ಸದಾಶಿವಗಡವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಒಂದು ಗ್ರಾಮ. ಗಮನಾರ್ಹ ಮತ್ತು ಆಕರ್ಷಕವಾಗಿರುವ ಇದು ಈಗ ಕಾಳಿ ನದಿ ಸೇತುವೆಯ ಸಮೀಪದಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾಗಿದೆ, ಇದನ್ನು ನದಿ ಮತ್ತು ಅರಬ್ಬಿ ಸಮುದ್ರದ ಸಂಗಮದಲ್ಲಿ ನಿರ್ಮಿಸಲಾಗಿದೆ.
ಭೌಗೋಳಿಕ ರಚನೆ
ಈ ಕೋಟೆಯನ್ನು ಕಾಳಿ ನದಿಯ ಉತ್ತರ ದಂಡೆಯಲ್ಲಿರುವ ಹಳೆಯ ಕೋಟೆಯ ಸ್ಥಳದಲ್ಲಿ ನಿರ್ಮಿಸಲಾಗಿದ್ದು ಇಲ್ಲಿ ಕಾಳಿ ಸಮುದ್ರವನ್ನು ಸೇರುತ್ತಾಳೆ. ಇದು ಸುಮಾರು 8 ಮೀಟರ್ ಎತ್ತರದ ಪ್ರಾಕಾರಗಳನ್ನು ಹೊಂದಿದ್ದು ಮೇಲ್ಭಾಗದಲ್ಲಿ ಸುಮಾರು 2 ಮೀಟರ್ ಅಗಲವಿತ್ತು. ಬಂದೂಕುಗಳಿಗಾಗಿ ಗೋಪುರಗಳು ಮತ್ತು ಕಿಂಡಿಗಳು ಇದ್ದವು. ಕೋಟೆಯು ಅತ್ಯುನ್ನತ ಹಂತದಲ್ಲಿತ್ತು. ಪಶ್ಚಿಮದಲ್ಲಿ, ಬಂಡೆಯ ಬುಡದಲ್ಲಿ ಸಮುದ್ರದ ಹತ್ತಿರ ಒಂದು ಹೊರದಾರಿ ಇತ್ತು ಮತ್ತು ಅದನ್ನು ‘ಪಾನಿ ಕಿಲ್ಲಾ’ ಎಂದು ಕರೆಯಲಾಯಿತು. ಪೂರ್ವದ ಇಳಿಜಾರಿನಲ್ಲಿ ಕೂಡ ಇನ್ನೊಂದು ಹೊರಹರಿವು ಇತ್ತು. ಕೋಟೆಯು ಒಂದೇ ಕಮಾನಿನ ದ್ವಾರವನ್ನು ಹೊಂದಿತ್ತು.




