ವ್ಯಾಘ್ರನ ಲೋಕದಲ್ಲಿ – ಹುಲಿಯ ಕುರಿತ ಲೇಖನ

Posted by

·

ನಿಸರ್ಗದ ಸೃಷ್ಟಿಯಲ್ಲಿ ಎಲ್ಲ ಜೀವಿಗಳಿಗೂ ತನ್ನದೇ ಆದ ಮಹತ್ವವಿದೆ, ಸ್ಥಾನವಿದೆ. ಆನೆ, ಚಿರತೆ, ಸಿಂಹ ಹೀಗೆ ಅನೇಕ ಪ್ರಾಣಿಗಳಿಗೆ ಇರುವ ಮಹತ್ವ ಒಂದು ರೀತಿಯದಾದರೆ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಎಂದೇ ಹೆಸರಾಗಿರುವ ಹುಲಿಗಿರುವ ಮಹತ್ವವೇ ಬೇರೆತೆರನಾದುದು. ಹುಲಿ ತನ್ನದೇ ಆದ ಗಾಂಭೀರ್ಯ, ಬೇಟೆಯ ಸಂಚನ್ನು ರೂಪಿಸುವ ಬಗೆ, ಅದರದೇ ಆದ ಒಂದು ಬಗೆಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.

ಇತ್ತೀಚೆಗೆ ಅಳಿವಿನ ಅಂಚಿನಲ್ಲಿರುವ ಹುಲಿಗಳ ರಕ್ಷಣೆಯ ದೃಷ್ಟಿಯಿಂದ ಆ ಬಗ್ಗೆ ಜಾಗೃತಿ ಮೂಡಿಸಲು ಅಂತರಾಷ್ಟ್ರೀಯ ಹುಲಿ ದಿನ (International Tiger Day) ವನ್ನು ಪ್ರತಿವರ್ಷ ಜುಲೈ 29 ರಂದು ಆಚರಿಸಲಾಗುತ್ತದೆ. ಹುಲಿ ಉಳಿಸಿ (Save Tiger) ಅಂತಹ ರಾಷ್ಟ್ರೀಯ ಮಟ್ಟದ ಅಭಿಯಾನಗಳು ನಡೆಸಲಾಗಿದೆ.

ಜನರಲ್ಲಿ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ 2010 ರಂದು ರಷ್ಯಾದ ಸೇಂಟ್ ಪಿಟರ್ಬ್ಗ್ ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಸಂಧರ್ಭದಲ್ಲಿ ಅಂತಾರಾಷ್ಟ್ರೀಯ ಹುಲಿ ದಿನಾಚರಣೆಯಯನ್ನು ಆಚರಿಸಲಾಗುವುದೆಂದು ಘೋಷಿಸಲಾಯಿತು. WWF ತಜ್ಞ ಡ್ಯಾರೆನ್ ಗ್ರೋವರ್ ಪ್ರಕಾರ ಕಳೆದ 100 ವರ್ಷಗಳಲ್ಲಿ ಪ್ರಪಂಚದ 97 ಪ್ರತೀಶಕ ಹುಲಿಗಳು ನಾಶವಾಗಿದೆ. ಪರಿಸರ ನಾಶ, ಹುಲಿಯ ಕಳ್ಳ ಬೇಟೆ, ಅಭಿವೃದ್ಧಿಯ ಹೆಸರಿನಲ್ಲಿ ನಡೆಸಲಾಗುವ ಕೆಲವೊಂದು ಕಾರ್ಯಗಳಿಂದ ಹುಲಿಯ ಸಂತತಿ ಕಡಿಮೆಯಾಗಲು ಕಾರಣವಾಗುತ್ತಿದೆ. ಅಕ್ರಮವಾಗಿ ನಡೆಸುತ್ತಿರುವ ವನ್ಯಜೀವಿಗಳ ವ್ಯಾಪಾರ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹಾಗೂ ಕಾಡಿನ ನಾಶದಿಂದಾಗಿ ಹುಲಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಜಗತ್ತಿನಲ್ಲಿ ಕೇವಲ 13 ರಾಷ್ಟ್ರಗಳಲ್ಲಿ ಮಾತ್ರ ಹುಲಿಗಳು ಕಂಡು ಬರುತ್ತದೆ. ನಾಲ್ಕು ವರ್ಷಕೊಮ್ಮೆ ಹುಲಿ ಗಣತಿ ಮಾಡಲಾಗುತ್ತದೆ. 2018ರ ಹುಲಿ ಗಣತಿ ಪ್ರಕಾರ ದೇಶದಲ್ಲಿ 2967 ಹುಲಿಗಳು ಇವೆ. ಈ ಪ್ರಕಾರ ಹುಲಿಗಳ ಸಂತತಿಗೆ ಜಗತ್ತಿನಲ್ಲಿ ಸುರಕ್ಷಿತ ಸ್ಥಳ ಭಾರತವಾಗಿದೆ. ವಿಶ್ವದಲ್ಲೇ ಅತೀ ಹೆಚ್ಭು ಹುಲಿಗಳು ಇರುವುದು ಅದು ಏಷ್ಯ ಖಂಡದಲ್ಲೇ. 2018ರ ಗಣತಿ ಪ್ರಕಾರ ಮಧ್ಯ ಪ್ರದೇಶದಲ್ಲಿ 526 ಹುಲಿಗಳಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 524 ಹುಲಿಗಳಿದ್ದು ಎರಡನೇ ಸ್ಥಾನದಲ್ಲಿದೆ.

ಹುಲಿಗಳ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಅರಣ್ಯ ಇಲಾಖೆಯ ಜಾಗರುಕತೆ, ಹಾಗೂ ಸಂರಕ್ಷಣೆಯ ಪ್ರಯತ್ನಗಳು ಹುಲಿ ಸಂಖ್ಯೆ ಹೆಚ್ಚಾಗಳು ಒಂದು ಕಾರಣ. ಹುಲಿ ಸಂರಕ್ಷಿತ ಪ್ರದೇಶವನ್ನು ಹೆಚ್ಚು ಮಾಡಲಾಗಿದೆ. ರಾಷ್ಟಿಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸ್ಥಾಪನೆ ಆಗಿದ್ದು ತುಂಬಾ ಪ್ರಯೋಜನಕಾರಿ ಆಗಿದೆ. 1973 ರಲ್ಲಿ ಪ್ರಾಜೆಕ್ಟ್ ಟೈಗರ್ ಅಸ್ತಿತ್ವಕ್ಕೆ ಬಂತು. ಈಗ ಈ ಯೋಜನೆಗೆ 50 ವರ್ಷ ತುಂಬಿದೆ. ಹುಲಿಗಳ ಉಳಿವಿಗಾಗಿ ಈ ಯೋಜನೆ ಕಾರ್ಯ ಮಾಡಿತ್ತಿದೆ. “Special Tiger Protection Force” ದೇಶದಲ್ಲೇ ಮೊದಲ ಬಾರಿಗೆ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಜಾರಿಗೆ ತರಲಾಗಿದೆ.

ಕರ್ನಾಟಕದಲ್ಲಿ ಹುಲಿ ಸಂರಾಕ್ಷಿತಾ 5 ಪ್ರದೇಶಗಳು….. ಬಂಡೀಪುರ (ಚಾಮರಾಜನಗರ ಜಿಲ್ಲೆ), ನಾಗರಹೊಳೆ (ಮೈಸೂರು ಮತ್ತು ಕೊಡಗು ಜಿಲ್ಲೆ), ಬಿ ಆರ್ ಟಿ (ಚಾಮರಾಜನಗರ ಜಿಲ್ಲೆ), ಭದ್ರಾ (ಶಿವಮೊಗ್ಗ ಮತ್ತು ಚಿಕ್ಕಮಗಳೂರು) ಮತ್ತು ಕಾಳಿ (ಉತ್ತರ ಕನ್ನಡ ಜಿಲ್ಲೆ).

ಹುಲಿ ಧೈರ್ಯದ ಸಂಕೇತವಾಗಿದ್ದು ಅದು ಬಾಲ್ಯದಿಂದಲೂ ನಮಗೆ ಕಥೆಯಲ್ಲಿ ಬರುವ ನೆಚ್ಚಿನ ಪ್ರಾಣಿ. ಹುಲಿಗಳ ಸಂಖ್ಯೆ ಕ್ಷಿಣಿಸುತ್ತಿದ್ದರೆ ಪ್ರಾಣಿ ಸಾಮ್ರಾಜ್ಯದ ಭವ್ಯ ಜೀವಿಯನ್ನು ನೋಡಲು ಮುಂದೆ ಸಾಧ್ಯವಾಗದೆ ಇರಬಹುದು. ಆದುದರಿಂದ ಹುಲಿಗಳ ರಕ್ಷಣೆಗಾಗಿ ವಿಶ್ವ ಹುಲಿ ದಿನವನ್ನು ಬೆಂಬಲಿಸೋಣ, ನಾವು ಕೈ ಜೋಡಿಸೋಣ.

✍️ ಅಕ್ಷತಾ ಜಗದೀಶ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading