ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ಎಂಬಲ್ಲಿರುವ ಮಿರ್ಜಾನ್ ಕೋಟೆಯು ಕುಮುಟ-ಗೋಕರ್ಣ ರಾಷ್ಟ್ರೀಯ ಹೆದ್ದಾರಿ 66 (ಹಿಂದಿನ ರಾ.ಹೆ ಸಂಖ್ಯೆ 17)ರಲ್ಲಿ ಗೋಕರ್ಣದಿಂದ 9 ಕಿ.ಮೀ ದಕ್ಷಿಣಕ್ಕೆ ಹೆದ್ದಾರಿಯಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು ೦.5 ಕಿ.ಮೀ ದೂರದಲ್ಲಿ ಅಘನಾಶಿನಿ ನದಿಯ ಉಪನದಿಯಾದ ಕುದುರೆ ಹಳ್ಳದ(ಹೊಳೆ) ದಂಡೆಯ ಮೇಲೆ ನಿರ್ಮಾಣವಾಗಿದೆ. (ಕುಮಟಾದಿಂದ ಸುಮಾರು ಹತ್ತು(10) ಕಿ.ಮೀ. ದೂರ).
ರಾಜರ ಆಳ್ವಿಕೆ
1500ರ ದಶಕದಲ್ಲಿ ಮಿರ್ಜಾನ್ ಅನ್ನು ವಿಜಯನಗರದ ಸಾಮಂತರು ಆಳುತ್ತಿದ್ದರು. ಗೇರುಸೊಪ್ಪದ ಚೆನ್ನಭೈರದೇವಿಯು ಅತ್ಯಂತ ಪ್ರಸಿದ್ಧ ರಾಣಿ. ಆಕೆಯ ರಾಜ್ಯವು ಮೆಣಸಿನ ಬೆಳೆ ಬೆಳೆಯಯುವುದರಲ್ಲಿ ಹೆಸರು ಮಾಡಿತ್ತು. ಹಾಗಾಗಿ ಪೋರ್ಚುಗೀಸರು ಮೆಣಸಿನ ರಾಣಿ ಎಂದೇ ಕರೆಯುತ್ತಿದ್ದರು. ವಿಜಯ ನಗರದ ಸಾಮ್ರಾಜ್ಯವು ಕ್ಷೀಣಿಸಿದಾಗ ಬಿಜಾಪುರದ ಆದಿಲ್ ಶಾಹಿಗಳ ಕೈ ಸೇರಿತು. ಆ ನಂತರ ಮರಾಠರು, ಹೈದರಾಲಿ, ಟಿಪ್ಪು ಸುಲ್ತಾನ್ ಹಾಗೂ ಕೊನೆಯಲ್ಲಿ ಬ್ರಿಟಿಷರು ಇದನ್ನು ವಶಪಡಿಸಿಕೊಂಡರು.
ಕೋಟೆಯ ಸೊಬಗು
ಅಷ್ಟು ದೂರದಿಂದಲೇ ಕೋಟೆಯ ಆವರಣದ ಸೊಬಗು ಸೂಜಿಗಲ್ಲಂತೆ ಆಕರ್ಷಿಸಿಬಿಡುತ್ತದೆ. ಒಳಗಿನ ಸಿರಿ ಸವಿಯನ್ನಂತೂ ಒಳಹೊಕ್ಕೇ ಅನುಭವಿಸಬೇಕು! ಕೋಟೆಯ ಪ್ರವೇಶ ದ್ವಾರದ ಮೆಟ್ಟಿಲು ಹತ್ತಿ ಒಳಗೆ ಕಾಲಿಟ್ಟರೆ ವಿಸ್ಮಿತರಾಗುತ್ತೇವೆ. ಚೆಲುವ ಕೋಟೆಯ ಒಳ ಮನೆ ಎಲ್ಲ ಕಥೆಯನ್ನೂ ಬಿಡಿಸಿ ಬಿಡಿಸಿ ಹೇಳುವಂತೆ ಭಾಸವಾಗುತ್ತದೆ ಆಕರ್ಷಣೆ ಬಗ್ಗೆ ಎರಡು ಮಾತಿಲ್ಲ.
ಕೋಟೆಯ ಮಹತ್ವ
ಮಿರ್ಜಾನ್ ಕೋಟೆಯನ್ನು ಸುಮಾರು 500 ವರ್ಷಗಳ ಹಿಂದೆ ಪೋರ್ಚುಗೀಸರು, ಡಚ್ಚರು ಮತ್ತು ಫ್ರೆಂಚರು ಸಂಬಾರ ಪದಾರ್ಥಗಳ ಮಾರಾಟಕ್ಕೆ ವ್ಯಾಪಾರ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ನಂತರದ ದಿನದಲ್ಲಿ ಬ್ರಿಟಿಷರು ದೊಡ್ಡ ಗೋದಾಮವೊಂದನ್ನು ನಿರ್ಮಿಸಿದ್ದರು ಎನ್ನಲಾಗುತ್ತದೆ.









Leave a Reply