ಸಾಂವರ್ಗಡ್ ಒಂದು ಅತ್ಯಂತ ಚಿಕ್ಕ ಕೋಟೆಯಾಗಿದ್ದು, ಸದಾಶಿವಗಡದ ಪೂರ್ವದ ಗುಡ್ಡದ ಮೇಲೆ ಸುಮಾರು 60 ಮೀಟರ್ ಉದ್ದ ಮತ್ತು 20 ಮೀಟರ್ ಅಗಲವಾಗಿತ್ತು. ಇದು ಪೂರ್ವ ಮತ್ತು ಈಶಾನ್ಯದಲ್ಲಿ ಕೋಟೆಯ ಹಿಂಬದಿಯನ್ನು ಕಾಪಾಡುವ ಉಪ ಕೋಟೆಯಾಗಿತ್ತು. ಈಗ ಕೆಲವೇ ಕೆಲವು ಅವಶೇಷಗಳು ಉಳಿದಿವೆ.
1715 ರಲ್ಲಿ ಬಸವಲಿಂಗರಾಜ್ ಅವರು ಅವರ ತಂದೆ ಸದಾಶಿವಲಿಂಗರಾಜ್ ಅವರ ಹೆಸರಿನಲ್ಲಿ ಕೋಟೆಗೆ ಸದಾಶಿವಗಡ್ ಎಂದು ಹೆಸರಿಡಲಾಯಿತು. ಅವರು ಚಿತ್ತಾಕುಲ, ಸಿಂವೇಶ್ವರ (ಅಂಗಡಿ), ಕದ್ರಾ, ಕಡವಾಡ್, ಅಂಕೋಲಾ ಮತ್ತು ಕೆನರಾದ ಕೆಲವು ಭಾಗಗಳನ್ನು ಸೇರಿಸಿದ ನಂತರ ‘ರಾಜ’ ಎಂಬ ಬಿರುದನ್ನು ಪಡೆದು ಸೋಂದಾ ಸಂಸ್ಥಾನದ ಮುಖ್ಯಸ್ಥರಾಗಿದ್ದರು. ಹಳೆಯ ಕಾರವಾರ ಕೋಟೆಯನ್ನು ಕೆಡುವಿ ಅದರ ವಸ್ತುಗಳನ್ನು ಸದಾಶಿವಗಡವನ್ನು ನಿರ್ಮಿಸಲು ಬಳಸಲಾಯಿತು.
ಆರಂಭಿಕ ಇತಿಹಾಸ
ಪೋರ್ಚುಗೀಸರಿಗೆ ಸೇರಿದ್ದ ಸಿಂಟಕೋರಾ ಬಹಳ ಹಳೆಯ ಬಂದರು ಮತ್ತು ಇದನ್ನು ಚಿತ್ರಕುಲ್ (ಚಿತ್ತಕುಲ) ಮತ್ತು ಸಿಂಧಪುರ ಎಂದೂ ಕರೆಯಲಾಗುತಿತ್ತು. ಸದಾಶಿವಗಡವನ್ನು ಈ ಪ್ರದೇಶದಲ್ಲಿ ನಿರ್ಮಿಸಿದಾಗ, ಆ ಗ್ರಾಮವು ಆ ಹೆಸರಿನಿಂದ ಪ್ರಸಿದ್ಧವಾಯಿತು.

1510 ರಲ್ಲಿ ಪೋರ್ಚುಗೀಸರು ಈ ಸಿಂಟಕೋರಾವನ್ನು ವಶಪಡಿಸಿಕೊಂಡಾಗ ಅಲ್ಲಿ ಒಂದು ಕೋಟೆಯು ಅಸ್ತಿತ್ವದಲ್ಲಿತ್ತು ನಂತರ ಅದನ್ನು ಸುಟ್ಟುಹಾಕಲಾಯಿತು. ಅಲ್ಲಿ ಇ ಮೊದಲು ಮುಸ್ಲಿಂ ದರ್ಗಾ (ಸೂಫಿ ಸಂತ ಶಕರಮುದ್ದೀನ್ ಸಮಾಧಿ) ಇತ್ತು ಮತ್ತು ಅದನ್ನು ಪಿರ್ ಕೋಟೆ ಎಂದು ಕರೆಯಲಾಗುತಿತ್ತು. ಪೋರ್ಚುಗೀಸ್ ಭಾಷೆಯಲ್ಲಿ ಫೋರ್ಟೆ ಡಿ ಪಿರೊ ಅಥವಾ ಪಿಟೊ ಎಂದು ಕರೆಯಲಾಗುತಿತ್ತು.

ಕಾಳಿ ನದಿಯ ಮುಖಭಾಗದಲ್ಲಿರುವ ತೊರೆಯು ಆರಂಭದ ದಿನಗಳಿಂದ ವ್ಯಾಪಾರ ಕೇಂದ್ರವಾಗಿತ್ತು. ಸದಾಶಿವಗಡವನ್ನು ನಿರ್ಮಿಸಿದ ನಂತರ ಪೋರ್ಚುಗೀಸರು ಅದರ ಸಮೀಪದಲ್ಲಿರುವ ಬಂದರಿನ ಅನುಕೂಲಗಳನ್ನು ಅರಿತು ನಂತರದ ದಿನಗಳಲ್ಲಿ ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯಿತು.

