆ ಬಣವೆ ಹಾಕುತ್ತಿದ್ದರು. ಕೃಷಿ ಸಾಹಸದಲ್ಲಿ ಬಣವೆ ಶಿಸ್ತು ಸೊಗಸಾಗಿದೆ. ಅಂಕೋಲೆಯ ಆಗಸೂರು ಹೋಗಿದ್ದಾಗ ಮುಡೇ…
-

ಯಶಸ್ವಿ 84 ವರ್ಷ ಪೂರೈಸಿದ ಅಂಕೋಲೆಯ ಕಾಕರಮಠದ ಖ್ಯಾತ “ಕೈಮಗ್ಗ – ಪೈಮಗ್ಗ”
ಅಂಕೋಲೆಯ ನೆಲದ ಕರಿ ಇಶಾಡ ಮಾವು, ಕೇಣಿಯ ಗೇರು ಬೀಜ, ಮೀನುಗಾರರ ವೊಣ ಮೀನು ವ ಶೆಟ್ಲೆ, ಸದಾ ಸಿಗುವ ಹಸಿರು ಉಕ್ಕಿಸುವ ಬಸ್ಲೆಸೊಪ್ಪು…. ಇತ್ಯಾದಿಗಳೊಂದಿಗೆ ನಂಟಿರುವ ಇನ್ನೊಂದು ಹೆಸರು ಕಾಕರಮಠದ ಪೈ ಮಗ್ಗದ ಪಂಜಿ (ವಾಲೆ) ಅಥವಾ ಟಾವೆಲ್. ಶಹರದ ಮಧ್ಯದ ಕಾಕರಮಠದಲ್ಲಿ ಹಾದು ಹೋಗುಕರಿಗೆ ಕಿವಿಗೆ “ಧಗ್ದಕ್ ಧಗ್ದಕ್” ಎಂಬ ಮಗ್ಗದ ಯಾoತ್ರಿಕ ಶಬ್ದ ಕೇಳಿಸದೇ ಇರದು. ಅದುವೇ 1937 ರಲ್ಲಿ ಶ್ರೀ ನಾರಾಯಣ ಮರ್ತು ಪೈ ಇವರಿಂದ ಸ್ಥಾಪೀತವಾದ ಪೈಕುಟುಂಬದ ಕೈಮಗ್ಗ. ಸ್ನಾನಕ್ಕೆ…
-

ಬಾಗು ಅಜ್ಜ ಹೇಳಿದ ಪರಿಸರದ ಕಥೆ | ಗೌಳಿಗರ ಜೀವನ ಮತ್ತು ವಲಸೆ…
2012 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕಾರಕುಂಡಿ ಗೌಳಿ ವನವಾಸಿ ಹಿರಿಯ ಬಾಗು ಪಿಂಗಳೆ ಭೇಟಿಯಾಗಿದ್ದೆ. ಸುಮಾರು 1925-32 ರ ಸಮಯದಲ್ಲಿ ಅಜ್ಜ ಮಹಾರಾಷ್ಟ್ರ ಆಜರ ಪ್ರದೇಶದಿಂದ ಕರ್ನಾಟಕದ ಬೆಳಗಾವಿ, ಧಾರವಾಡ ಮೂಲಕ ಯಲ್ಲಾಪುರದ ಕಾಡಿಗೆ ವಲಸೆ ಬಂದವರು. ಗೌಳಿ ವಲಸೆಯ ಕಾರಣಗಳಲ್ಲಿ ಅಂದಿನ ಹವಾಮಾನದ ಪರಿಣಾಮವು ಇತ್ತು ಎಂಬುದು ಇವರ ಜೊತೆಗೆ ಮಾತಾಡಿದ ಬಳಿಕ ತಿಳಿಯಿತು. ಒಂದು ವರ್ಷ ಮಳೆ ಇಲ್ಲದೇ ಬೆಳೆ ಕೈಗೆ ಬರುತ್ತಿರಲಿಲ್ಲ, ಇನ್ನೊಂದು ವರ್ಷ ಅಕಾಲಿಕ ಮಳೆ ಬಂದು ಬೆಳೆ…
-

ಕಾಡು ಬಳ್ಳಿಯ ಕಣಜದಲ್ಲಿ ಪ್ರವಾಹದ ವಿರುದ್ದ ಒಂದು ಹೋರಾಟ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೊರ್ಸೆ ಊರಿಗೆ ರಸ್ತೆ ಸಂಪರ್ಕ ಸಿಕ್ಕ ಕಾರಣ ಈ ವರ್ಷ ಸೇತುವೆ ಕಟ್ಟಲಿಲ್ಲ. ಕಾಡಿನ ಬಳ್ಳಿ ತಂದು, ಬಿದಿರು ಬಳಸಿ ಕಲ್ ಕಣಜದ ಆಧಾರದಲ್ಲಿ ಚೆಂದದ ಸೇತುವೆ ನಿರ್ಮಿಸುವ ಕಲೆ ನದಿ ದಂಡೆಯ ಗ್ರಾಮಸ್ಥರಲ್ಲಿದೆ. ಮಳೆಗಾಲದ ಬಳಿಕ ಬೇಸಿಗೆ ಓಡಾಟಕ್ಕೆ ಇದನ್ನು ನಿರ್ಮಿಸಿದರೆ ಮಾತ್ರಾ ಬದುಕು ಸಲೀಸು. ಬಳ್ಳಿಯಲ್ಲಿ ಸುತ್ತಿದ ಈ ಕಂಬದ ರಚನೆ ಒಳಗಡೆ ಇರೋದು ನದಿಯ ಕಲ್ಲುಗಳು.ವೇಗವಾಗಿ ಹರಿಯುವ ನೀರು ಕಂಬಕ್ಕೆ ಹಾಕಿದ ಕಲ್ಲಿನ ನಡುವೆ ನುಸುಳಿ…
