Category: ಸಾಧಕರು

  • ನಮ್ಮೂರ ಹುಡುಗಿ ರಾಧಿಕಾ ಪಂಡಿತ್, ಶಿರಾಲಿ

    ರಾಧಿಕಾ ಪಂಡಿತ್ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಟಿ. ಕನ್ನಡ ಸಿನಿಮಾದಲ್ಲಿ ಅವರು ಪ್ರಮುಖ ನಟಿಯಾಗಿದ್ದಾರೆ. ನಂದಗೋಕುಲ ಮತ್ತು ಸುಮಂಗಲಿ ಮುಂತಾದ ಟೆಲಿವಿಷನ್ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದ ಪಂಡಿತ್ ಮೊಗ್ಗಿನ ಮನಸು (೨೦೦೮) ಚಿತ್ರದಲ್ಲಿ ಅಭಿನಯಿಸಿದರು, ಇದಕ್ಕಾಗಿ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ದಕ್ಷಿಣ ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತು. ಲವ್ ಗುರು (೨೦೦೯) ಮತ್ತು ಕೃಷ್ಣನ್ ಲವ್ ಸ್ಟೋರಿ (೨೦೧೦) ಚಿತ್ರಗಳಲ್ಲಿ ಅಭಿನಯಕ್ಕಾಗಿ ಅವರು ಮತ್ತೆ ಎರಡನೆಯ ಪ್ರಶಸ್ತಿಯನ್ನು…

  • ಟೀಂ ಇಂಡಿಯಾ ವಿಜಯ ಯಾತ್ರೆಯ ಹಿಂದಿನ ಶಕ್ತಿ ಯಾರು ಗೊತ್ತಾ? ಕುಮಟಾದ ಹುಡುಗ ರಾಘವೇಂದ್ರ ದೀವಗಿ.

    ಡಿ ಎಮ್ ರಾಘವೇಂದ್ರ ಉರುಫ್ ರಾಘವೇಂದ್ರ ದೀವಗಿ (ರಾಘು ಅಣ್ಣ) ಅಬ್ಬಬ್ಬಾ ಎಂದರೆ ಐದುವರೆ ಅಡಿ ಎತ್ತರದ, ತೆಳ್ಳಗಿನ ಸಾಮಾನ್ಯ ದೇಹ. ಸದಾ ಹಣೆಯ ಮೇಲೊಂದು ದೇವರ ಕುಂಕುಮದ ಬೊಟ್ಟು. ಸಭ್ಯ, ಸೌಜನ್ಯಶೀಲ, ವಿನೀತ, ವಿನಮ್ರ. ನೋಡಲು ಸೀದಾ ಸಾದಾ ನಮ್ಮ ಪಕ್ಕದ ಮನೆಯ ಹುಡುಗ. ಆದರೆ ಸಾಧನೆ ಅಗಾಧ. ಅದಕ್ಕೆ ಬೇಕಾಗಿ ಪಟ್ಟ ಶ್ರಮ, ಸವೆಸಿದ ಹಾದಿ ಅಪೂರ್ವ. ಮೂರು ನಾಲ್ಕು ತಿಂಗಳ ಹಿಂದೆ ಯು. ಕೆ. ಯಲ್ಲಿರುವ ಮಿತ್ರ ಗಣಪತಿ ಭಟ್ ಜತೆ ಮಾತಾಡುವಾಗಲೇ…