ಆರಂಭಿಕ ವ್ಯಾಪಾರ
1638 ರಲ್ಲಿ ಪ್ರತಿಸ್ಪರ್ಧಿ ಆಂಗ್ಲ ವ್ಯಾಪಾರ ಸಂಸ್ಥೆ, ಕೋರ್ಟೀನ್ ಅಸೋಸಿಯೇಷನ್, ಕಾರವಾರದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಿತು. ಮಸ್ಲಿನ್ ಬಟ್ಟೆಯು ಖರಿದಿಯ ಮುಖ್ಯ ಸರಕಾಗಿತ್ತು ಆದರೆ ಕಾರವಾರವು ಮೆಣಸು, ಏಲಕ್ಕಿ, ಕ್ಯಾಸಿಯರ್ ಮತ್ತು ಒರಟಾದ ನೀಲಿ ಹತ್ತಿ ಬಟ್ಟೆಗೆ ಮುಖ್ಯ ಮೂಲವಾಗಿತ್ತು. ಭಾರತದ ಪಶ್ಚಿಮ ಕರಾವಳಿಯಲ್ಲಿ, ಗೋವಾದ ಆಗ್ನೇಯಕ್ಕೆ 50 ಮೈಲಿ ದೂರದಲ್ಲಿರುವ ಕಾರವಾರವು ತನ್ನ ಸುರಕ್ಷಿತ ಬಂದರಿಗೆ ಹೆಸರುವಾಸಿಯಾಗಿದೆ. 1649 ರಲ್ಲಿ ಕೋರ್ಟೀನ್ ಅಸೋಸಿಯೇಷನ್ ಕಂಪನಿಯೊಂದಿಗೆ ಒಗ್ಗೂಡಿತು ಮತ್ತು ಕಾರವಾರವು ಆಂಗ್ಲರ ಕಂಪನಿಯ ಕಾರ್ಖಾನೆಯಾಯಿತು.

ಮರಾಠರ ಪ್ರಭಾವ
ದಕ್ಷಿಣದ ಬೆಡ್ನೋರಿನಿಂದ ಮೆರವಣಿಗೆ ಹೊರಟ ನಂತರ ಗೋಕರ್ಣದ ಪವಿತ್ರ ದೇವಸ್ಥಾನಕ್ಕೆ ಭೇಟಿ ನೀಡಿದ ಶಿವಾಜಿ ಅಂಕೋಲಾವನ್ನು ವಶಪಡಿಸಿಕೊಂಡರು ಮತ್ತು ಮರುದಿನ ಕಾರವಾರಕ್ಕೆ ಬಂದರು (ಆಗ ಕಡವಾಡ ಎಂದು ಕರೆಯಲಾಗುತ್ತಿತ್ತು). ಈ ಬೆಳವಣಿಗೆಯಿಂದ ಈಸ್ಟ್ ಇಂಡಿಯಾ ಕಂಪನಿ ಮತ್ತು ಬಿಜಾಪುರದ ಸರ್ದಾರ್ ಶೇರ್ ಶಾ ಇಬ್ಬರೂ ತುಂಬಾ ಗಾಬರಿಗೊಂಡರು. ಅವರು ದೊಡ್ಡ ಮೊತ್ತವನ್ನು ಸಂಗ್ರಹಿಸಿದರು ಮತ್ತು ಅದನ್ನು ಶಿವಾಜಿಗೆ ಅರ್ಪಿಸಿದರು, ಅವರನ್ನು ಬಿಟ್ಟುಬಿಡುವುದಾಗಿ ಶಿವಾಜಿಯಲ್ಲಿ ವಿನಂತಿಸಿದರು. ತನ್ನ ಅಧಿಕಾರವನ್ನು ಬಲವನ್ನು ಅರಿತು ಸಂತೃಪ್ತನಾದ ಶಿವಾಜಿ ಕಾಳಿ ನದಿಯನ್ನು ದಾಟಿ ಸದಾಶಿವಗಡವನ್ನು 21 ಫೆಬ್ರವರಿ 1665 ರಂದು ವಶಪಡಿಸಿಕೊಂಡನು.


