ಅಂಕೋಲಾ – ಗುಮಟೆ ಪದ – 2

Posted by

·

ಗಟ್ಟದ ಕೆಳಗಿನ ಪಟ್ಟಾಣೆಂಬುದು ನೋಡಿದ್ರೆ ಅಂಕೋಲೆ
ಅಂಕೋಲೆ ಸಾರಾ ದೊಡ್ಡ ಬಜಾರಾ ಬೂಮಿತಾಯೇ ಆದಾರಾ
ಅರವತ್ತ ಅಂಗಡಿಗ್‌ ಎರಡೇ ಕಲ್ಲು ಸ್ರಷ್ಟಿ ಮೈನೇ ಗೋಲಾಕಾರಾ
ಶಿರೂರ ಹಿಡ್ಡೆ ಶಿರಮಂಗ್ಳೂರ್‌ ಹಿಡ್ದೆ ಬತ್ತಿರೆಲ್ಲನ ಜನರೆಲ್ಲಾ
ಶದ್ವಿಯ ಮನೆಯೋ ಸುತ್ತಲೆ ಮುತ್ತಲೆ ತಿರುಗೂತದೆ ದ್ಯೆವರೆಲ್ಲಾ
ಬೋಳಶೆಟ್ಟಿ ಪಂಜೆ ಪರ್ಬೂ ಶೀರೆಪರ್ಬು ಶಾವ್‌ಕಾರಾ
ಹಿತ್ತಲ ಹೋಖಿಮ್ಯೆನೆ ತೋಪುಲ ಕಟ್ಟ ನೆತ್ರೋ ತೆಂಗಿನಗಿಡವೆಲ್ಲಾ
ಈ ಊರ ಕೊಂಕೇಣರ್‌ ಹಣಸೇ ತಿನಸೇ ಮರುಳ್‌ ಮಾಡಿರ್‌ ತುರ್ಕರಿಗೆಲ್ಲಾ
ತುರ್ಕರ ಕೆಳಗಿನ ಗೆದ್ದೆ ಹೊಲಮನೆ ತಕ್ಕೊಂಡ್‌ ಬಿಟ್ಟರ ಕೊಂಕ್ಣೇರೆಲ್ಲಾ
ಮಂಗನಾಂಗೇ ಗಡ ಬಡ ಹಚ್ಚೆ ನೋಡೀರಲ್ಲೋ ಹಳೇ ಪಯ್ಕರು
ಹಳೇ ಪಯ್ಕರಿಗೆ ಮುಸಲ್ಮಾನರಿಗೆ ತಿಳಿಯೋದಿಲ್ಲ ಈ ಬರ
ಮಾವಿನ ಮರ್ಕೆ ಬಂದ್ಲಿಕ್ ಹಬ್ಬಿದಾಂಗ್‌ ಹಬ್ಬಿದರಲ್ಲೊ ಊರೆಲ್ಲಾ

ಈ ಊರಾ ನಾರ್ಯೋರ್‌ ಸೀರೆ ಉಡ್ವುದು ಮಣಿಕಂಟೆ ಕೆಳಗಿನ ಪೂರಾ
ಈ ಊರಾ ನಾರ್ಯೋರ್‌ ಕೊರಳಿಗೆ ಹಾಕ್ವದ ಕರಿಮಣಿ ಕಾಂಜಿನಸರ
ಈ ಊರಾ ನಾರ್ಯೋರ್‌ ಮೂಗಿಗೆ ಹಾಕ್ಟದ ಮೂಗಿನತ್ತೀನ ದಳೆ
ಈ ಊರಾ ನಾರ್ಯೋರ್‌ ಕಮೀಗೆ ಹಾಕ್ಟದ ವಾಲೀ ಪುತ್ತೊಳ ದಳೆ

ವಿ. ಗ. ನಾಯಕ… ಸಂಪಾದಕರು, ಗುಮಟೆಯ ಪದಗಳು, ಪದ್ಯ ಸಾಹಿತ್ಯ ಪ್ರಕಾರ -7, ಸಮಗ್ರ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ-7, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, 2006. ಪುಟ-156

ಮಾಹಿತಿ ಸಂಗ್ರಹಣೆ: ಜಗದೀಶ್ ಗೌಡ, ಧಾರವಾಡ (ಅಂಕೋಲಾ)


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading