
ನೀರು ಹರಿಯಾಲೆ ಬೇಕು ಮರವು ಚಿಗುರಾಲೆ ಬೇಕು
ದಾರಿಗೊಂದು ನೆರಳಿರಬೇಕೇ ಬೇಕಣ್ಣ
ನೀರು ಕುಡಿಯಲು ಬೇಕು ಗಾಳಿ ಪರಾಣ್ಕೆ ಬೇಕು
ಬೆಂಕಿ ಉರಚೂಕೆ ಬೇಕೇ ಬೇಕಣ್ಣ
ಬೂಮಿ ಆದರ್ಕೆ ಬೇಕು ಮನೆಯು ಉಳಿಯಲು ಬೇಕು
ಅನ್ನ ಉಣ್ಣಲು ಬೇಕೇ ಬೇಕಣ್ಣ
ಹೆಳ್ಳಿಯೊಳಗೆ ಸಾಲೀಬೇಕು ಸಾಲಿಗೊಬ್ಬ ಮಾಸ್ತರ ಬೇಕು
ಸಾಲೆ ತುಂಬ ಮಕ್ಕಳು ಬೇಕೇ ಬೇಕಣ್ಣ
ದೊಡ್ಡಾಲಿಯ ಮನಿಯೆಬೇಕು ಗಂಡ ಹಿಂಡರು ಬೇಕು
ಮೊಕ್ದಮುಂದೆ ಮಕ್ಕಳು ಬೇಕೇ ಬೇಕಣ್ಣ
ಅತ್ತೆ ಉಳಿಯಾಲೆಬೇಕು ಸೊಸೆ ಇರಲೇ ಬೇಕು
ಅತ್ತೆ ಸೊಸೆಗು ಜಗಳಾವು ಬೇಕೇ ಬೇಕಣ್ಣ
ವಿ. ಗ. ನಾಯಕ… ಸಂಪಾದಕರು, ಗುಮಟೆಯ ಪದಗಳು, ಪದ್ಯ ಸಾಹಿತ್ಯ ಪ್ರಕಾರ -7, ಸಮಗ್ರ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ-7, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, 2006. ಪುಟ-156
ಮಾಹಿತಿ ಸಂಗ್ರಹಣೆ: ಜಗದೀಶ ಗೌಡ, ಧಾರವಾಡ (ಅಂಕೋಲಾ)

Leave a Reply to Sujal naikCancel reply