  • ಶಂಕರ್ ನಾಗ್ ಜೀವನಚರಿತ್ರೆ

    ಶಂಕರನಾಗ್ ಕನ್ನಡ ಚಿತ್ರರಂಗದ ದಂತಕಥೆ. ಕನ್ನಡ ಚಿತ್ರ ಪ್ರೇಮಿಗಳ ಮನಃಪಟಲದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿರುವ ಶಂಕರ ನಾಗ್ ಕನ್ನಡಿಗರ ತಾದ್ಯಾತ್ಮದಲ್ಲಿ ಬೆರೆತು ಹೋಗಿದ್ದಾರೆ. 35 ವರ್ಷದ ಕಿರಿದಾದ ಬದುಕಿನ ಪಯಣದಲ್ಲಿ ನೂರಾರು ವರುಷ ನೆನೆಯುವಂತಹ ಕಾರ್ಯ ಸಾಧಿಸಿದ ಛಲಗಾರ. ನಾಯಕನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗವನ್ನು ಬೆಳಗಿದ್ದಾರೆ. 80 ರ ದಶಕದಲ್ಲಿ ಮಿಂಚಿನ ಓಟ ಆರಂಭಿಸಿದ ನಾಗ್ ಸಹೋದರರ ಓಟವನ್ನು ವಿಧಿ ಬೇಗನೆ ಕೊನೆಗೊಳಿಸಿತು. ಬಾಲ್ಯ: ಶಂಕರ ನಾಗರಕಟ್ಟೆ 9 ನವೆಂಬರ್ 1954 ರಲ್ಲಿ ಉತ್ತರ ಕನ್ನಡ ಜಿಲ್ಲೆಯ…

  • ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತೆ ತುಲಸಿ ‌ಗೌಡ

    ವೃಕ್ಷಮಾತೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ತುಳಸಿ ಗೌಡ ಅವರದು ವಿಶಿಷ್ಟವಾದ ವ್ಯಕ್ತಿತ್ವ. ಪರಿಸರದ ಬಗ್ಗೆ ಅಪಾರ ಒಲವು ಹೊಂದಿರುವ ಇವರು ಒಂದಲ್ಲಾ, ಎರಡಲ್ಲಾ ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಎಪ್ಪತ್ತರ ವಯಸ್ಸಿನ ತುಳಸಿಯವರು ಇಂದಿಗೂ ಗಿಡ ಮರಗಳ ಪೋಷಣೆಯಲ್ಲಿ ಸಕ್ರಿಯರಾಗಿದ್ದಾರೆ. ಇವರ ಪರಿಸರದ ರಕ್ಷಣೆ, ಮರಗಿಡಗಳ ಪೋಷಣೆ, ಕಾಳಜಿ ಇವುಗಳನ್ನು ಗಮನಿಸಿದ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಸಸ್ಯ ಹಾಗು ಅರಣ್ಯದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವ ಇವರನ್ನು ನಡೆದಾಡುವ ಅರಣ್ಯ ವಿಶ್ವಕೋಶ (Encyclopedia…

  • ಉತ್ತರ ಕನ್ನಡ ಜಿಲ್ಲೆಯ ನಟೇಶ್ ಹೆಗ್ಡೆ ಅವರಿಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ

    ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ (ಸಿಸಿ೯ಯ) ನಟೇಶ್ ಹೆಗಡೆ ಅವರ “ಪೆಡ್ರೊ” ಚಲನಚಿತ್ರದ ನಿರ್ದೇಶನಕ್ಕಾಗಿ ಖ್ಯಾತ ಪಿಂಗ್ಯಾವ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ನಟೇಶ್ ಹೆಗಡೆ, ಕನ್ನಡ ದಿನಪತ್ರಿಕೆ ಪ್ರಜಾವಾಣಿಯಲ್ಲಿ ಸಂಕ್ಷಿಪ್ತವಾಗಿ ಪತ್ರಕರ್ತರಾಗಿ ಕೆಲಸ ಮಾಡಿದರು. ಅವರ “ಕುರ್ಲಿ” ಕಿರುಚಿತ್ರ ರಾಷ್ಟ್ರ ಮತ್ತು ಹಲವಾರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿತ್ತು. ನಟೇಶ್ ಹೆಗ್ಡೆಯವರ ” ಪೆಡ್ರೊ” ಕನ್ನಡ ಚಲನಚಿತ್ರವಾಗಿದ್ದು, ಬೂಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಬಿ ಎಫ್…

