ಯಕ್ಷಗಾನದ ವೇಷಭೂಷಣಗಳ ಒಂದಿಷ್ಟು ವಿವರಗಳು
೧. ತುರಾಯಿ: ಮುಂಡಾಸು,ಕೇದಗೆ ಮುಂದಲೆ ತುದಿಯಲ್ಲಿ ಸಿಕ್ಕಿಸುವ ದಿಪಶಿಖಾಕೃತಿಯ ರಚನೆ.
೨. ತಾವರೆ: ಕಮಲ,ಹೂವು,ಕುಚ್ಚು. ಮುಂಡಾಸು ಕೇದಗೆ ಮುಂದಲೆಗಳ ಮಧ್ಯದಲ್ಲಿ ಹಾಕುತ್ತಾರೆ.
೩. ಕೆಂಚು: ಮುಂಡಾಸು, ಕೇದಗೆ ಮಂದಲೆ ಅಂಚುಗಳ ಮಧ್ಯಕ್ಕೆ ತಾವರೆಯ ನೇರಕ್ಕೆ ಸಿಕ್ಕಿಸುವ ಹೂವು ಅಥವಾ ಬೆಂಡಿನ ಎರಡು ಉರುಟು ಆಕೃತಿಗಳು.
೪. ಹೂವಿನ ಚೆಂಡು: ಸುತ್ತು ಬೆಂಡಿನದಂಡ ಬಟ್ಟೆಯ ಸುತ್ತು.
೫. ಜರಿಲಾಡಿ: ಜರಿ, ಪಗಡಿ, ಮುಂಡಾಸು, ಹಿಂದೆ ಜರಿಯಲಾಡಿ ಸಿದ್ದವಾದುದು ಬಳಕೆಯಿರಲಿಲ್ಲ. ಬಾಳೆಯ ಹಗ್ಗದ ಲಾಡಿಗಳಿಗೆ ಜರಿಪುಡಿ ಅಂಟಿಸಿ ತಯಾರಿಸುತ್ತಿದ್ದರು . ಒಣ ಬಾಳೆ ಸೀಳಿಗೆ ಎಣ್ಣೆ ಸವರಿ ಸುತ್ತುವುದು ಇತ್ತು. ಈಗ ರೆಡಿಮೀಡ್ ಬಂದಿದೆ.
೬. ಕೇದಗೆ: ಕೀರಿಟ ಮುಂಡಾಸುಗಳ ಮುಂಭಾಗದಲ್ಲಿ ಕಿವಿಯಿಂದ ಕಿವಿಯವರೆಗೆ ಕಟ್ಟುವ ಪಟ್ಟಕೆಯಂತಹ ಆಭರಣ. ಮರದ ಚಿಕ್ಕ ಪಟ್ಟಿಗಳಿಗೆ, ಕನ್ನಡಿ ಹರಳು ಕೂಡಿಸಿ, ಜೋಡಿಸಿ ತಯಾರಿಸುವರು. ಹಿಂದೆ ಕೇದಗೆ ಸೀಳುಗಳಿಂದ ತಮಾಯರಿಸುತ್ತಿದ್ದುದರಿಂದ ಕೇದಗೆ ಎಂಬ ಹೆಸರು ಬಂದಿರಬಹುದು. ಇದರ ಮೇಲಬದಿಯಲ್ಲಿ ಮಣಿ ಅಥವಾ ಮುತ್ತಿಗಳನ್ನು ಜೋಡಿಸಿರುತ್ತಾರೆ. ಈ ಆಭರಣವು ಭೂತವೇಷಗಳ ತಲೆಪಟ್ಟಿ, ತಲೆ ಎಂಬ ಆಭರಣಗಳನ್ನು ಹೋಲುತ್ತದೆ.
