ಕೆನರಾ ಸರ್ಕಲ್ – 36 ಬಗೆಯ ಅರಣ್ಯಗಳು – ಉತ್ತರ ಕನ್ನಡದ ನೈಸರ್ಗಿಕ ಸಂಪತ್ತು

Posted by

·

  1. ಬಳ್ಳಾರಿ
  2. ಬೆಳಗಾವಿ
  3. ಬೆಂಗಳೂರು
  4. ಚಾಮರಾಜಮಗಾರ
  5. ಚಿಕ್ಕಮಗಳೂರು
  6. ಧಾರವಾಡ
  7. ಹಾಸನ
  8. ಕಲಬುರ್ಗಿ
  9. ಕೆನರಾ (ಉತ್ತರ ಕನ್ನಡ)
  10. ಕೊಡಗು
  11. ಮಂಗಳೂರು
  12. ಮೈಸೂರ್
  13. ಶಿವಮೊಗ್ಗ

ಹಳಿಯಾಳ ವಿಭಾಗದ ಬಗ್ಗೆ

ಹೊನ್ನಾವರ ವಿಭಾಗದ ಬಗ್ಗೆ

ನೇತ್ರಾಣಿ ದ್ವೀಪ, ಹೊನ್ನಾವರ

ಹೊನ್ನಾವರ ಅರಣ್ಯ ವಿಭಾಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿಯಲ್ಲಿದೆ. ಈ ವಿಭಾಗ ಭಟ್ಕಳ, ಹೊನ್ನಾವರ ಮತ್ತು ಕುಮಟಾ ತಾಲೂಕುಗಳನ್ನು ಮತ್ತು ಅಂಕೋಲಾ ತಾಲೂಕಿನ ಒಂದಿಷ್ಟು ಭಾಗವನ್ನು ಒಳಗೊಂಡಿದೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 1,40,901 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ಸುಮಾರು 71 ವಿಸ್ತಾರವಾಗಿದೆ (1,925.26 ಚ.ಕಿ.ಮೀ.) ವಿಭಾಗ ಕರಾವಳಿ ಪ್ರದೇಶಗಳು ಮತ್ತು ಘಟ್ಟ ಪ್ರದೇಶಗಳು ಎರಡನ್ನೂ ಹೊಂದಿದೆ. ಶರಾವತಿ, ಅಘನಾಶಿನಿ ಮತ್ತು ಗಂಗಾವಳಿ ವಿಭಾಗದಲ್ಲಿ ಹರಿಯುವ ಪ್ರಮುಖ ಮೂರು ನದಿಗಳಾಗಿದ್ದು, ಅರಬ್ಬಿ ಸಮುದ್ರಕ್ಕೆ ಸೇರುತ್ತವೆ. ಈ ವಿಭಾಗ ವಾರ್ಷಿಕ ಸರಾಸರಿ 3,500 ಮಿ.ಮೀ. ನಿಂದ 4,000 ಮಿ.ಮೀ. ಮಳೆ ಪಡೆಯುತ್ತದೆ. ಇದು ಹೊನ್ನಾವರ, ಭಟ್ಕಳ ಮತ್ತು ಕುಮಟಾ ಈ ಮೂರು ಉಪ ವಿಭಾಗಗಳನ್ನು ಹೊಂದಿದೆ, ಹಾಗೇ ಭಟ್ಕಳ, ಮಂಕಿ. ಹೊನ್ನಾವರ, ಗೆರುಸೊಪ್ಪಾ, ಕುಮಟಾ, ಕತಗಾಲ ಮತ್ತು ಹಿರೇಗುತ್ತಿ ಈ ಏಳು ವಲಯಗಳನ್ನು ಹೊಂದಿದೆ. ಈ ವಿಭಾಗ 28 ಸೆಕ್ಷನ್‌ಗಳು ಮತ್ತು 79 ಬೀಟ್‌ಗಳನ್ನು ಹೊಂದಿದೆ. ಹೊನ್ನಾವರ ಮತ್ತು ಕತಗಾಲದಲ್ಲಿ ಎರಡು ಟಿಂಬರ್‌ ಡಿಪೋಗಳಿವೆ. ಹೊನ್ನಾವರ ಉಪ ವಿಭಾಗ ಮೂಲತಃ ಅರೆ ನಿತ್ಯ ಹಸಿರು, ನಿತ್ಯಹಸಿರು ಮತ್ತು ಉಪ ತೇವಾಂಶ ಭರಿತ ಎಲೆಯುದುರುವ ಕಾಡುಗಳನ್ನು ಹೊಂದಿದೆ. ಕರಾವಳಿ ಪ್ರದೇಶಗಳಲ್ಲಿ ಒಂದಿಷ್ಟು ಕಾಂಡ್ಲಾ ವನಗಳಿವೆ.

ಕರ್ನಾಟಕದ ಕಾಡುಗಳು ಮತ್ತು ಸಸ್ಯಸಂಪತ್ತು

ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ.

ಅರಣ್ಯ ವಿಧಗಳು

ಕರ್ನಾಟಕದಲ್ಲಿ ಮುಖ್ಯವಾಗಿ ಎಲೆ ಉದುರುವ ಹಾಗೂ ನಿತ್ಯ ಹರಿದ್ವರ್ಣ ಕಾಡುಗಳಿವೆ. ಎಲೆ ಉದರುವ ಕಾಡುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲೆ ಉದುರುವ ಲಕ್ಷಣಗಳನ್ನು ಹೊಂದಿದ ಮರಗಳು ಹಾಗೂ ನಿತ್ಯ ಹರಿದ್ವರ್ಣ ಅರಣ್ಯಗಳಲ್ಲಿ ಯಾವಾಗಲೂ ಹಸಿರಾಗಿರುವಂತಹ ಮರಗಳನ್ನು ಹೊಂದಿರುತ್ತವೆ. ಎಲೆ ಉದುರುವ ಮರಗಳು ಪ್ರತೀ ವರ್ಷ ಒಂದು ನಿರ್ಧಿಷ್ಟ ಕಾಲದಲ್ಲಿ ಎಲ್ಲಾ ಎಲ್ಲೆಗಳನ್ನು ಕೆಲವು ದಿನಗಳಿಂದ ಹಿಡಿದು ತಿಂಗಳವರೆಗೆ ಉದುರಿಸುತ್ತವೆ. ಉಷ್ಣವಲಯದ ಎಲೆ ಉದುರುವ ಕಾಡುಗಳಲ್ಲಿ ಮಣ್ಣಿನಲ್ಲಿ ನೀರಿನ ಲಭ್ಯತೆಯ ಮೇಲೆ ಎಲೆ ಉದುರುವಿಕೆ ಲಕ್ಷಣೆಗಳು ಅವಲಂಬಿಸಿರುತ್ತದೆ. ನಿತ್ಯ ಹರಿದ್ವರ್ಣ ಮರಗಳು ಸಹಿತ ಎಲೆ ಉದುರುವಿಕೆ ಹೊಂದಿರುತ್ತವೆ ಆದರೆ ಎಲ್ಲಾ ಎಲೆಗಳನ್ನು ಒಂದೇ ಕಾಲದಲ್ಲಿ ಉದುರಿಸುವುದಿಲ್ಲ. ಆದ್ದರಿಂದ ವರ್ಷದಲ್ಲಿ ಯಾವಗಲೂ ಎಲೆಗಳನ್ನು ಹೊಂದಿರುವಂತೆ ಕಾಣುತ್ತವೆ. ರಾಜ್ಯದ ಒಣಪ್ರದೇಶಗಳಲ್ಲಿ ಮತ್ತು ಅವನತಿ ಹೊಂದಿದ ಅರಣ್ಯ ಪ್ರದೇಶಗಳಲ್ಲಿ ಮುಳ್ಳಿನ ಜಾತಿಯ ಗಿಡಗಂಟುಗಳು ಹೆಚ್ಚಿರುತ್ತವೆ. ಆ ಪ್ರದೇಶದ ಕಠಿಣ ಪ್ರರಿಸ್ಥಿತಿಗಳಿಗೆ ಹೊಂದಿಕೊಳ್ಳಲು, ನೀರು ಮತ್ತು ಶಕ್ತಿಯನ್ನು ಸಂರಕ್ಷಿಸಿಕೊಳ್ಳಲು ಹಾಗೂ ಸಸ್ಯಹಾರಿ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಮರಗಳು ಈ ರೀತಿಯಾಗಿ ರೂಪಾಂತರಗೊಳ್ಳುತ್ತವೆ.

ಕರ್ನಾಟಕ ರಾಜ್ಯದಲ್ಲಿ ನಿತ್ಯ ಹರಿದ್ವರ್ಣ, ಅರೆ ನಿತ್ಯ ಹರಿದ್ವರ್ಣ, ತೇವಭರಿತ ಎಲೆ ಉದುರುವ, ಒಣ ಎಲೆ ಉದುರುವ ಹಾಗೂ ಮುಳ್ಳಿನ ಕಾಡುಗಳಂತಹ ಉಷ್ಣವಲಯದ ಪ್ರಮುಖ ಕಾಡುಗಳ ಜೊತೆಗೆ ಕೆಲವು ವಿಶೇಷವಾದ ಅರಣ್ಯಗಳನ್ನು ನೋಡಬಹುದು. ಇವುಗಳಲ್ಲದೇ ಹುಲ್ಲುಗಾವಲಿನಿಂದ ಆವೃತ್ತವಾದ ಶೋಲಾ ಅರಣ್ಯ, ಕಾಂಡ್ಲವನ, ಮಿರಿಸ್ಟಿಕಾ ಜೌಗು ಅರಣ್ಯ, ಕಮರಾ ಅರಣ್ಯ (ಹಾರ್ಡ್ವಿಕಿಯಾ ಬಿನಾಟಾ), ಧೂಪ (ಬೋಸ್ವಿಲಿಯಾ ಸೆರಾಟಾ) ಮತ್ತು ಜಾಲಾರಿ (ಶೊರಿಯಾ ತಲುರಾ), ಕೊಡಗು ಜಿಲ್ಲೆಯ ದೇವರಕಾಡುಗಳು, ಮೈಸೂರು ಮತ್ತು ಕೊಡಗು ಜಿಲ್ಲೆಯ ಹಡ್ಲು, ಸೊರಬ, ಸಾಗರ ಮತ್ತು ಬನವಾಸಿ ತಾಲೂಕುಗಳ ಕಾನ್ಸ್ ಮುಂತಾದವುಗಳನ್ನು ಸಹ ಕಾಣಬಹುದು.

ಅರಣ್ಯ ವಿಧಗಳ ಶೀರ್ಷಿಕೆಗಳು

1) ದಕ್ಷಿಣ ಉಷ್ಣವಲಯದ ತೇವಭರಿತ ನಿತ್ಯ ಹರಿದ್ವರ್ಣ ಅರಣ್ಯ
2) ದಕ್ಷಿಣ ಗಿರಿಶಿಖರ ಉಷ್ಣವಲಯದ ನಿತ್ಯ ಹರಿದ್ವರ್ಣ ಕಾಡು
3) ದಕ್ಷಿಣ ಉಪ ಉಷ್ಣವಲಯದ ಬೆಟ್ಟದ ಅರಣ್ಯ
4) ದಕ್ಷಿಣ ಭಾರಗದ ಉಪ ಉಷ್ಣವಲಯದ ಬೆಟ್ಟದ ಹುಲ್ಲು ಕಾಡು
5) ಮಿರಿಸ್ಟಿಕಾ ಜೌಗು ಪ್ರದೇಶ
6) ಬೆತ್ತದ ಪ್ರದೇಶ
7) ತೇವಭರಿತ ಬಿದಿರು ಪ್ರದೇಶ
8) ಒಕ್ಲಾಂಡ್ರಾ ಜೊಂಡು ಪ್ರದೇಶ
9) ಪ್ರವರ್ತಕ ಯುಫೋಬೇಷಿಯಸ್ ಕುರುಚಲು ಕಾಡು
10) ಕಾಂಡ್ಲ ಅರಣ್ಯ
11) ದಕ್ಷಿಣ ಉಷ್ಣವಲಯದ ಅರೆ ನಿತ್ಯ ಹರಿದ್ವರ್ಣ ಅರಣ್ಯ
12) ಪಶ್ಛಿಮ ಕರಾವಳಿ ದ್ವಿತೀಯ ನಿತ್ಯ ಹರಿದ್ವರ್ಣ ಡಿಪ್ಟೆರೋಕಾಪರ್ಸ ಅರಣ್ಯ
13) ಲ್ಯಾಟರೈಟಿಕ್ ಅರೆ ನಿತ್ಯ ಹರಿದ್ವರ್ಣ ಕಾಡು
14) ತೇವಭರಿತ ಬಿದಿರು ಪ್ರದೇಶಗಳು
15) ದಕ್ಷಿಣ ವಲಯದ ಆದ್ರಎಲೆಉದುರುವ ತೇಗದ ಮರಗಳ ಕಾಡು
16) ಅತಿತೇಂವಾಶದ ತೇಗದ ಮರಗಳ ಕಾಡು
17) ತೇವಾಂಶದ ತೇಗದ ಮರಗಳ ಕಾಡು
18) ಸ್ವಲ್ಪ ತೇವಾಂಶದ ತೇಗದ ಮರಗಳ ಕಾಡು
19) ದಕ್ಷಿಣ ತೇವಾಂಶದ ಎಲೆ ಉದುರುವ ಮಿಶ್ರ ಕಾಡು
20) ದಕ್ಷಿಣ ದ್ವಿತೀಯ ತೇವ ಭರಿತ ಮಿಶ್ರ ಎಲೆ ಉದುರುವ ಕಾಡು
21) ನದಿತೊರೆಗಳ ಕಾಡು
22) ಒಣ ತೇಗದ ಮರಗಳಿರುವ ಕಾಡು
23) ಅತೀ ಒಣ ತೇಗದ ಅರಣ್ಯ
24) ಒಣ ತೇಗದ ಕಾಡು
25) ದಕ್ಷಿಣ ಒಣ ಮಿಶ್ರ ಎಲೆ ಉದುರುವ ಕಾಡು
26) ಬೊಸ್ವೇಲೀಯ ಕಾಡು
27) ಕಮರಾ ಕಾಡು
28) ಒಣ ಬಿದಿರು ಪ್ರದೇಶ
29) ಎಲೆ ಉದುರುವ ಒಣ ಕುರುಚಲು ಕಾಡು
30) ಮರಗಳಿಂದ ಕೂಡಿದ ಹುಲ್ಲುಗಾವಲು ಒಣ ಕಾಡು
31) ಉಷ್ಣ ವಲಯದ ಒಣ ನದಿ ತೊರೆಗಳ ಕಾಡು
32) ದ್ವಿತೀಯ ಒಣ ಎಲೆ ಉದುರುವ ಕಾಡು
33) ಯುಪೋಬಿಯ ಕುರುಚಲು ಕಾಡು
34) ಲ್ಯಾಟರೈಟಿಕ್ ಕುರುಚಲು ಅರಣ್ಯ
35) ಒಣ ಹುಲ್ಲುಗಾವಲು
36) ದಕ್ಷಿಣ ಮುಳ್ಳಿನ ಕಾಡು
37) ದಕ್ಷಿಣ ಮುಳ್ಳಿನ ಕುರುಚಲು ಕಾಡು
38) ದಕ್ಷಿಣ ಯುಪೋಬಿಯ ಕುರುಚಲು ಕಾಡು

ಮಾಹಿತಿ: ಕರ್ನಾಟಕ ಅರಣ್ಯ ಇಲಾಖೆ ಜಾಲತಾಣ

https://www.youtube.com/watch?v=OsWcZnRPE6w


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading