ಯುಗಾದಿ ಸಂಭ್ರಮ – ಕವನ

Posted by

·

ಯುಗದ ಆದಿಗೆ ಸ್ವಾಗತಕೋರಿ
“ಚೈತ್ರ ಮಾಸ”ದ ಸುಗ್ಗಿ
ಗೆಜ್ಜೆ ಕಟ್ಟಿ ತಾ ಕುಣಿದಿದೆ
ನವ ಸಂವತ್ಸರದ ಆಗಮನಕೆ…

ಚಿಗುರೆಲೆಯೊಳು ತಾ ಮೆರೆದಿದೆ
ಸಹ್ಯಾದ್ರಿಯ ಸಾಲುಗಳು
ಕಡಲಿನಲೆಗಳ ನೃತ್ಯವದು
ಚುಂಬಿಸುತಲಿದೆ ಬಾನಂಚಿನ
ರವಿ‌ ಕಿರಣಗಳಿಗೆ
ನವೋಲ್ಲಾಸದ ಕ್ಷಣಕೆ…

ಹೊಸ ಋತುವಿನ ಆಗಮನಕೆ
“ವಸಂತ “ಗಾನದ ಕಳೆತುಂಬಿತು
ಕೋಗಿಲೆಯ‌ ಮಧುರ ನಾದ…
ನವ ಕನಸುಗಳು‌ ಸಾಗಲಿ
ಹೊಸ ದಿಗಂತದೆಡೆಗೆ
ಮೂಡಲಿ ಎಲ್ಲೆಡೆ ಉಲ್ಲಾಸದ
ನವ ಪರ್ವ….

“ಶೋಭನ ನಾಮ” ಸಂವತ್ಸರವದು
ನಗುವಿನಲೆಗಳ ಮೇಲೆ
ಮರೆಸಲಿ ಕಹಿ ನೆನಪುಗಳ
ಸರಮಾಲೆ..
ಚೈತ್ರದ ಚಿಗುರಿನ ಹೊಸ ವರ್ಷ
ಆನಂದದ ಹೊಳೆ ಹರಸಲಿ
ಎಲ್ಲರ ಬದುಕಲಿ..

ನಿಲ್ಲದ ಪಯಣ ಸಾಗಲಿ
ಹೊಸ ಯುಗದ ಜೊತೆಗೆ
ರಮ್ಯತೆಯ ಭಾವದೊಳು
ಹಸಿರು ತೋರಣದಂತೆ….
ಪಯಣಿಸಲಿ ಬಾಳಿನ ಪಲ್ಲಕ್ಕಿ
“ಯುಗಾದಿ”ಯೊಳು ಸವಿಯುವ
ಬೇವು-ಬೆಲ್ಲದಂತೆ…..

✍️ ಅಕ್ಷತಾ ಜಗದೀಶ.


Discover more from Suggi Sampada

Subscribe to get the latest posts sent to your email.

One response to “ಯುಗಾದಿ ಸಂಭ್ರಮ – ಕವನ”
  1. gurusiddayyas

    ಸುಂದರ ಕವನ

Leave a Reply to gurusiddayyasCancel reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading