Category: ಪ್ರವಾಸಿ ತಾಣಗಳು
-

ನೈಸರ್ಗಿಕ ಕಲ್ಲಿನ ಸೇತುವೆ (ಕಲ್ಲು ಸಂಕ) – ಜಗತ್ತಿನಲ್ಲಿರುವ ನಾಲ್ಕೇ ನಾಲ್ಕು ಸೇತುವೆ!
ನೀವು ಭೂಮಿಯ ಮೇಲಿನ ವಿಚಿತ್ರವಾದ ನೈಸರ್ಗಿಕ ಸೇತುವೆಗಳನ್ನು ನೋಡಲು ಬಯಸಿದರೆ ನೀವು ಈ ಸ್ಥಳಕ್ಕೆ ಖಂಡಿತ ಭೇಟಿ ನೀಡಲೇಬೇಕು. ಇಲ್ಲಿ ನೀವು ಸಂಪೂರ್ಣವಾಗಿ ಒಂದೇ ಕಲ್ಲಿನಿಂದ ಮಾಡಿದ ಸೇತುವೆಯನ್ನು ಕಾಣಬಹುದು. ನೀವು ಭೂಮಿಯ ಮೇಲೆ ಕೇವಲ 4 ನೈಸರ್ಗಿಕ ಕಲ್ಲಿನ ಸೇತುವೆಗಳನ್ನು ಕಾಣಬಹುದು. ಅದರಲ್ಲಿ ಒಂದು ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿರುವುದು ನಮಗೆ ಸಂತಸದ ವಿಚಾರ. ಈ ನೈಸರ್ಗಿಕ ಕಲ್ಲಿನ ಸೇತುವೆಯು ಸಣ್ಣ ನೀರಿನ ಹರಿವಿನ ಮೇಲೆ ನೆಲೆಗೊಂಡಿದೆ. ಈ ಸೇತುವೆಯು ಒಂದು ದ್ವಿಚಕ್ರ ವಾಹನ ಹಾದುಹೋಗುವಷ್ಟು…
-

ಗಿಳಿಗುಂಡಿ ಗುಹೆ – ಮಂಜಗುಣಿ “ಶ್ರೀ ವೆಂಕಟರಮಣ ಸ್ವಾಮಿ”ಯ ಜನ್ಮಸ್ಥಳ
ಗಿಳಿಗುಂಡಿ ಶಿರಸಿಯಲ್ಲಿನ ಕಡಿಮೆ ಪ್ರಸಿದ್ಧಿ ಪಡೆದಿರುವ ಭಕ್ತಿ ಸ್ಥಳವಾಗಿದೆ. ಇದು ಮಂಜಗುಣಿ “ಶ್ರೀ ವೆಂಕಟರಮಣ ಸ್ವಾಮಿ”ಯ ಜನ್ಮಸ್ಥಳ. ಈ ಸ್ಥಳವು ತನ್ನ ನೈಸರ್ಗಿಕ ಸೌಂದರ್ಯ ಮತ್ತು ತಂಪಾದ ಪರಿಸರಕ್ಕೆ ಹೆಸರುವಾಸಿಯಾಗಿದೆ. ಈ ಗ್ರಾಮದಲ್ಲಿ ಒಂದು ಸಣ್ಣ ಮತ್ತು ಶುದ್ಧ ನದಿ ಹರಿಯುತ್ತದೆ. ಈ ಸಣ್ಣ ನದಿಯ ದಡದಲ್ಲಿ ಶ್ರೀ ವೆಂಕಟ್ರಮಣ ಸ್ವಾಮಿಯ ಮೂಲ ಸ್ಥಳವಿದೆ. ಈ ಸ್ಥಳವು ತನ್ನಲ್ಲಿರುವ ಒಂದು ವಿಶಿಷ್ಟ ಗುಹೆಗೆ ಹೆಸರುವಾಸಿಯಾಗಿದೆ. ಹೌದು ಗಿಳಿಗುಂಡಿಯ ಈ ನದಿಯ ದಡದಲ್ಲಿ ಒಂದು ಸುಂದರವಾದ ಗುಹೆ ಇದೆ,…
-

