Category: ಸಾಧಕರು
-

ಉತ್ತರ ಕನ್ನಡ ಬುಡಕಟ್ಟು ಜನರ ಸ್ಫೂರ್ತಿ ಶಾಂತಾರಾಮ್ ಸಿದ್ಧಿ, ಶಾಸಕರಾದ ಮಾರ್ಗ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ತಾಲ್ಲೂಕಿನ ಶಾಂತಾರಾಮ್ ಬುಡ್ನ ಸಿದ್ಧಿಯವರು ಸಿದ್ಧಿ ಪಂಗಡದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಮೊದಲ ಆಫ್ರಿಕನ್ ಮೂಲದ ಭಾರತೀಯ ಶಾಸಕರಾಗಿದ್ದಾರೆ. ಶಾಂತಾರಾಮ್ ಅವರನ್ನು 22 ಜುಲೈ 2020ರಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ನಾಮನಿರ್ದೇಶನ ಮಾಡಿದರು. ಇದು ಉತ್ತರ ಕನ್ನಡ ಬುಡಕಟ್ಟು ಸಮುದಾಯಕ್ಕೆ ದೊರೆತ ಶ್ರೇಯಸ್ಸಾಗಿದೆ. ಸಿದ್ಧಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದ ಶ್ರೀಯುತ ಶಾಂತರಾಮ್ ಅವರು ಬಡ ಮತ್ತು ಸಾಮಾಜಿಕ ಹಿನ್ನೆಲೆಯುಳ್ಳ ಕುಟುಂಬದಲ್ಲಿ…
-

ಉತ್ತರ ಕನ್ನಡದ ಶೈಕ್ಷಣಿಕ ಮಹಾಗುರು ಡಾ. ದಿನಕರ ದೇಸಾಯಿ
ದಿನಕರನ ದಾರಿಯ ಬೆಳಕನರಸುತ್ತಾ!‘ನಾನು ಬರೆಯುತ್ತೇನೆ. ನನ್ನ ಬರಹಗಳ ಮೂಲಕ ಸಮಾಜದಲ್ಲಿ ಬದಲಾವಣೆಯ ಅಲೆ ಎಬ್ಬಿಸುತ್ತೇನೆ’ ಎನ್ನುವ ಇಂದಿನ ಬಹುತೇಕ ಸಾಹಿತಿಗಳು ಎತ್ತುವ ಧ್ವನಿ ಪ್ರಶಸ್ತಿ ಗಳಿಸಲು ಸಲ್ಲಿಸುವ ಅರ್ಜಿಯಷ್ಟೇ ಆಗಿರುವುದು ವಿಪರ್ಯಾಸ. ದೇಶ ಸ್ವಚ್ಛ ಮಾಡಲು ಹೋಗುವ ಇಂಥ ಹಲವರು ತಮ್ಮ ಮನೆಯಲ್ಲಿ, ಮನಸ್ಸಲ್ಲಿ ಇರುವ ಕೊಳಕನ್ನು ಮೊದಲು ಸ್ವಚ್ಛಗೊಳಿಸಬೇಕೆನ್ನುವುದನ್ನು ಅರಿಯದಿರುವುದು ಆಶ್ಚರ್ಯದ ಸಂಗತಿ. ಸಮಾಜವನ್ನು ತಿದ್ದುವ ಮೊದಲು ಸಾಹಿತಿ ತನ್ನೊಳಗೆ ತಾನು ಮಂಥನ ಮಾಡಿಕೊಂಡು ತನ್ನನ್ನು ತಾನು ತಿದ್ದಿಕೊಂಡು ಆ ಅನುಭವವನ್ನು ಬರಹವಾಗಿಸುವ ದಿಶೆಯಲ್ಲಿ ಪ್ರಯತ್ನಿಸಿದರೆ…
-
ಪ್ರತಿಷ್ಠಿತ ನಾಸಾ ಪ್ರಶಸ್ತಿ ವಿಜೇತ ಶಿರಸಿಯ ದಿನೇಶ್ ಹೆಗ್ಡೆ
ಉತ್ತರ ಕನ್ನಡದ ಹೆಮ್ಮೆಯ ಪುತ್ರನಾದ ದಿನೇಶ ವಸಂತ ಹೆಗಡೆ ಅವರು ‘ನಾಸಾ’ ಪ್ರಶಸ್ತಿಗೆ ಆಯ್ಕೆಯಾಗುವುದರ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರು ನಾಸಾದ (ನ್ಯಾಷನಲ್ ಏರೋನಾಟಿಕ್ಸ್ ಅ್ಯಂಡ್ ಸ್ಪೇಸ್ ಅಡಿನಿಸ್ಟೇಷನ್) ಭೂಮಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಅನುದಾನದಲ್ಲಿ “ಫ್ಯೂಚರ್ ಇನ್ವೆಸ್ಟಿಗೇಟರ್” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಿಮ್ಮ ಸಾಧನೆ ಉತ್ತರ ಕನ್ನಡ ಜಿಲ್ಲೆಯ ಯುವಕರಿಗೆ ಸ್ಪೂರ್ತಿದಾಯಕವಾಗಿದೆ. ದಿನೇಶ ವಸಂತ ಹೆಗಡೆ ಅವರು ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನ ಸಶಿಗುಳಿ ಗ್ರಾಮದಲ್ಲಿ ಜನಿಸಿದ್ದರು.…
