ಹುಸೂರು ಅಣೆಕಟ್ಟು:
ಹುಸೂರು ಅಣೆಕಟ್ಟು ಇದು ಸಿದ್ದಾಪುರ ತಾಲೂಕಿನ ಸುಂದರ ಪ್ರವಾಸಿ ತಾಣವಾಗಿ ಮಾರ್ಪಾಟ್ಟಿದೆ ಮತ್ತು ಇದು ಸಿದ್ದಾಪುರದಿಂದ ಜೋಗಪಾತಕ್ಕೆ ಹೋಗುವ ಮಾರ್ಗದಲ್ಲಿ ಹಲಗೇರಿ ಗ್ರಾಮದ ಒಳಗೆ 1 ಕಿ.ಮೀ ದೂರದಲ್ಲಿದೆ.

ನೀವು ಸಾಗರದಿಂದ ಜೋಗ್‌ಫಾಲ್ಸ್‌ಗೆ ಪ್ರಯಾಣಿಸುತ್ತಿದ್ದರೆ, ನೀವು ಆಡುಕಟ್ಟಾದಿಂದ ಹಲಗೇರಿಗೆ ಹೋಗುವ ರಸ್ತೆಯ ಮೂಲಕ ಹಾದುಹೊಗುವಿರಿ.

ಈ ಅಣೆಕಟ್ಟನ್ನು ನಿರ್ಮಿಸುವ ಉದ್ದೇಶವು ಸುತ್ತಮುತ್ತಲಿನ ಹಳ್ಳಿಗಳ ಕೃಷಿ ಅಗತ್ಯಗಳನ್ನು ಪೂರೈಸುವುದಾಗಿದೆ.

ಈ ಅಣೆಕಟ್ಟು 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡಿದೆ. ಇದು ಶಾಂತ ಮತ್ತು ಸುಂದರ ಸ್ಥಳವಾಗಿದ್ದು ಭೇಟಿ ನೀಡಲು ಸೂಕ್ತವಾಗಿದೆ.

ನಿಪ್ಲಿ ಜಲಪಾತ:
ಹುಸೂರ್ ಅಣೆಕಟ್ಟಿನ ಹಿಂಭಾಗದ ನೀರು ಚಿಕ್ಕ ಚಿಕ್ಕ ವಾಟರ್ ಫಾಲ್ಸ್ ಗಳನ್ನು ಸೃಷ್ಟಿ ಮಾಡಿದೆ ಇದನ್ನು ನಿಪ್ಲಿ ಜಲಪಾತ ಅಥವಾ ಹುಸೂರ್ ಜಲಪಾತಗಳು ಎಂದು ಕರೆಯುತ್ತಾರೆ.

ಪ್ರತಿ ವರ್ಷ ಇಲ್ಲಿಗೆ ಸಾಕಷ್ಟು ಪ್ರವಾಸಿಗರು ಬರುತ್ತಾರೆ. ಈ ಜಲಪಾತದಲ್ಲಿ ಯಾವುದೇ ಭಯವಿಲ್ಲದೆ ನಡೆಯಬಹುದು, ಆಡಬಹುದು ಮತ್ತು ಸ್ನಾನ ಮಾಡಬಹುದು.




ಮಾಹಿತಿ: ಸುಗ್ಗಿ ಸಂಪದ


Leave a Reply