ಪ್ರತಿಷ್ಠಿತ ನಾಸಾ ಪ್ರಶಸ್ತಿ ವಿಜೇತ ಶಿರಸಿಯ ದಿನೇಶ್ ಹೆಗ್ಡೆ

Posted by

·

ಉತ್ತರ ಕನ್ನಡದ ಹೆಮ್ಮೆಯ ಪುತ್ರನಾದ ದಿನೇಶ ವಸಂತ ಹೆಗಡೆ ಅವರು ‘ನಾಸಾ’ ಪ್ರಶಸ್ತಿಗೆ ಆಯ್ಕೆಯಾಗುವುದರ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರು ನಾಸಾದ (ನ್ಯಾಷನಲ್‌ ಏರೋನಾಟಿಕ್ಸ್‌ ಅ್ಯಂಡ್‌ ಸ್ಪೇಸ್‌ ಅಡಿನಿಸ್ಟೇಷನ್‌) ಭೂಮಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಅನುದಾನದಲ್ಲಿ “ಫ್ಯೂಚರ್‌ ಇನ್ವೆಸ್ಟಿಗೇಟರ್‌” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಿಮ್ಮ ಸಾಧನೆ ಉತ್ತರ ಕನ್ನಡ ಜಿಲ್ಲೆಯ ಯುವಕರಿಗೆ ಸ್ಪೂರ್ತಿದಾಯಕವಾಗಿದೆ.

ದಿನೇಶ ವಸಂತ ಹೆಗಡೆ ಅವರು ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನ ಸಶಿಗುಳಿ ಗ್ರಾಮದಲ್ಲಿ ಜನಿಸಿದ್ದರು. ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕ್ರಮವಾಗಿ ಸಿದ್ದಾಪುರ ತಾಲ್ಲೂಕಿನ ವಾಜಗದ್ದೆ ಸರ್ಕಾರಿ ಶಾಲೆಯಲ್ಲಿ ಮತ್ತು ಹಾರ್ಸಿಕಟ್ಟಾದ ಅನುದಾನಿತ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ. ನಂತರ ಮೈಸೂರಿನ ಯುವರಾಜ ಕಾಲೇಜ್‌ನಲ್ಲಿ ಬಿ.ಎಸ್‌.ಸಿ. ಪದವಿಯನ್ನು, ಮೈಸೂರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ದಿನೇಶ ವಸಂತ ಹೆಗಡೆ ಅವರು ಅಮೇರಿಕದ ಹಂಟ್ಸ್‌ ವಿಲ್‌ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದಲ್ಲಿ
ಪಿಎಚ್‌.ಡಿ. ಅನ್ನು ಮಾಡುತ್ತಿದ್ದಾರೆ. ಅವರ ಸ೦ಶೋಧನೆಯ ವಿಷಯ “ಬಾಹ್ಯಾಕಾಶ ಹವಾಮಾನದ ಅನಿಶ್ಚಿತತೆಗಳ
ಪರಿಮಾಣಾತ್ಮಕ ಅಧ್ಯಯನ’. ಪ್ರಸ್ತುತ ದಿನೇಶ ವಸಂತ ಹೆಗಡೆ ಅವರು “ಯು.ಎ.ಎಚ್‌. ಸೆಂಟರ್‌ ಫಾರ್‌ ಸ್ಟೇಸ್‌ ಪ್ಲಾಸ್ಮಾ ಮತ್ತು ಏರೋನಾಮಿಕ್‌ ರಿಸರ್ಚ್‌’ನ ಬಾಹ್ಯಾಕಾಶ ವಿಜ್ಞಾನ ವಿಭಾಗದಲ್ಲಿ ಪದವಿ ಸಂಶೋಧನಾ ಸಹಾಯಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಮಾಹಿತಿ: ಜಗದೀಶ್ ಗೌಡ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading