ವಿಶ್ವ ವಿಖ್ಯಾತ ಗೇರುಸೊಪ್ಪ ಆಥವಾ ಜೋಗ ಜಲಪಾತವಿರುವದು ಉತ್ತರ ಕನ್ನಡ ಜಿಲ್ಲೆಯಲ್ಲಿ ಆದರೆ ಅದರ ಕೀರ್ತಿಯು ದೊರಕಿರುವದು ಪಕ್ಕದ ಶಿವಮೊಗ್ಗ ಜಿಲ್ಲೆಗೆ.ಉತ್ತರ ಕನ್ನಡ ಮುಂಬೈ ಪ್ರಾಂತಕ್ಕೆ ಸೇರಿದ್ದು ಬ್ರಿಟಿಷರ ನೇರ ಆಳ್ವಿಕೆಗೆ ಒಳಪಟ್ಟಿತ್ತು ಹಾಗೂ ಶಿವಮೊಗ್ಗ ಜಿಲ್ಲೆ ಮೈಸೂರು ಪ್ರಾಂತ್ಯಕ್ಕೆ ಸೇರಿತ್ತು.ಬ್ರಿಟಿಷರು ಜಲಪಾತವನ್ನು ಉತ್ತರ ಕನ್ನಡ ಜಿಲ್ಲೆಗೆ ಸೇರಿಸಿ ಎರಡು ಜಿಲ್ಲೆಗಳ ಗಡಿಯನ್ನು ನಿರ್ಧರಿಸಿದ್ದರು.ಜಲಪಾತದ ಎದುರು ಬ್ರಿಟಿಷರು ಬಂಗಲೆಯನ್ನು ಕಟ್ಟಿದ್ದರು.ಶಿವಮೊಗ್ಗ ಜಿಲ್ಲೆಗೆ ಸೇರಿದ ಪ್ರದೇಶದಿಂದ ದೂರದಿಂದ ಮಾತ್ರ ಜಲಪಾತವನ್ನು ವೀಕ್ಷಿಸಬಹುದು ಅಲ್ಲಿಯೇ ಮೈಸೂರು ಒಡೆಯರು ಬಂಗಲೆಯನ್ನು ಕಟ್ಟಿದ್ದರು.ಜಲಪಾತವನ್ನು ಹತ್ತಿರದಿಂದ ವಿಕ್ಷಿಸಬೇಕಾದರೆ ನದಿಯನ್ನು ದಾಟಿ ಉತ್ತರಕನ್ನಡ ಜಿಲ್ಲೆಗೆ ಬರಬೇಕು.ಬ್ರಿಟಿಷರು ಜಲಪಾತವನ್ನು ಗೇರುಸೊಪ್ಪ ಜಲಪಾತವೆಂದು(Gairusoppa Falls) ಕರೆದರೆ ಮೈಸೂರು ಪ್ರಾಂತದ ಜನ ಇದನ್ನು ಜೋಗ ಜಲಪಾತವೆಂದು ಕರೆಯುತ್ತಿದ್ದರು.ಈ ಜಲಪಾತದ ಹೆಸರಿನಲ್ಲಿ ಬ್ರಿಟಿಷರು ತಮ್ಮ ಯುದ್ದ ಹಡಗಿಗೆ ಗೇರುಸೊಪ್ಪ ಎನ್ನುವ ಹೆಸರನ್ನು ಸಹ ಇಟ್ಟಿದ್ದರು ಇದನ್ನು ನಾಜಿಗಳು ಎರಡನೇ ಮಹಾ ಯುದ್ದದಲ್ಲಿ ಸಮುದ್ರದಲ್ಲಿ ಮುಳುಗಿಸಿದ್ದರು.ರಾಜ್ಯ ಏಕೀಕರಣದ ನಂತರ ಮೈಸೂರು ಪ್ರಾಂತ್ಯದ ಜನ ಏನು ಹೇಳುತ್ತಾರೋ ಅದನ್ನೇ ಕರ್ನಾಟಕದ ಎಲ್ಲ ಜನ ಹೇಳುವಂತಾಯಿತು.ಜೋಗ ಜಲಪಾತವೆಂದರೆ ಶಿವಮೊಗ್ಗ ಜಿಲ್ಲೆ ಎಂದಾಯಿತು.ಜೋಗ ಜಲಪಾತ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರು ಶಿವಮೊಗ್ಗ ಜಿಲ್ಲೆಯ ಲೆಂಡ್ ಮಾರ್ಕ್ ಆಯಿತು.ಉತ್ತರ ಕನ್ನಡ ಜಿಲ್ಲೆಯ ಜನರ ನಿಷ್ಕ್ರಿಯತೆಯಿಂದಾಗಿ ಜಿಲ್ಲೆಯು ವಿಶ್ವ ವಿಖ್ಯಾತ ಜಲಪಾತದ ಕಿರ್ತಿಯಿಂದ ವಂಚಿತ ವಾಗಿದೆ.ಸರಕಾರದಿಂದ ಜಲಪಾತದ ಅಭಿವ್ರದ್ದಿಗೆ ಹಣವು ಸಹ ಶಿವಮೊಗ್ಗ ಜಿಲ್ಲೆಗೆ ಸಿಗುತ್ತಿದೆ ,ಜಲಪಾತವಿರುವ ಉತ್ತರ ಕನ್ನಡ ಜಿಲ್ಲೆಯ ಪ್ರದೇಶದಲ್ಲಿ ಯಾವದೇ ಮೂಲಭೂತ ಸೌಕರ್ಯಗಳಿಲ್ಲ ಅನ್ನುವುದು ವಿಶಾದನಿಯ.
ಮಾಹಿತಿ: ದೆವಿದಾಸ್ ಪ್ರಭು, ANKOLA- CULTURE HISTORY AND ECOLOGY


Leave a Reply