ಪೋರ್ಚುಗೀಸ್ ಮತ್ತು ಈಸ್ಟ್ ಇಂಡಿಯಾ ಕಂಪನಿ ನಿಯಮ
ಸೋಂದಾ ರಾಜನ ಹಗೆತನದಿಂದಾಗಿ, ಕಾರವಾರ ಕಾರ್ಖಾನೆಯನ್ನು 1720 ರಲ್ಲಿ ಮುಚ್ಚಲಾಯಿತು ಮತ್ತು 1750 ರವರೆಗೆ ಪುನಃ ತೆರೆಯಲಾಗಲಿಲ್ಲ. ಈ ಮಧ್ಯೆ ಪೋರ್ಚುಗೀಸರು ಮತ್ತು ಸೋಂದಾ ರಾಜರ ನಡುವೆ ಯುದ್ಧ ಪ್ರಾರಂಭವಾಯಿತು. ಸೋಂದಾದ ರಾಜ ಆಂಗ್ಲರಿಗೆ ಕಾರವಾರದಲ್ಲಿ ಕಾರ್ಖಾನೆ ಸ್ಥಾಪಿಸಲು ಸಹಾಯ ಮಾಡಿದ. ಇದು ಪೋರ್ಚುಗೀಸರಿಗೆ ಇಷ್ಟವಾಗಲಿಲ್ಲ. ಮೇ 1752 ರಲ್ಲಿ ಪೋರ್ಚುಗೀಸರು ನೌಕಾಪಡೆಯೊಂದನ್ನು ಕಳುಹಿಸಿ ಸೋಂದಾ ಕೋಟೆಯನ್ನು ಮತ್ತು ಸದಾಶಿವಗಡವನ್ನು ವಶಪಡಿಸಿಕೊಂಡರು. ನಂತರ ಪೋರ್ಚುಗೀಸರಿಗೆ ಭಟ್ಕಳದಲ್ಲಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡಿ ಶಾಂತಿಯನ್ನು ಪುನಃಸ್ಥಾಪಿಸಲಾಯಿತು. ಪೋರ್ಚುಗೀಸರು ಕಾರವಾರ ವ್ಯಾಪಾರದ ಏಕಸ್ವಾಮ್ಯವನ್ನು ಪ್ರತಿಪಾದಿಸಿದರು ಮತ್ತು ಅವರು ತಮ್ಮ ಹಕ್ಕನ್ನು ಜಾರಿಗೊಳಿಸುವ ಸ್ಥಿತಿಯನ್ನು ಹಾಗು ಶಕ್ತಿಯನ್ನು ಹೊಂದಿರುವುದರಿಂದ, ಇಂಗ್ಲಿಷ್ ಏಜೆಂಟರನ್ನು ಕೈಬಿಡಲಾಯಿತು.


ಮಂಗಳೂರು ಒಪ್ಪಂದದಲ್ಲಿ (1784) ಕಾರವಾರ ಮತ್ತು ಸದಾಶಿವಗಡವನ್ನು ಕಾರವಾರ (Carwar) ಮತ್ತು ಸದಾಸೇವಗುಡೆ (Sadasewgude) ಎಂದು ಬರೆಯಲಾಗಿದೆ.
ಕಾರವಾರವು 1862 ರ ದಾಖಲೆಗಳ ಪ್ರಕಾರ ಇದು ಬಾಂಬೆ ಪ್ರೆಸಿಡೆನ್ಸಿಯ ಅಡಿಯಲ್ಲಿ ಬರುತ್ತದೆ ಮತ್ತು ಕಾರವಾರ ಬಂದರನ್ನು ಬಾಂಬೆ ಮತ್ತು ಕೊಲಂಬೊ ನಡುವಿನ ಪ್ರಥಮ ದರ್ಜೆ ಬಂದರು ಎಂದು ಘೋಷಿಸಲಾಗಿತ್ತು.
ಪ್ರಸ್ತುತ ಸ್ಥಿತಿ
1783 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಜನರಲ್ ಮ್ಯಾಥ್ಯೂಸ್ ಅವರಿಂದ ಹೆಚ್ಚಿನ ಭಾಗವನ್ನು ಕೆಡವಿದ್ದರಿಂದ ಕೋಟೆಯು ಹಾಳಾಗಿದೆ. ಸದಶಿವಗಡ ಮತ್ತು ಅದರ ಉಪ ಕೋಟೆ ಸಂವರ್ಗಡ್ ನಡುವೆ ಈಗ ಮುಖ್ಯ ಹೆದ್ದಾರಿ ಹಾದುಹೋಗುತ್ತದೆ.
ಸದಾಶಿವಗಡ ಬೆಟ್ಟದ ಮಧ್ಯಭಾಗದಲ್ಲಿ ಹಲವು ಶತಮಾನಗಳಷ್ಟು ಹಳೆಯದಾದ ಸುಂದರವಾದ ಶಾಂತದುರ್ಗ ದೇವಸ್ಥಾನವಿದೆ ಮತ್ತು ಈ ದೇವಸ್ಥಾನವು ಅದರ ಪ್ರಶಾಂತತೆಗೆ ಹೆಸರುವಾಸಿಯಾಗಿದೆ. ಬೆಟ್ಟದ ಶಿಖರದಿಂದ ಅರೇಬಿಯನ್ ಸಮುದ್ರದಲ್ಲಿ ಸೂರ್ಯಾಸ್ತದ ನೋಟವು ಒಂದು ಅದ್ಭುತ ಅನುಭವ ಅನ್ನುವುದರಲ್ಲಿ ಎರಡು ಮಾತಿಲ್ಲ. 17 ನೇ ಶತಮಾನದ ದರ್ಗಾ ಕೂಡ ಸಾಕಷ್ಟು ಮುಸ್ಲಿಂ ಯಾತ್ರಾರ್ಥಿಗಳನ್ನು ಇಲ್ಲಿಗೆ ಆಕರ್ಷಿಸುತ್ತದೆ.

ಉತ್ತರಕ್ಕೆ ಸರಿಸುಮಾರು 2 ಕಿಮೀ ದೂರದಲ್ಲಿ ಶಿವೇಶ್ವರ ಎಂಬ ಹೆಸರಿನ ಗ್ರಾಮವಿದೆ, ಕೋಟ್ ಶಿವೇಶ್ವರ ಇದು ಕೋಟೆಯನ್ನು ಮತ್ತು (ಟಿಪ್ಪು ಸುಲ್ತಾನ್ ಮತ್ತು ಈಸ್ಟ್ ಇಂಡಿಯಾ ಕಂಪನಿ ನಡುವಿನ ಮಂಗಳೂರು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ, ಮತ್ತು ಹಿಂದಿನ ಐತಿಹಾಸಿಕ ಖಾತೆಗಳಲ್ಲಿ ಉಲ್ಲೇಖಿಸಲಾಗಿದೆ) ಉತ್ತರ ಗಡಿಗಳನ್ನು ರಕ್ಷಿಸಲು ಪ್ರತ್ಯೇಕವಾಗಿ ಪ್ರತಿಸ್ತಾಪಿಸಿದ ದೇವರಾಗಿದೆ.
ಇನ್ನೊಂದು ಪ್ರಮುಖ ಗ್ರಾಮ ಕಾಡ್ವಾಡ್ ಕಾಳಿ ನದಿಯ ಉಪನದಿಯ ದಡದಲ್ಲಿದೆ, ಇದರಿಂದ ‘ಕಾರವಾರ’ ಎಂಬ ಹೆಸರು ಬಂದಿದೆ. ಈ ಸ್ಥಳದಲ್ಲಿ ಬ್ರಿಟಿಷರು ಕಾರ್ಖಾನೆಯನ್ನು ಹೊಂದಿದ್ದರು ಮತ್ತು ಇದು ಹಿಂದಿನ ದಿನಗಳಲ್ಲಿ ಪ್ರಮುಖ ವ್ಯಾಪಾರ ಬಂದರು ಆಗಿತ್ತು. ಇದು ಹೆಚ್ಚಿನ ಅರೇಬಿಯಾ ಮತ್ತು ಆಫ್ರಿಕಾದ ಮುಸ್ಲಿಂ ವ್ಯಾಪಾರಿಗಳಿಂದ ಕುಡಿತ್ತು ಮತ್ತು ದೊಡ್ಡ ಮಸೀದಿಯನ್ನು ಹೊಂದಿತ್ತು.


ರಾಷ್ಟ್ರೀಯ ಹೆದ್ದಾರಿ NH-66 ಕಾಳಿ ನದಿಯ ಮೇಲೆ ನಿರ್ಮಿಸಿದ ಸೇತುವೆಯ ಮೇಲೆ ಮುಂದುವರಿಯುತ್ತದೆ ಮತ್ತು ರಸ್ತೆಯು ಸದಾಶಿವಗಡದ ಕೋಟೆ ಇರುವ ಗ್ರಾನೈಟ್ ಬೆಟ್ಟವನ್ನು ವಿಭಜಿಸಿ ಕರ್ನಾಟಕವನ್ನು ಗೋವಾಕ್ಕೆ ಸಂಪರ್ಕಿಸುತ್ತದೆ.

ಮಾಹಿತಿ ಮೂಲ: The Great Maratha Warrior Shivaji’s Karwar link
Treaty of Mangalore between Tipu Sultan and the East India Company, 11 March 1784


Leave a Reply