
ಹೆಗಡೆ ಎಂದೊಡೆ ನೆನಪಿಗೆ ಬರುವುದೊಂದೇ ಮುಖ.. ರಾಮಕೃಷ್ಣ ಹೆಗಡೆ.. ಉತ್ತರ ಕನ್ನಡ ಜಿಲ್ಲೆಯ ನಿಜವಾದ ಹೆಮ್ಮೆ.. ಅಗಸ್ಟ್ ೨೯ ರಂದು ಹುಟ್ಟಿದ ಈ ಮೇಧಾವಿಯ ಕುರಿತು ಬರೆಯುತ್ತ ಹೊರಟರೆ ಅದು ನಕ್ಷತ್ರಗಳ ಎಣಿಕೆಯಂತೆ.. ಪಂಚಾಯತ್ ರಾಜ್.. ವಿಧವಾ ವೇತನ.. ವೃದ್ಧಾಪ್ಯ ವೇತನ.. ಲೋಕಾಯುಕ್ತ.. ಬಸ್ ಪಾಸ್.. ಹೀಗೆ ಸರ್ವಕಾಲಿಕ ಮೌಲ್ಯವುಳ್ಳ ಅದೆಷ್ಟೋ ಯೋಜನೆಗಳು… ಯಾವುದೇ ಪಂಥಕ್ಕೆ ಒಳಪಡದೆ ವಸ್ತುನಿಷ್ಠ ಪರಿಕಲ್ಪನೆ ಇವರ ಬದ್ಧತೆ.. ಹೆಗಡೆಯವರೆಂದರೆ ಮೌಲ್ಯ.. ಹೆಗಡೆಯವರೆಂದರೆ ಸಿದ್ಧಾಂತ.. ಹೆಗಡೆಯವರೆಂದರೆ ಆದರ್ಶ… ಹೆಗಡೆಯವರೆಂದರೆ ಆಕರ್ಷಣೆ.. ಹೆಗಡೆಯವರೆಂದರೆ ಸೃಜನಶೀಲತೆ.. ಹೆಗಡೆಯವರೆಂದರೆ ಮೇಧಾವಿತ್ವ.. ಹೆಗಡೆಯವರೆಂದರೆ ಜಾತ್ಯಾತೀತ.. ಹೆಗಡೆಯವರೆಂದರೆ ಧರ್ಮಾತೀತ…. ಅವರಿಂದ ಬೆಳೆದವರೆಷ್ಟೋ… ಬಾಳಿದವರೆಷ್ಟೋ… ನಂತರ ತುಳಿದವರೆಷ್ಟೋ… ಕರ್ನಾಟಕಕ್ಕೆ ಹೆಗಡೆಯವರ ಕೊಡುಗೆ ಅಪಾರ.. ಆದರೆ ಅದನ್ನ ಮರೆತಿರುವುದು ನಮ್ಮ ಬುದ್ಧಿಹೀನತ್ವ, ಪೂರ್ವಾಗ್ರಹ ಪೀಡಿತತ್ವದ ಸಾಕಾರ… ಅವರ ಸ್ಮರಣೆಯ ಶಾಶ್ವತತ್ವಕ್ಕೆ ವಿಶ್ವವಿದ್ಯಾಲಯದಲ್ಲಿ “ರಾಮಕೃಷ್ಣ ಹೆಗಡೆ ಅಧ್ಯಯನ ಪೀಠವಾಗಬೇಕು” ವಿಧಾನ ಸೌಧದ ಯಾವದಾದರೊಂದು ಪ್ರಮುಖ ಸ್ಥಳದಲ್ಲಿ ಅವರದೊಂದು ಸುಂದರ ಪುತ್ಥಳಿ ತಲೆಎತ್ತಿ ನಿಲ್ಲಬೇಕು… ಎಲ್ಲಕ್ಕಿಂತ ಹೆಚ್ಚಾಗಿ ಈಗಿನ ರಾಜಕಾರಣಿಗಳು ಹೆಗಡೆಯವರನ್ನ ಓದಬೇಕು… ಅನುಸರಿಸಬೇಕು ಆಗ ಹೆಗಡೆಯವರ ಆತ್ಮಕ್ಕೊಂದು ತೃಪ್ತಿ… ಅವರ ಸ್ಮರಣೆಯ ಸ್ವರೂಪಕ್ಕೂ ಒಂದು ನಿಜವಾದ ಅರ್ಥ ಬರುವುದು…” ಜನ ಮರೆತರೂ ‘ಮನ’ ಮರೆಯದ ಹೆಗಡೆ.
ಲೇಖಕರು: ಲಕ್ಷ್ಮೀಶ್ ಹೆಗಡೆ ಸೋಂದಾ
ಚಿತ್ರ ಕ್ರಪೆ: ಮಂಜು ಸಿರಸಿ


Leave a Reply