ಬೀರರು ಈ ಶಬ್ದವು ಜನಪದ ದೇವರ ಸಂದರ್ಭದಲ್ಲಿ ಕೇಳಿ ಬರುವದು ಹೆಚ್ಚು. ಬೀರರು ಎಂದರೆ ಏನು? ಇದು ದೇವರೆ ? ಸಂಸ್ಕೃತ ಭಾಷೆ, ತದ್ಭವಗಳ ಪ್ರಯೋಗ ಇತ್ಯಾದಿಗಳಲ್ಲಿ ಹೊಕ್ಕುಬಳಕೆ ಮಾಡಿದ್ದರಿಂದ ಬೀರರು ಪದ ಬಂದಿರಬಹುದೇ? ಇದು ವೀರ ಇದರ ತದ್ಭವ ಎಂದು ಏನೂ ಅಡೆತಡೆಯಿಲ್ಲದೆ ಹೇಳಬಹುದು. ಆದರೆ ಜನಪದ ದೇವರ ಅಧ್ಯಯನಾದಿ ಸಂದರ್ಭದಲ್ಲಿ ವ್ಯವಹರಿಸುವಾಗ ಅಂದರೆ ಇವುಗಳ ಜೊತೆ ಹೊಕ್ಕು ಬಳಕೆ ಮಾಡುವಾಗ ಬೀರ ಈ ಶಬ್ದ ವೀರ ಇದರ ತದ್ಭವವಲ್ಲ. ಇದು ಅರ್ಥದಲ್ಲಿ ಪ್ರತ್ಯೇಕ ಅನನ್ಯತೆಯನ್ನು ಹೊಂದಿದೆಯೆಂದು ಕಂಡು ಬರುತ್ತದೆ ಹಾಗೂ ಜನಪದರಲ್ಲಿ ವೀರ ಇದು ಈರ ಎಂಬ ತದ್ಭವವನ್ನು ಹೊಂದಿದೆ ಉದಾಹರಣೆಗೆ ‘ಈರ ಮಾಸ್ತಿ’ ಆದರೆ ಇದನ್ನು ಬೀರ ಮಾಸ್ತಿ ಎನ್ನುವದಿಲ್ಲ. ಇದಲ್ಲದೆ ಮಾಸ್ತಿ ಶಬ್ದವನ್ನು ಬೀರರಿಗೆ ಬಳಸುವದಿಲ್ಲ. ಯಾಕೆಂದರೆ ಬೀರ ಇದು ಗಂಡು ದೇವರಿಗಿರುವ ಸಾಮಾನ್ಯ ಹೆಸರು. ಉದಾಹರಣೆಗೆ ಬಟ್ಟೆ ಬೀರ, ಜೈನ ಬೀರ, ಕಾನ ಬೀರ, ಗೋಳಿ ಬೀರ, ಉಲಿ ಬೀರ, ಹಾದಿ ಬೀರ, ಕೋಡಿ ಬೀರ, ಬೇಟೆ ಬೀರ ಇತ್ಯಾದಿ. ಹೀಗೆ ಈ ಬೀರ ಶಬ್ದವು ದೇವರು ಎಂಬ ಅರ್ಥವನ್ನು ಕೊಡುತ್ತದೆ. ಬೀರ ಶಬ್ದದ ಹಿಂದಿನ ಶಬ್ದಗಳು ಬೀರನ ಅಂದರೆ ದೇವರ ವಿಶೇಷ ಮಾಹಿತಿಯನ್ನು ಕೊಡುತ್ತವೆ. ಬೀರ ಎಂದರೆ ದೇವರು ಎಂಬ ಅರ್ಥ ಇರುವ ಕಾರಣ ಬೀರ, ಬೀರಣ್ಣ, ಬೀರಪ್ಪ ಎಂಬ ಹೆಸರುಗಳು ಮನುಷ್ಯರ ಹೆಸರುಗಳಾಗಿ ರೂಢಿಯಲ್ಲಿವೆ. ಬೀರಪ್ಪ ಕುರುಬರ ಆರಾಧ್ಯ ದೇವರು ಎಂದು ಕೋಶಗಳು ಹೇಳುತ್ತವೆ.[ಕನ್ನಡ ಜಾನಪದ ಕೋಶ ಕ.ಜಾ.ಪ] ಆದರೆ ಬೀರಪ್ಪ ಬೀರಣ್ಣಗಳು ಕುರುಬರಿಗಷ್ಟೇ ಸೀಮಿತವಾದ ದೇವರಲ್ಲ. ಉತ್ತರ ಕನ್ನಡದ ಕರಾವಳಿಯಲ್ಲಿ ಮೇಲೆ ತಿಳಿಸಿದಂತೆ ಬೀರ ಎಂಬ ಉತ್ತರ ಪದವುಳ್ಳ ಹೆಸರಿನ ದೇವರ ಸಂಖ್ಯೆ ಅಪಾರ. ಬೀರ ಎಂಬುದು ಪ್ರದೇಶವಾಚಕವಾಗಿ ಕರ್ನಾಟಕದಲ್ಲಿ ಹಾಗೂ ಕರ್ನಾಟಕದ ಗಡಿಯಲ್ಲಿ ಹಳ್ಳಿಯ ಹೆಸರಾಗಿ ದೊರಕುತ್ತವೆ. ಕೋಡಿಬೀರ ಎಂದರೆ ಕೋಡಿಯ ದೇವರು ಕೋಡಿಬೀರಪ್ಪ ಎಂಬಲ್ಲಿ ಕೋಡಿಯ ದೇವರು ಎಂದು ಅರ್ಥವಿದೆ. ಆದರೆ ಇಲ್ಲಿ ದೇವರು ಎಂಬುದರ ದ್ವಿರುಕ್ತಿಯಾಗಿದೆ. ಯಾಕೆಂದರೆ ಜನಪದರು ದೇವರನ್ನು ಅಪ್ಪ ತಂದೆ ಎಂತಲೂ ಕರೆಯುತ್ತಾರೆ. ಗಮನಿಸಿ, ತಿರುಪತಿ ತಿಮ್ಮಪ್ಪ ಎಂಬಲ್ಲಿ ಅಪ್ಪ ಇದು ದೇವರು ಎಂಬ ಅರ್ಥ ಸೂಚಕವಾಗಿದೆ. ಬೀರವಳ್ಳಿ, ಬೇರೊಳ್ಳಿಗಳು ಬೀರ ದೇವರಿಗೆ ಸಂಬಂಧ ಪಟ್ಟ ಸ್ಥಳನಾಮಗಳಾಗಿವೆ.
ಬೀರರ ರೂಪವು ಹೀಗಿರುತ್ತದೆ ಹಾಗಿರುತ್ತದೆ ಎಂದು ಹೇಳಲಾಗುವದಿಲ್ಲ. ಯಾಕೆಂದರೆ ಬೀರರು ಮನುಷ್ಯ ರೂಪದಲ್ಲಿರಬಹುದು. ಕಲ್ಲು ಗುಂಡಾಗಿರಬಹುದು. ಉದ್ದವಾಗಿರಬಹುದು ಗಿಡ್ಡವಾಗಿರಬಹುದು
ಮಾಹಿತಿ: Folk Knowledge






Leave a Reply