Category: ಕಲೆ
-
ಬೇಕೇ ಬೇಕಣ್ಣ, ಗುಮಟೆ ಪದ – 1
ನೀರು ಹರಿಯಾಲೆ ಬೇಕು ಮರವು ಚಿಗುರಾಲೆ ಬೇಕುದಾರಿಗೊಂದು ನೆರಳಿರಬೇಕೇ ಬೇಕಣ್ಣನೀರು ಕುಡಿಯಲು ಬೇಕು ಗಾಳಿ ಪರಾಣ್ಕೆ ಬೇಕುಬೆಂಕಿ ಉರಚೂಕೆ ಬೇಕೇ ಬೇಕಣ್ಣಬೂಮಿ ಆದರ್ಕೆ ಬೇಕು ಮನೆಯು ಉಳಿಯಲು ಬೇಕುಅನ್ನ ಉಣ್ಣಲು ಬೇಕೇ ಬೇಕಣ್ಣ ಹೆಳ್ಳಿಯೊಳಗೆ ಸಾಲೀಬೇಕು ಸಾಲಿಗೊಬ್ಬ ಮಾಸ್ತರ ಬೇಕುಸಾಲೆ ತುಂಬ ಮಕ್ಕಳು ಬೇಕೇ ಬೇಕಣ್ಣದೊಡ್ಡಾಲಿಯ ಮನಿಯೆಬೇಕು ಗಂಡ ಹಿಂಡರು ಬೇಕುಮೊಕ್ದಮುಂದೆ ಮಕ್ಕಳು ಬೇಕೇ ಬೇಕಣ್ಣಅತ್ತೆ ಉಳಿಯಾಲೆಬೇಕು ಸೊಸೆ ಇರಲೇ ಬೇಕುಅತ್ತೆ ಸೊಸೆಗು ಜಗಳಾವು ಬೇಕೇ ಬೇಕಣ್ಣ ವಿ. ಗ. ನಾಯಕ… ಸಂಪಾದಕರು, ಗುಮಟೆಯ ಪದಗಳು, ಪದ್ಯ…
-
ರಂಗೋಲಿಯ ಮಹತ್ವ
“ರಂಗೋಲಿ” ಎಂಬುದು ರಂಗವಲ್ಲಿ ಎಂಬ ಪದದ ತದ್ಭವ. ಅದು ಭಾರತೀಯ ಸಂಪ್ರದಾಯಕ್ಕೆ ಸೇರಿದ ಗೃಹಾಲಂಕಾರದ ಒಂದು ಜಾನಪದ ಕಲೆ. ಹಳ್ಳಿಗಳಲ್ಲಿ ಇದನ್ನು ಹಸೆ, ಹಲಿ ಎಂದು ಹೇಳುತ್ತಾರೆ. ಕಾವ್ಯಗಳಲ್ಲಿ ಕಡೆ, ಕಡೆಯ, ಪೂವರಿ ಎಂಬ ಶಬ್ದಗಳಿಂದ ನಿರೂಪಿಸಿರುವುದು ಕಂಡು ಬರುತ್ತದೆ. ಇದಕ್ಕೆ ತಮಿಳರಲ್ಲಿ ಕೋಲಂ ಎಂದೂ ಬಂಗಾಲದಲ್ಲಿ ಆಲ್ಪನಾ ಎಂದೂ ಬೇರೆ ಬೇರೆ ಹೆಸರುಗಳಿವೆ. ಅಕ್ಕಿಹಿಟ್ಟು ಅಥವಾ ಬೆಣಚುಕಲ್ಲಿನ ಪುಡಿಯಿಂದ ನಾನಾತರದ ಬಳ್ಳಿ, ಅಲಂಕಾರಿಕ ನಕ್ಷೆ, ಮರ, ಪಕ್ಷಿಗಳನ್ನು ಮನೆಯ ಮುಂದೆ ರಂಗೋಲಿಯಾಗಿ ಬಿಡಿಸುತ್ತಾರೆ. ಬಣ್ಣ ಹಾಕುವುದೂ…
-
ಸಿದ್ದಿಯರ ಕುಣಿತಗಳು
ದಕ್ಷಿಣ ಆಫ್ರಿಕಾ ಮೂಲದ ಸಿದ್ದಿಗಳು ಪೋರ್ಚುಗೀಸರ ಕಾಲದಲ್ಲಿ ಗೋವಾದ ಮೂಲಕ ಕರ್ನಾಟಕ ತಲುಪಿದವರು. ಪೋರ್ಚುಗೀಸರ ಕಾಲದಲ್ಲಿ ಗುಲಾಮರಾಗಿ ಸಾಗಿಸಲಾದ ಇವರು ಇದೀಗ ಉತ್ತರ ಕನ್ನಡದ ಅನೇಕ ತಾಲ್ಲೂಕುಗಳಲ್ಲಿ ಕಂಡು ಬರುತ್ತಾರೆ. ಮುಖ್ಯವಾಗಿ ಯಲ್ಲಾಪುರ ತಾಲೂಕಿನಲ್ಲಿ ಹೆಚ್ಚಾಗಿ ಕಾಣಿಸುತ್ತಾರೆ. ದಕ್ಷಿಣ ಆಫ್ರಿಕಾ ಮೂಲದವರಾದ ಸಿದ್ದಿಯವರು ಸಹಜವಾಗಿಯೇ ನಿಗ್ರೋಯಿಡ್ ಸಂತತಿಯ ಮೈಕಟ್ಟು, ಬಲಾಢ್ಯ ದೇಹ ಹೊಂದಿದವರಾಗಿದ್ದಾರೆ. ಮಿರುಗುವ ಕಪ್ಪು ಬಣ್ಣ ಗುಂಗುರು ಕೂದಲು, ದಪ್ಪ ತುಟಿ, ಮೊಂಡು ಮೂಗು ಇವು ಅವರ ಮುಖ್ಯ ಚಹರೆಗಳು. ಇದೀಗ ಇವರು ಇಸ್ಲಾಂ ಧರ್ಮ,…