  • ಹನುಮಂತ ಗೌಡ, ಬೆಳಂಬಾರ – ದೇಶ ವಿದೇಶಗಳಿಗೆ ಆಯುರ್ವೇದದ ಶಕ್ತಿಯನ್ನು ತಿಳಿಸಿದ ನಾಟಿ ವೈದ್ಯ

    *ಚೊಚ್ಚಲ “ದಿನಕರಶ್ರೀ” ಪ್ರಶಸ್ತಿ ವಿಜೇತ ನಾಟಿ ವೈದ್ಯ ಹನುಮಂತ ಬೊಮ್ಮು ಗೌಡ* ಬೆಳಂಬಾರ ಎಂದೊಡನೆ ತಕ್ಷಣ ನೆನಪಾಗುವುದು ಇಲ್ಲಿಯ ಪಾಶ್ವವಾಯುವಿಗೆ ನೀಡುವ ಔಷಧ. ಸುಮಾರು ೨೦೦ ವರ್ಷಗಳ ಇತಿಹಾಸ ಹೊಂದಿರುವ ಈ ನಾಟಿ ಔಷಧದ ಖ್ಯಾತಿಯಿಂದಲೇ ವಿಶ್ವದ ಭೂಪಟದಲ್ಲಿ ಬೆಳಂಬಾರ ಎಂಬ ಗ್ರಾಮ ಗುರುತಿಸಿಕೊಂಡಿದೆ. ದೇಶವಿದೇಶಗಳಿಂದಲೂ ಅದೇಷ್ಟೂ ಜನ ಪಾಶ್ವವಾಯುವಿಗೆ ಒಳಗಾದವರು ಇಲ್ಲಿಗೆ ಬಂದು ಗುಣಮುಖರಾಗಿದ್ದಾರೆ. ಪ್ರಸ್ತುತ ಈ ನಾಟಿ ವೈದ್ಯ ಪದ್ಧತಿಯ ನಾಲ್ಕನೇ ತಲೆಮಾರಿನವರಾದ ವೈದ್ಯ ಶ್ರೀ ಹನುಮಂತ ಬೊಮ್ಮು ಗೌಡ ಅವರು ಮುಂದುವರೆಸಿದ್ದಾರೆ. ವೈದ್ಯ…

  • ಅನಂತ್ ನಾಗ್ – ಉತ್ತರ ಕನ್ನಡದ ಹೆಮ್ಮೆಯ ಪುತ್ರ, ಬಾಲ್ಯದ ಶಿಕ್ಷಣ, ಜೀವನ

    ಹೆಮ್ಮಯ ಉತ್ತರಕನ್ನಡಿಗಅನಂತನಾಗ್ (ಅನಂತ್ ನಾಗರಕಟ್ಟೆ) – ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲೊಬ್ಬರು. ತಮ್ಮ ಸ್ಫುರದ್ರೂಪ ಮತ್ತು ಸಹಜ ನಟನೆಯಿಂದ ಭಾರತದಾದ್ಯಂತ ಅಪರೂಪದ ನಟ ಎಂದು ಹೆಸರಾದವರು. ಇವರು ಕರ್ನಾಟಕ ರಾಜ್ಯ ಸರಕಾರದಲ್ಲಿ ಹಿಂದೆ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅನಂತ್ ನಾಗರಕಟ್ಟೆಸೆಪ್ಟೆಂಬರ್-೦೪-೧೯೪೮ಶಿರಾಲಿ, ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ) ನಟ/ರಾಜಕಾರಣಿ ಬಾಳ ಸಂಗಾತಿ:ಗಾಯತ್ರಿ (ಮ. ೧೯೮೭)ಮಕ್ಕಳು:ಅದಿತಿ ಅನಂತ್ ನಾಗ್ಅನಂತನಾಗ್ ಅವರು ಜನಿಸಿದ್ದು ಸೆಪ್ಟೆಂಬರ್ ೪, ೧೯೪೮ರಲ್ಲಿ. ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಪ್ರಾರಂಭಿಕ ಓದು ದಕ್ಷಿಣ ಕನ್ನಡದ…

