ಉತ್ತರ ಕನ್ನಡ ಜಿಲ್ಲೆಯ ನಟೇಶ್ ಹೆಗ್ಡೆ ಅವರಿಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ

Posted by

·

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ (ಸಿಸಿ೯ಯ) ನಟೇಶ್ ಹೆಗಡೆ ಅವರ “ಪೆಡ್ರೊ” ಚಲನಚಿತ್ರದ ನಿರ್ದೇಶನಕ್ಕಾಗಿ ಖ್ಯಾತ ಪಿಂಗ್ಯಾವ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ನಟೇಶ್ ಹೆಗಡೆ, ಕನ್ನಡ ದಿನಪತ್ರಿಕೆ ಪ್ರಜಾವಾಣಿಯಲ್ಲಿ ಸಂಕ್ಷಿಪ್ತವಾಗಿ ಪತ್ರಕರ್ತರಾಗಿ ಕೆಲಸ ಮಾಡಿದರು. ಅವರ “ಕುರ್ಲಿ” ಕಿರುಚಿತ್ರ ರಾಷ್ಟ್ರ ಮತ್ತು ಹಲವಾರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿತ್ತು.

ನಟೇಶ್ ಹೆಗ್ಡೆಯವರ ” ಪೆಡ್ರೊ” ಕನ್ನಡ ಚಲನಚಿತ್ರವಾಗಿದ್ದು, ಬೂಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಬಿ ಎಫ್ ಐ ಲಂಡನ್ ಚಲನಚಿತ್ರೋತ್ಸವ ಸೇರಿದಂತೆ ಹಲವು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿತು. ಇತ್ತೀಚೆಗೆ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಆಯೋಜನೆಗೊಂಡ ಪಿಂಗ್ಯಾವ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ೫ನೇ ಆವೃತ್ತಿಯಲ್ಲಿ ‘ಕ್ರೌಚಿಂಗ್ ಟೈಗರ್ಸ್’ ಸ್ಪರ್ಧಾ ವಿಭಾಗದಲ್ಲಿ ಸ್ಪಧಿ೯ಸಿತ್ತು. ಖ್ಯಾತ ಇಟಾಲಿಯನ್ ನಿರ್ದೇಶಕ ‘ ರಾಬರ್ಟೊ ರೊಸಿಲೀನಿ’ ಅವರ ಹೆಸರಿನಲ್ಲಿ ನೀಡಲಾಗುವ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ನಟೇಶ್ ಅವರು ಪಡೆದರು. ಪ್ರಶಸ್ತಿಯ‌ ಜೊತೆಗೆ ₹ ೭.೫೦ ಲಕ್ಷದ ನಗದು ಬಹುಮಾನವನ್ನು ಪಡೆದಿದ್ದಾರೆ.

‘ಪೆಡ್ರೊ’ ಮಧ್ಯಮ ವರ್ಗದ ಎಲೆಕ್ಟ್ರಿಷಿಯನ್ ಕುರಿತಾದ ಚಲನಚಿತ್ರವಾಗಿದ್ದು, ಇದನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಎಲೆಕ್ಟ್ರಿಷಿಯನ್ ಮಾಡಿದ ಆಕಸ್ಮಿಕ ಅಪರಾಧಕ್ಕೆ ಹಳ್ಳಿ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ವಿಶೇಷತೆ ಏನೆಂದರೆ ಈ ಚಲನಚಿತ್ರದಲ್ಲಿ ನಟೇಶ್ ಹೆಗ್ಡೆಯವರ ತಂದೆ ಗೋಪಾಲಕೃಷ್ಣ ಹೆಗ್ಡೆ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ನಟೇಶ್ ಹೆಗಡೆರವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವತಿಯಿಂದ 2019ರಲ್ಲಿ ಆಯೋಜಿಸಿದ “ಡಿಎಚ್ ಚೆಂಜ್ ಮೇಕಸ್೯”ಗೆ ಆಯ್ಕೆಯಾದ 19 ವ್ಯಕ್ತಿಗಳಲ್ಲಿ ನಟೇಶ್ ರವರು ಒಬ್ಬರಾಗಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.

ನಟೇಶ್ ಹೆಗಡೆ ಅವರು ಹೀಗೆ ಅನೇಕ ಉತ್ತಮ ಕಥಾಧಾರಿತ ಚಲನಚಿತ್ರಗಳನ್ನು , ಕಿರುಚಿತ್ರಗಳನ್ನು ನಿರ್ದೇಶಿಸಿ ಅನೇಕಾನೇಕ ಪ್ರಶಸ್ತಿಗಳು ಇವರಿಗೆ ದೊರಕಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೀರ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತಾಗಲಿ ಎಂಬುದೇ ನಮ್ಮ ಹಾರೈಕೆ.

ಮಾಹಿತಿ: ಜಗದೀಶ್ ಬಿ. ಗೌಡ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading