ವಿಶಿಷ್ಟ ದೇಗುಲ ಶ್ರೀ ಬೋಬ್ರುದೇವ ಹಾಗೂ ಅದರ ಪರಿವಾರ ದೇವಾಲಯ, ವನ್ನಳ್ಳಿ, ಕುಮಟಾ (ಉ.ಕ)

Posted by

·

🕉🕉🕉🕉🕉🕉🕉🕉🕉🕉
*”ಶ್ರೀ ಗಣೇಶಾಯ ನಮಃ*”
*”ಶ್ರೀ ಗೋಳಿ ಬೀರಪ್ಪ ಪ್ರಸನ್ನ*”
*”ಶ್ರೀ ಬೋಬ್ರುದೇವ ಹಾಗೂ ಅದರ ಪರಿವಾರ ದೇವಾಲಯ*” *”ವನ್ನಳ್ಳಿ*”, *ಕುಮಟಾ* *(ಉ.ಕ)*

*”ಕನ್ನಡ ನಾಡಿನ ಸುಂದರ ಕಡಲ ತೀರದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ನಾಡ ಗ್ರಾಮ ವನ್ನಳ್ಳಿ ಯ ಗ್ರಾಮಾಧೀಶನಾಗಿ ರಾರಾಜಿಸುತ್ತಿರುವ ಶ್ರೀ ಬೋಬ್ರುದೇವ ಹಾಗೂ ಅದರ ಪರಿವಾರು ದೇವರುಗಳಾದ ಶ್ರೀ ಗೋಳಿ ಬೀರಪ್ಪ, ಶ್ರೀ ಹೋನ್ನಪ್ಪ, ಶ್ರೀ ಕಲಶಯಾನೆ, ಬಂಡಾರ ಗದ್ದುಗೆ, ದೇವಾಲಯಗಳು ಪುರಾತನ ಪಾರಂಪರಿಕವಾದ ಪವಿತ್ರವಾದ ತಾಣಗಳಾಗಿವೆ.*”

*” ಅಭೇದ್ಯವಾದ ತ್ರಿಪುರಗಳು ಲೋಕ ಕಂಟಕವಾದಾಗ ಪರಮೇಶ್ವರನು ಭೂಮಿಯನ್ನೆ ರಥವನ್ನಾಗಿಸಿ ನಾಲ್ಕು ವೇದಗಳನ್ನು ಹಯನವನ್ನಾಗಿಸಿ ಆ ರಥಕ್ಕೆ ಹೂಡಿ ಬ್ರಹ್ಮನನ್ನೇ ಸಾರಥಿಯನ್ನಾಗಿಸಿ, ಮಂದಾರ ಪವ೯ತವನ್ನು ಬಗ್ಗಿಸಿ ಬಿಲ್ಲಾಗಿಸಿ ಆದಿಶೇಷನನ್ನೆ ಹದೆಯಾಗಿ ಬಿಗಿದು ಸಪ್ತ ಸಮುದ್ರವನ್ನು ಬೆನ್ನಲ್ಲಿಯೇ ಬತ್ತಳಿಕೆಯನ್ನಾಗಿಸಿ ಮಹಾವಿಷ್ಣುವನ್ನೇ ಶರವನ್ನಾಗಿಸಿ ಪುಷ್ಯ ನಕ್ಷತ್ರ ಯೋಗದಲ್ಲಿ ಅಭೇದ್ಯವಾದ ತ್ರೀಪುರಗಳು ಒಂದೆಡೆ ಸಂಧಿಸಿದ ಸಂಧಿಯನ್ನು ಶೋಧಿಸಿ ಒಂದೇ ಶರ ಸಂದಾನದಿಂದ ಸುಟ್ಟು ಭಸ್ಮ ಮಾಡಿದ ತ್ರೀಪುರ ಸಂಹಾರಿಗಳಾದ ತ್ರೀಮೂತಿ೯ಗಳು ಸಮುದ್ರ ಸ್ನಾನ ಮಾಡಿ ದಣಿವಾರಿಸಿಕೊಳ್ಳಲು ನೆಲೆನಿಂತ ಪುರಾಣ ಪ್ರಸಿದ್ಧ ನೆಲೆವಿದು. ಇದಕ್ಕೆ ಪ್ರತೀತಿಯಾಗಿ ಬೋಬ್ರು ದೇವಾಲಯದಲ್ಲಿ ಒಂದೇ ಪೀಠದಲ್ಲಿ ಹರಿಹರ ಬ್ರಹ್ಮಾದಿಗಳು ಶ್ರೀ ಹೀರೆಬೀರ, ಶ್ರೀ ಬೋಬ್ರುದೇವ , ಶ್ರೀ ಬ್ರಹ್ಮ ರೆಂಬ ರೂಢಿನಾಮಾಂಕಿತರಾಗಿ ಏಕಕಾಲದಲ್ಲಿ ಪೂಜಿಸಲ್ಪಡುತ್ತಿರುವ ತ್ರೀಲೋಕ ದೇವಾನು ದೇವತೆಗಳಾಗಿದ್ದಾರೆ.*”

*”ಇದರ ಪರಿವಾರ ದೇವರುಗಳಾಗಿ ಹರಿಹರ ಸುತನಾದ ಶ್ರೀ ಸಾಸ್ತಾರ ಅಥಾ೯ತ ಅಯ್ಯಪ್ಪ ಸ್ವಾಮಿಯು ಶ್ರೀ ಗೋಳಿ ಬೀರಪ್ಪನಾಗಿ, ವೀರಭದ್ರರು ಶ್ರೀ ಹೋನ್ನಪ್ಪನಾಗಿ, ಶ್ರೀ ಜಗನ್ಮಾತೆ ಪಾವ೯ತಿಯು ಅಮ್ಮನವರಾಗಿ ಭಂಡಾರ ಗದ್ದುಗೆಯಲ್ಲಿ ಪೂಜಿಸಲ್ಪಡುವರು.*”

*”ಜಾತಿ, ಮತ, ಪಂಥ ಬೇದವಿಲ್ಲದೆ ಎಲ್ಲ ಜಾತಿಯ ಎಲ್ಲಾ ಧಮ೯ದ ಭಕ್ತಾದಿಗಳು ಶ್ರೀ ದೇವರಲ್ಲಿ ನಡೆದುಕೋಳುತ್ತಾರೆ. ಈ ಎಲ್ಲಾ ದೇವರುಗಳನ್ನು ಈ ಗ್ರಾಮದವರಲ್ಲದೆ ಪರಗ್ರಾಮಗಳಿಂದ ಸುತ್ತಮುತ್ತಲಿನ ದೂರದ ಉರುಗಳಿಂದ ಭಕ್ತಾದಿಗಳು ಬಂದು ಸೇವೆ ಸಲ್ಲಿಸುತ್ತಾರೆ. ಈ ಸ್ಥಳವಂತೂ ಮೀನುಗಾರರಿಗೆ, ಸಂತಾನಪೇಕ್ಷಿಗಳಿಗೆ ಸಿದ್ದಿ ಸ್ಥಳವಾಗಿರುತ್ತದೆ. ಸಮುದ್ರದಲ್ಲಿ ಜಾಲಾಡಿ ಮೀನುಗಾರಿಕೆ ನಡೆಸುವ ಭಕ್ತಾದಿಗಳು, ಸಮುದ್ರದ ಮೇಲೆ ಬರುವ ಅನಿಷ್ಟ ಅನಾಹುತದ ಸಮಯದಲ್ಲಿ ಶ್ರೀ ದೇವರ ನಾಮಸ್ಮರಣೆ ಮಾತ್ರದಿಂದಲೇ ಅನಿಷ್ಟ ಸಂಕಷ್ಟಗಳಿಂದ ಪವಾಡಸದ್ರಶವಾಗಿ ಪಾರಾಗಿದ್ದು ಇದೆ.*”

*”ಇಲ್ಲಿ ವಷ೯ಂಪ್ರತಿ ಹೊಸ್ತು, ಸಂಕ್ರಾತಿ, ಬಂಡಿಹಬ್ಬ, ನವರಾತ್ರಿ ಉತ್ಸವಗಳು ಬಹು ವಿಜ್ರಂಬಣೆಯಲ್ಲಿ ನಡೆಯುತ್ತದೆ. ಹೊಸ್ತು ಒಂದು ದಿನ, ಸಂಕ್ರಾಂತಿ ಮೂರು ದಿನ, ಬಂಡಿಹಬ್ಬ ಎಳು ದಿನ ನಡೆಯುವ ಉತ್ಸವವಾಗಿದ್ದು ಆ ಸಮಯದಲ್ಲಿ ಕಲಶ ಕನ್ನಡಿಯನ್ನು ಹೊತ್ತ ಅಚ೯ಕರ ಮೇಲೆ ದೇವತೆಗಳು ಅವಿಭ೯ವಿಸಿ ಭಕ್ತರ ಕಷ್ಟ-ಸುಖಗಳಿಗೇ ಸ್ಪಂದಿಸಿ ಸಾಂತ್ವಾನ ನೀಡುತ್ತಾರೆ. ಈ ರೀತಿ ಉಪಕ್ರತರಾದ ಭಕ್ತಾದಿಗಳು ಈ ಉತ್ಸವದ ಸಮಯದಲ್ಲಿ ಸೇವೆ ಸಲ್ಲಿಸಿ ಕ್ರತಾಥ೯ರಾಗುತ್ತಾರೆ.*”

*ವನ್ನಳ್ಳಿ ನಾಡ ಗ್ರಾಮದ ದೇವರುಗಳಲ್ಲಿ ೧೧ ಗಂಡು, ೧ ಹೆಣ್ಣು ದೇವಾನು ದೇವತೆಗಳು ಪೂಜಿಸಲ್ಪಡುತ್ತದೆ.*
*೧.ಅ – ಶ್ರೀ ಬೋಬ್ರುದೇವ*
*ಬ – ಶ್ರೀ ಹೀರೆ ಬೀರ*
*ಕ – ಶ್ರೀ ಬ್ರಹ್ಮ ದೇವ*
*೨. ಶ್ರೀ ಹೋನ್ನಪ್ಪ ದೇವ*
*೩. ಶ್ರೀ ಗೋಳಿ ಬೀರಪ್ಪ*
*೪. ಶ್ರೀ ಕೋಣ ಕೇರಿ ಬೀರ*
*೫. ಶ್ರೀ ಮುಂಗಾರು ಹುಲಿಯಪ್ಪ*
*೬. ಶ್ರೀ ಗರಡಿ ಜಟಕ*
*೭. ಶ್ರೀ ದೇವಸು೯ ಜಟಕ*
*೮. ಶ್ರೀ ತೊಂಡಿಕೇರಿ ಜಟಕ*
*೯. ಶ್ರೀ ಗುಮಟೆ ಜಟಕ*
*೧೦. ಶ್ರೀ ಕಾರಿಮಾರನ ಜಟಕ*
*೧೧. ಶ್ರೀ ತಳವಾರ ಹಾಗೂ*
*೧೨. ತಾಯಿ ಮಹಾಸತಿ*
🕉🕉🕉🕉🕉🕉🕉🕉🕉🕉


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading