ಉತ್ತರ ಕನ್ನಡ ಜಿಲ್ಲೆಯಲ್ಲಿದೆ ಜಗತ್ತಿನ ಏಕೈಕ ಮರ – ಕಾಡುಗೇರು – ಜಿಲ್ಲೆಯ ಅರಣ್ಯ ತಜ್ಞರ ಸಾಧನೆ

Posted by

·

ಜಗತ್ತಿನ ಏಕೈಕ ಸಸ್ಯ ಪ್ರಭೇದ ಸೆಮಿಕಾರ್ಪಸ್ (Semecarpus) ಇದು ಗೇರು ಜಾತಿಯ ಒಂದು ಸಸ್ಯ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಕತ್ತಲೆಕಾನಿನಲ್ಲಿದೆ ಈ ಕಾಡುಗೇರು ಜಾತಿಯ ಮರ. ಮಾವಿನಗುಂಡಿ ಹೊರತುಪಡಿಸಿದರೆ ಜಗತ್ತಿನ ಬೇರೆಲ್ಲೂ ಕಾಡುಗೇರು ಇಲ್ಲವಂತೆ.

ಕತ್ತಲೆಕಾನಿನ ನಿತ್ಯ ಹರಿದ್ವರ್ಣ ಕಾಡಿನಲ್ಲಿ ವಿರಳವಾಗಿ ಕಂಡು ಬರುವ ಈ ಕಾಡುಗೇರು ಕಾಡು ಕಣಗಿಲದಂತೆ ದೊಡ್ಡ ಎಲೆಗಳನ್ನು ಹೊಂದಿರುತ್ತದೆ. ಆದರೆ ಈ ಸಸ್ಯ ಕಾಡು ಕಣಗಿಲದಂತೆ ಬೇಸಿಗೆಯಲ್ಲಿ ಎಲೆ ಉದುರಿಸಿ ಬೋಳಾಗುವುದಿಲ್ಲ. ಮೂರು ದಶಕಗಳ ಹಿಂದೆ ಕಂಡುಬಂದ ಈ ಸಸ್ಯ ಕತ್ತಲೆಕಾನು ಬಿಟ್ಟರೆ ಜಗತ್ತಿನ ಬೇರೆಲ್ಲೂ ಕಂಡುಬರದ ವಿಶಿಷ್ಟ ಮರ.

ಕತ್ತಲೆಕಾನಿನಲ್ಲಿ ಮಾತ್ರ ಹಾಗೂ ಬೇರೆಲ್ಲೂ ಈವರೆಗೆ ಪತ್ತೆಯಾಗದ ಈ ಸಸ್ಯ ಜಾತಿಗೆ, ಅರಣ್ಯ ವಿಜ್ಞಾನಿಗಳು ಕತ್ತಲೆ ಕಾನ್ಸೀಸ್ ಸೆಮಿಕಾರ್ಪಸ್ ಎಂದು ನಾಮಕರಣ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅರಣ್ಯ ತಜ್ಞರೇ ಕಂಡುಹಿಡಿದ ಈ ಕತ್ತಲೆಕಾನ್ಸೀಸ್ ಮರ ಮಾಧ್ಯಮಗಳ ಕಣ್ಣಿಗೆ ಬಿದ್ದದ್ದೇ ಜಗತ್ತಿನ ನೂರು ಮೂಲೆಗಳಿಂದ ಜನರು, ತಜ್ಞರು, ಪರಿಸರಾಸಕ್ತರು ಈ ಮರ ಹುಡುಕಿಕೊಂಡು ಬರತೊಡಗಿದ್ದಾರೆ. ಕತ್ತಲೆ ಕಾನು ರಕ್ಷಿತ ಅರಣ್ಯ ಪ್ರದೇಶ. ಈ ಕಾಡಿನಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಯಾರೂ ಈ ಕಾಡನ್ನು ಪ್ರವೇಶಿಸುವಂತಿಲ್ಲ.

👉 ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಮೂಲ ಮಾಹಿತಿ: ವಿಜಯ ಕರ್ನಾಟಕ – ಜಗತ್ತಿನ ಗಮನ ಸೆಳೆದ ಕರ್ನಾಟಕದ ಮರ, ಕತ್ತಲೆ ಕಾನ್ಸೀಸ್‌ ಸೆಮಿಕಾರ್ಪಸ್‌ ಮರ ಎಲ್ಲಿದೆ ಗೊತ್ತಾ..?


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading