
ಹಾಲಕ್ಕಿ ಜನರು ಕಲ್ತಿದ್ ಕಡಿಮೆ
ಬುದ್ದಿಲಿ ದೊಡ್ಡವರೋ
ಕೊಟ್ಟ ಮಾತನು ತಪ್ಪದೆ ಪಾಲಿಸೊ
ಗೋವಿನ ಮನದವರೋ
ಕುಚ್ಲಕ್ಕಿ ಅನ್ನ, ರಾಗಿ ಅಂಬಲಿ
ಗೌಡರ ಮೃಷ್ಟಾನ್ನ
ಮೀನಪಳದಿ ಅನ್ನ, ಒಣಮೀನ ಚಟ್ನಿ
ಇವರಿಗೆ ಬಲುಚೆನ್ನ
ಕರಿಮಣಿ ಸರ, ಪಟ್ಟೆ ಸೀರೆ
ಹೆಣ್ಣಿಗೆ ಶೃಂಗಾರ
ಮೂಲೆ ಕಚ್ಚೆ,ತಲೆಗೊಂದ ಪಂಚೆ
ಗಂಡಿಗೆ ಬಂಗಾರ
ಸೋಮಾ,ಮಂಗು,ಬುದ್ದು,ಬೊಮ್ಮ
ವಾರದೇಸರಲಿ ಮೆರೆದವರೋ
ಹಬ್ಬದ ದಿನದಿ ನೆಂಟರ ಸೇರಿ
ಒಟ್ಟಿಗೆ ನಲಿಯುವರೋ
ಗುಮಟೆ ಪಾಂಗು,ಸುಗ್ಗಿ ಕುಣಿತದಿ
ಸಗ್ಗವ ಕಂಡವರೋ
ತಮ್ಮದೇ ಹಾಡಿಗೆ,ರಾಗವ ಕಟ್ಟಿ
ರಾಷ್ಟ್ರದಿ ನಲಿದವರೋ
ಹಾಲಕ್ಕಿ ಹಾಡು, ವೇಷಭೂಷಣ
ಎಲ್ಲರೂ ಮೆಚ್ಚುವರೋ
ಹಿರಿಯರು ತುಳಿದ ದಾರೀಲಿ ನಡೆಯೇ
ನಮ್ಮನು ಹರಸುವರೋ
ಸಾತು ಗೌಡ,ಬಡಗೇರಿ ಅಂಕೋಲಾ

Leave a Reply