ಶಿರಸಿಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಸೋಮಸಾಗರದಲ್ಲಿ ಈ ಸೋಮೇಶ್ವರ ಮಂದಿರವಿದೆ. ಸಿದ್ದಾಪುರ ರಸ್ತೆಯ ಕಾನಗೋಡದಿಂದ ಬಲಗಡೆ ತಿರುಗಿದರೆ 3 ಕಿಲೋಮೀಟರ್ ದೂರದಲ್ಲಿ ದೇವಾಲಯವಿದ್ದು, ಇತಿಹಾಸ ಸಂಶೋಧಕರಿಗೆ ಸೂಕ್ತ ಸ್ಥಳ. ಸುಮಾರು 17ನೇ ಶತಮಾನದಲ್ಲಿ ಇದರ ನಿರ್ಮಾಣವಾಗಿರಬಹುದೆಂದು ಅಂದಾಜಿಸಲಾಗಿದೆ.
ಈ ದೆವಾಲಯವು ಕ್ರಿ.ಶ. 17 ನೇ ಶತಮಾನದಲ್ಲಿ ನಿರ್ಮಾಣವಾಗೊಂಡಿದ್ದು, ತಲವಿನ್ಯಾಸದಲ್ಲಿ ಗರ್ಭಗ್ರಹ, ಅಂತರಾಳ ಮತ್ತು ನವರಂಗದಿಂದ ಕೂಡಿದೆ.
ಅಂತರಾಳದ ದ್ವಾರವು ಅಲಂಕೃತ ಶಿಲ್ಪಗಳಿಂದ ಕೂಡಿದ್ದು ಎರಡೂ ಬದಿಯಲ್ಲಿ ಗೋಡೆಗೆ ಅಂಟಿಕೊಂಡಂತೆ ದೇವಕೋಷ್ಟಗಳಿವೆ. ನವರಂಗದಲ್ಲಿ ನಯಗೊಳಿಸಿದ ನಾಲ್ಕು ಕಂಬಗಳಿವೆ. ನವರಂಗದ ಮೇಲಿನ ವಿತಾನವು ಅಷ್ಟದಿಕ್ಪಾಲಕರ ವಿಗ್ರಹಗಳಿಂದ ಕೂಡಿದ್ದು ಮಧ್ಯಭಾಗದಲ್ಲಿ ಕಮಲದ ಕೆತ್ತನೆಯನ್ನು ಕಾಣಬಹುದು. ಕಕ್ಷಾಸನದ ಹೊರಭಾಗವು ಪಕ್ಷಿ, ಸಂಗೀತಕಾರರು, ಕಮಲ ಮತ್ತು ಮಿಥುನ ಶಿಲ್ಪಗಳಿಂದ ಅಲಂಕೃತಗೊಂಡಿದೆ.
ಮಾಹಿತಿ: ಪರಮಾನಂದ ಹೆಗಡೆ, Sirsi OnLine



Leave a Reply