೭. ಕರ್ಣಪಾತ್ರ: ಕರ್ಣಪತ್ರ ವೇಷಗಳ ಕಿವಿಯ ಮುಂದಿನಿಂದ ಕಟ್ಟುವ ಆಭರಣ ಅತಿಕರಿಸಿದ ಕಿವಿ. ಇದು ಸಾಮಾನ್ಯವಾಗಿ S, B, ಮತ್ತು E ಆಕಾರಗಳಲ್ಲಿರುತ್ತದೆ. ಇದಕ್ಕೆ ಕಪ್ಪು ಬಣ್ಣದ ದಾರ ಅಥವಾ ಉಣ್ಣೆಯ ಅಂಚು ಅಥವಾ ಗೊಂಡೆ ಇರುತ್ತದೆ. ಬಣ್ಣದ ವೇಷಗಳ ಕರ್ಣಪಾತ್ರ ( ಇದಕ್ಕೆ ಪತ್ರ ಅಥವಾ ಓಲೆ ಎಂದು ಹೆಸರು ) ಉರುಟಾಗಿದ್ದು ದೊಡ್ಡ ಗಾತ್ರದ್ದಾಗಿರುತ್ತದೆ. ಇದರ ಹಗ್ಗವು ಗಡ್ಡದ ಅಡಿಯಲ್ಲಿ, ಕುತ್ತಿಗೆಯ ಮೇಲ್ಭಾಗದಲ್ಲೊ, ಗಂಟು ನೆತ್ತಿಯ ಮೇಲೆಯೊ ನಿಲ್ಲುತ್ತದೆ.
೮. ಅಡ್ಡಿಗೆ (ತೆ): ಗಂಡು, ಹೆಣ್ಣು ವೇಷಗಳ ಕೊರಳಿನ ಆಭರಣ ಸರಗಳಿಗಿಂತ ಗಿಡ್ಡ, ಮತ್ತು ಘನವಾಗಿದ್ದು, ಕಟ್ಟಿದಾಗ ಕೊರಳಿಗೆ ತಾಗಿ ನಿಲ್ಲುತ್ತದೆ. ಗುಡ್ಡಡ್ಡಿಗೆ, ಗೆಜ್ಜೆಅಡ್ಡಿಗೆ, ಹಲ್ಲೆಅಡ್ಡಿಗೆ, ಸಂಕಲೆ ಅಡ್ಡಿಗೆ ಇವು ಅಡ್ಡಿಗೆಯ ಪ್ರಭೇದಗಳು.
೯. ತೋಳುಕಟ್ಟು: ತೋಳಿಗೆ ಕಟ್ಟುವ ಆಭರಣ. ಮಣ ಗಂಟಿನಿಂದ ಮೇಲೆ, ಭುಜಕೀತಿಗಿಂತ ಕೆಳಗೆ ಕಟ್ಟುವ ಅಲಂಕೃತ ಪಟ್ಟಿ.
೧೦. ಎದೆಕಟ್ಟು: ಎದೆಗೆ ಕಟ್ಟುವ ಆಭರಣ ಎದೆಪದಕ, ಎದೆಹಾರ, ಎದೆಕವಚ, ಕುರಲಾರ, ಕೊರಳಹಾರ.
೧೧. ಕೈಕಟ್ಟು: ಕೈಗೆ, ಮಣಿಗಂಟಿನ ಮೇಲಿಂದ ಕಟ್ಟುವ ಆಭರಣ ಪಟ್ಟಿಕೆ. ಇದು ಆಯತ ಅಥವಾ ಅರ್ಧವಜ್ರಾಕೃತಿಯಲ್ಲಿರಿತ್ತದೆ. ಮರದ ಕಡ್ಡಿ, ಹಲ್ಲೆಗಳನ್ನು ಜೋಡಿಸಿ ಅಥವಾ ಬಟ್ಟೆಯ ಮೆತ್ತೆಗೆ ಮಣಿ, ಹವಳಾದಿಗಳನ್ನು ಕೂರಿಸಿ ತಯಾರಿಸುವರು. ಇದನ್ನು ಕೈಗೆ ಸಿಕ್ಕಿಸಿ ಹಗ್ಗವನ್ನು ಎಳೆದಾಗ ಇದರ ಎರಡು ಬದಿಗಳು ಸೇರುವವು.