  • ಜನ ಮರೆತರೂ ‘ಮನ’ ಮರೆಯದ ಹೆಗಡೆ – ರಾಮಕೃಷ್ಣ ಹೆಗಡೆ

    ಹೆಗಡೆ ಎಂದೊಡೆ ನೆನಪಿಗೆ ಬರುವುದೊಂದೇ ಮುಖ.. ರಾಮಕೃಷ್ಣ ಹೆಗಡೆ.. ಉತ್ತರ ಕನ್ನಡ ಜಿಲ್ಲೆಯ ನಿಜವಾದ ಹೆಮ್ಮೆ.. ಅಗಸ್ಟ್ ೨೯ ರಂದು ಹುಟ್ಟಿದ ಈ ಮೇಧಾವಿಯ ಕುರಿತು ಬರೆಯುತ್ತ ಹೊರಟರೆ ಅದು ನಕ್ಷತ್ರಗಳ ಎಣಿಕೆಯಂತೆ.. ಪಂಚಾಯತ್ ರಾಜ್.. ವಿಧವಾ ವೇತನ.. ವೃದ್ಧಾಪ್ಯ ವೇತನ.. ಲೋಕಾಯುಕ್ತ.. ಬಸ್ ಪಾಸ್.. ಹೀಗೆ ಸರ್ವಕಾಲಿಕ ಮೌಲ್ಯವುಳ್ಳ ಅದೆಷ್ಟೋ ಯೋಜನೆಗಳು… ಯಾವುದೇ ಪಂಥಕ್ಕೆ ಒಳಪಡದೆ ವಸ್ತುನಿಷ್ಠ ಪರಿಕಲ್ಪನೆ ಇವರ ಬದ್ಧತೆ..‌ ಹೆಗಡೆಯವರೆಂದರೆ ಮೌಲ್ಯ.. ಹೆಗಡೆಯವರೆಂದರೆ ಸಿದ್ಧಾಂತ.. ಹೆಗಡೆಯವರೆಂದರೆ ಆದರ್ಶ… ಹೆಗಡೆಯವರೆಂದರೆ ಆಕರ್ಷಣೆ.. ಹೆಗಡೆಯವರೆಂದರೆ ಸೃಜನಶೀಲತೆ..…

  • ಪದ್ಮಶ್ರೀ ಬಂದರೂ ಬದಲಾಗದ ಸುಕ್ರಜ್ಜಿ.

    ಕರಾವಳಿಯ ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದಲ್ಲಿ ಬೆಳಗಿನ ಜಾವ ಐದು ಗಂಟೆಗೆ ಎದ್ದು, ಮನೆ, ಅದರ ಅಂಗಳದ ಕಸ ಗುಡಿಸಿ, ಕಟ್ಟಿಗೆಯನ್ನು ಒಲೆಯ ಗೂಡಿಗೆ ಹಾಕಿ ಬೆಂಕಿ ಮಾಡಿ, ಹಾಡು ಗುನುಗುಡುತ್ತಾ ನೀರು ಕಾಯಿಸುವ ಮೂಲಕ ದಿನನಿತ್ಯದ ಬದುಕು ಆರಂಭಿಸುವ ಸುಕ್ರಿ ಬೊಮ್ಮ ಗೌಡ ಅವರು ಹಳ್ಳಿಯ ಗ್ರಾಮೀಣ ಬದುಕಿನ ಪ್ರತೀಕದಂತೆಯೇ ಜೀವಿಸುತ್ತಿದ್ದಾರೆ. ಹಿಂದಿನ ರಾತ್ರಿ ನೆನೆಸಿಟ್ಟ ರಾಗಿಯನ್ನು ಅರೆದು ಅಂಬಲಿಯನ್ನು ಕುದಿಸುವುದು ಸಹ ಹಳೆಯ ಕಾಲದ ಉರುವಲು ಒಲೆಯ ಮೇಲೆಯೇ. ಚಟ್ನಿ ಅರೆಯಲು ಬಳಸುವುದು ಸಹ…

You cannot copy content of this page