ಹುಸೂರ್ ಅಣೆಕಟ್ಟು ಮತ್ತು ನಿಪ್ಲಿ ಜಲಪಾತಗಳು
ಹುಸೂರು ಅಣೆಕಟ್ಟು: ಹುಸೂರು ಅಣೆಕಟ್ಟು ಇದು ಸಿದ್ದಾಪುರ ತಾಲೂಕಿನ ಸುಂದರ ಪ್ರವಾಸಿ ತಾಣವಾಗಿ ಮಾರ್ಪಾಟ್ಟಿದೆ ಮತ್ತು ಇದು ಸಿದ್ದಾಪುರದಿಂದ ಜೋಗಪಾತಕ್ಕೆ ಹೋಗುವ ಮಾರ್ಗದಲ್ಲಿ ಹಲಗೇರಿ ಗ್ರಾಮದ ಒಳಗೆ 1 ಕಿ.ಮೀ ದೂರದಲ್ಲಿದೆ. ನೀವು ಸಾಗರದಿಂದ ಜೋಗ್‌ಫಾಲ್ಸ್‌ಗೆ ಪ್ರಯಾಣಿಸುತ್ತಿದ್ದರೆ, ನೀವು ಆಡುಕಟ್ಟಾದಿಂದ ಹಲಗೇರಿಗೆ ಹೋಗುವ ರಸ್ತೆಯ ಮೂಲಕ ಹಾದುಹೊಗುವಿರಿ. ಈ ಅಣೆಕಟ್ಟನ್ನು ನಿರ್ಮಿಸುವ ಉದ್ದೇಶವು ಸುತ್ತಮುತ್ತಲಿನ ಹಳ್ಳಿಗಳ ಕೃಷಿ ಅಗತ್ಯಗಳನ್ನು ಪೂರೈಸುವುದಾಗಿದೆ. ಈ ಅಣೆಕಟ್ಟು 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡಿದೆ. ಇದು ಶಾಂತ ಮತ್ತು ಸುಂದರ ಸ್ಥಳವಾಗಿದ್ದು…
-

ದಾಂಡೇಲಿಯ ಕವಳ ಗುಹೆ – ವರ್ಷಕೊಮ್ಮೆ ಪ್ರವೇಶ!
ಇದು ದಾಂಡೇಲಿ ಅರಣ್ಯದಲ್ಲಿರುವ ಪ್ರಸಿದ್ಧ ಭಕ್ತಿ ಪ್ರವಾಸಿ ಸ್ಥಳವಾಗಿದೆ. ಈ ಗುಹೆಯು ಸಿದ್ದೇಶ್ವರ ದೇವರಿಗೆ ಸಮರ್ಪಿತವಾಗಿದೆ. ಈ ಗುಹೆಯು ಜೋಯಿಡಾ ತಾಲೂಕಿನ ದಾಂಡೇಲಿ ವನ್ಯಜೀವಿಧಾಮದ ದಟ್ಟ ಅರಣ್ಯದಲ್ಲಿದೆ. ಈ ದೇವಾಲಯಕ್ಕೆ ಸಂಬಂಧಿಸಿದ ವಿಚಿತ್ರವೆಂದರೆ, ಮಹಾ ಶಿವರಾತ್ರಿಯನ್ನು ಹೊರತುಪಡಿಸಿ ವರ್ಷಪೂರ್ತಿ ಮುಚ್ಚಿರುತ್ತದೆ. ಪ್ರತಿ ವರ್ಷ ಶಿವರಾತ್ರಿಯಂದು (ಒಂದು ದಿನ ಮಾತ್ರ) ಜಾತ್ರೆ ನಡೆಯುತ್ತದೆ. ಇದು ಹುಲಿ ಸಂರಕ್ಷಿತ ಅರಣ್ಯವಾಗಿದ್ದು ಈ ಅರಣ್ಯ ಪ್ರವೇಶಿಸಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಾದ ಕಾರಣ ಇತರ ದಿನಗಳಲ್ಲಿ ಯಾರೂ ಇಲ್ಲಿಗೆ ಬರುವಂತಿಲ್ಲ. ಮಹಾಶಿವರಾತ್ರಿಯಂದು…
-

ಶಿವಪುರ ಮಠ – ಪ್ರಕೃತಿಯ ಮಡಿಲಲ್ಲಿ ಒಂದು ಪುಟ್ಟ ಗ್ರಾಮ
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ 20 ಮನೆಗಳಿರುವ ಪುಟ್ಟ ಹಳ್ಳಿ ಶಿವಪುರ . ದಶಕದ ಹಿಂದೆ ಕೊಡಸಳ್ಳಿ ಜಲವಿದ್ಯುತ್ ಯೋಜನೆಗಾಗಿ ಕಾಳೀ ನದಿಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಕೊಡಸಳ್ಳಿಯನ್ನು ನೀರು ನುಂಗಿತು. ಶಿವಪುರವನ್ನು ಸಂಪರ್ಕಿಸುವ ಎಲ್ಲಾ ದಾರಿಗಳನ್ನು ಹಿನ್ನೀರು ಮುಳುಗಡೆ ಮಾಡಿತು. ಮೊದಲು ಹಿನ್ನೀರು ದಾಟಲು ಅಪಾಯಕಾರಿಯಾದ ದೇಸಿ ತೆಪ್ಪ ಉಪಯೋಗಿಸಿದ್ದರು.2015 ರಲ್ಲಿ ಇಲ್ಲಿ ತೂಗುಸೇತುವೆ ನಿರ್ಮಾಣವಾಯಿತು, ಈ ತೂಗುಸೇತುವೆ ಈಗ ಯಲ್ಲಾಪುರದ ಪ್ರಮುಖ ಆಕರ್ಷಣೆಯಾಗಿದೆ. ಉಳವಿ ಕಡೆಯಿಂದ ಶಿವಪುರಕ್ಕೆ 7 ಕಿ.ಮೀ ಗಳ ದಟ್ಟ ಕಾಡಿನ…
-

ಶರಾವತಿ ಕಾಂಡ್ಲಾವನ (ಮ್ಯಾಂಗ್ರೋವ್), ನಿಸರ್ಗದ ಸೌಂದರ್ಯ ಮತ್ತು ಪರಿಸರ ಸಮತೋಲನ
“ನಿಸರ್ಗದ ಸೃಷ್ಟಿಯ ಮುಂದೆ ಸರಿಸಮನಾಗಿ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ, ನಿಸರ್ಗಕ್ಕೆ ನಿಸರ್ಗವೇ ಸಾಟಿ”. ಪರಿಸರ ತನ್ನ ಸಮತೋಲನವನ್ನು ಕಾಯ್ದುಕೊಳ್ಳಲು ವಿಶಿಷ್ಠವಾದ ಕೊಡುಗೆಯನ್ನು ನೀಡಿದೆ. ಆ ವಿಶಿಷ್ಟವಾದ ಕೊಡುಗೆಗಳು ಮಾನವನಿಗೆ ವಿಶಿಷ್ಟವಾದ ಸ್ಥಳಗಳಾಗಿ ಗೋಚರಿಸುತ್ತದೆ. ಅಂತಹ ಒಂದು ತಾಣ ಪರಿಸರ ಸಮತೋಲನಕ್ಕೆ ಸಹಕಾರಿ ಹಾಗೂ ಪ್ರವಾಸೋದ್ಯಮಕ್ಕೆ ಪೂರಕವಾದ ಹೊನ್ನಾವರದ ಪ್ರೇಕ್ಷಣೀಯ ಸ್ಥಳ ಕಾಂಡ್ಲಾವನ. ಮ್ಯಾಂಗ್ರೋವ್ ಎಂದರೆ ನೀರಿನಲ್ಲಿ ಇರುವಂತ ಕಾಡು. ಕಡಲ ತೀರದ ಕಠಿಣ ಸ್ಥಿತಿಗಳಲ್ಲಿಯೂ ಬದುಕಬಲ್ಲ, ಲವಣದ ಅಂಶ ಹೆಚ್ಚಿದ್ದರೂ ಸಹಿಸಿಕೊಳ್ಳಬಲ್ಲ ಒತ್ತಟ್ಟಾಗಿ ದಟ್ಟವಾಗಿ ಬೆಳೆಯುವ ವಿಶೇಷವಾದ…
-

ನೇತ್ರಾಣಿ ದ್ವೀಪ | ಕರ್ನಾಟಕದ 7 ನೇ ಅದ್ಭುತ | ಸ್ಕೂಬಾ ಡೈವಿಂಗ್
ಪಶ್ಚಿಮ ಘಟ್ಟದ ಸಿರಿ,ಅರಬ್ಬಿ ಸಮುದ್ರವನ್ನು ಹಂಚಿಕೊಂಡಿರುವ ಕರ್ನಾಟಕದ ಕಾಶ್ಮೀರ ಖ್ಯಾತಿಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಸಮೀಪದ ನೇತ್ರಾಣಿ ದ್ವೀಪಕ್ಕೆ ಜಾಗತಿಕ ಹೆಗ್ಗುರುತುಗಳಾಗಿ ಪ್ರಪಂಚದ 7ಅದ್ಭುತಗಳು ಇರುವ ರೀತಿಯಲ್ಲೇ ಇದೀಗ ಕರುನಾಡಿನ ಹೆಗ್ಗುರುತುಗಳಾಗಿ ಕರ್ನಾಟಕದ 7 ಅದ್ಭುತಗಳು ಘೋಷಣೆಯಾಗಿದೆ. ಈ ಪಟ್ಟಿಯಲ್ಲಿ ರಾಜ್ಯದಲ್ಲೇ ಏಕೈಕ ಸ್ಕೂಬಾ ಡೈವಿಂಗ್ ತಾಣವಾಗಿರುವ ಪ್ರಸಿದ್ಧ ನೇತ್ರಾಣಿ ದ್ವೀಪವೂ ಸೇರ್ಪಡೆಗೊಂಡಿದೆ. ಮುರುಡೇಶ್ವರ ಹತ್ತಿರದ ನೇತ್ರಾಣಿ ದ್ವೀಪವು ಕರ್ನಾಟಕದ ಪ್ರಮುಖ ಸ್ಕೂಬಾ ಡೈವಿಂಗ್ ತಾಣವಾಗಿದೆ. ನೇತ್ರಾಣಿ ದ್ವೀಪವು ಮುರುಡೇಶ್ವರ ತೀರದಿಂದ ಸುಮಾರು…
-

ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್
ಮುರುಡೇಶ್ವರ ಹತ್ತಿರದ ನೇತ್ರಾಣಿ ದ್ವೀಪವು ಕರ್ನಾಟಕದ ಪ್ರಮುಖ ಸ್ಕೂಬಾ ಡೈವಿಂಗ್ ತಾಣವಾಗಿದೆ. ನೇತ್ರಾಣಿ ದ್ವೀಪವು ಮುರುಡೇಶ್ವರ ತೀರದಿಂದ ಸುಮಾರು 22 ಕಿ.ಮೀ ದೂರದಲ್ಲಿದೆ ಮತ್ತು ದೋಣಿಯಲ್ಲಿ ಒಂದು ಗಂಟೆ ತೆಗೆದುಕೊಳ್ಳುತ್ತದೆ. ಮುರುಡೇಶ್ವರದಲ್ಲಿ ಸ್ವಯಂ ಮುಳುಗುವವರಿಗೆ (ಪಡಿ ಮಾನ್ಯತೆ ಇದ್ದವರು) ಸಹಾಯ ಮಾಡುವ, ಹವ್ಯಾಸಿ ಸ್ಕೂಬಾ ಡೈವ್ ಮತ್ತು ಸ್ಕೂಬಾ ಡೈವಿಂಗ್ ತರಬೇತಿ ಶಿಬಿರಗಳನ್ನು ನಡೆಸುವ ಖಾಸಗಿ ಕಂಪೆನಿಗಳಿವೆ. ಮೀನಿನಂತೆ ಈಜಲು ಸಾಧ್ಯವಾಗುವುದು, ಅವುಗಳನ್ನು ನೀರೊಳಗಿನ ತಮ್ಮ ನೈಜ ಪರಿಸರದಲ್ಲಿ ನೋಡುವುದು ಮತ್ತು ವರ್ಣರಂಜಿತ ಹವಳಗಳನ್ನು ನೋಡುವುದು ಮರೆಯಲಾಗದ …
-

ಪ್ರವಾಸೋದ್ಯಮ ಇಲಾಖೆಯಿಂದ ಉತ್ತರಕನ್ನಡ ಬಗ್ಗೆ ಒಂದಿಷ್ಟು ಮಾಹಿತಿ
ಕರಾವಳಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕದ ಕೆಲವು ಅತ್ಯುತ್ತಮ ಕಡಲತೀರಗಳು, ಸಾಹಸ ತಾಣಗಳು ಮತ್ತು ಜಲಪಾತಗಳನ್ನು ಹೊಂದಿದೆ. ಕಾರವಾರ ಜಿಲ್ಲಾ ಕೇಂದ್ರವಾಗಿದ್ದು ಬೆಂಗಳೂರಿನ ವಾಯುವ್ಯಕ್ಕೆ 522 ಕಿ.ಮೀ. ದೂರದಲ್ಲಿದೆ. ಉತ್ತರ ಕನ್ನಡವು ದಾಂಡೇಲಿಯಲ್ಲಿ ರಾಫ್ಟಿಂಗ್ ಮತ್ತು ಪಕ್ಷಿ ವೀಕ್ಷಣೆ, ಮುರುಡೇಶ್ವರದಲ್ಲಿ ಸ್ಕೂಬಾ ಡೈವಿಂಗ್, ಉಳವಿ ಗುಹಾಂತರ ದೇವಾಲಯಗಳು, ಸಿಂಥೆರಿ ಬಂಡೆಗಳು, ಕುರುಮಗಡ ಮತ್ತು ಕಾರವಾರ ಕರಾವಳಿಯ ಇತರ ದ್ವೀಪಗಳು, ರಮಣೀಯ ಕಡಲತೀರಗಳು ಮತ್ತು ಐಷಾರಾಮಿ ಬೀಚ್ ರೆಸಾರ್ಟ್‌ಗಳು, ಅತ್ಯಂತ ಜನಪ್ರಿಯ ಇಡಗುಂಜಿ, ಮುರುಡೇಶ್ವರ ಮತ್ತು ಗೋಕರ್ಣ…