೧೨. ಭುಜಕೀರ್ತಿ: ಭುಜ ಕಿರೀಟ, ಭುಜಕಟ್ಟು ಬೇಗಡೆ ಹಚ್ಚಿದ ಮರದ ಮುಳ್ಳುಗಳನ್ನು ವಸ್ತ್ರದ ಮೆತ್ತಗೆ ಹೊಲಿದು ತಯಾರಿಸುವ ತ್ರಿಕೋನಾಕೃತಿಯ (ಒಡವೆಯಂತಹ) ತೊಡುಗೆ ಪಾತ್ರಾನುಗುಣವಾಗಿ ಆಕಾರ ವ್ಯತ್ಯಾಸವಿದೆ.
೧೩. ಒಡ್ಯಾಣ: ವೇಷದ ಸೊಂಟದ ಆಭರಣ. ನಡು ಪಟ್ಟಿಯ ಒಂದು ವಿಧ. ಇದಕ್ಕೆ ಜಾಲರಿಗಳು ಇರುತ್ತದೆ.
೧೪. ಶಲ್ಯೆ: ಶಾಲು ಹೆಗಲವಲ್ಲಿ ಕಿರೀಟ ಮುಂಡಾಸು ಕೇದಗೆ ಮುಂದಲೆಗಳಿಗೆ ತೆಲೆಯ ಮುಡಿಯಿಂದ ಸೊಂಟದ ವರೆಗೆ ಕಟ್ಟುವ ಶಲ್ಲೆ. ಇದನ್ನು ಮುಡಿಗೆ ಸಿಕ್ಕಿಸಿ ಎರಡು ಬದಿಗಳನ್ನು ಸೊಂಟಕ್ಕೆ ಸಿಕ್ಕಿಸಿದಾಗ ಸುಮಾರಾಗಿ ತ್ರಿಕೋನಾಕೃತಿಯಾಗುವುದು.
೧೫. ವೀರಗಸೆ: ಸೊಂಟಕ್ಕೆ ಕಟ್ಟುವ ಒಂದು ಆಭರಣ
ಸೊಂಟದಿಂದ ಮುಂಗಾಲಿನವರೆಗೆ ಬರುತ್ತೆ.
೧೬. ಮಾರುಮಾಲೆ: ವಿರಕಸೆಯ ಬದಿಗಳಲ್ಲಿ ನೇತು ನಿಲ್ಲುವ ಸರದಂತಹ ಆಭರಣ. ಸಂಪಿಗೆ ಮೊಗ್ಗುಗಳಂತಹ ಮಣಿಗಳ ಸರ.
೧೭. ಕಸೆಸೀರೆ: ವೇಷಗಳು ಕಚ್ಚೆ ಹಾಕಲು ಬಳಸುವ ಸೀರೆ ಬಟ್ಟೆ ಇದು ಕಪ್ಪು,ಕೆಂಪು, ಚೌಕುಳಿ ಇರುವ ಹಳದಿ ಸೀರೆ.
೧೮. ಗೆಜ್ಜೆ: ವೇಷಗಳು ಕಾಲಿಗೆ ಕಟ್ಟಿಕೊಳ್ಳುವ ಗೆಜ್ಜೆ ಸರ.
ಕಂಚು,ಬೆಳ್ಳಿ ಮಿಶ್ರಣದ ತಯಾರಿಕೆ.
೧೯. ಕಡಗ: ಪರುಷವೇಷಗಳಿಗೆ ಕಟ್ಟುವ ಕಾಲಿನ ಕಕಡಗ.
ಮಾಹಿತಿ: ಪ್ರಶಾಂತ ಮಲ್ಯಾಡಿ, Explore North Canara ಉತ್ತರಕನ್ನಡ ಜಿಲ್ಲೆ


Leave a Reply